ಬೆಂಗಳೂರು : ಹಾಸನ ಸಂಸದ ಪ್ರಜ್ಬಲ್ ರೇವಣ್ಣ ರೇವಣ್ಣ ವಿರುದ್ದ ಎಸ್ಐಟಿ ತಂಡ ತನಿಖೆಯನ್ನು ಭರದಿಂದ ನಡೆಸ್ತಿದೆ.‌ ಮತ್ತೊಂದೆಡೆ ರೇವಣ್ಣರಿಂದ ಮತ್ತೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ. ಪ್ರಜ್ವಲ್ ರೇವಣ್ಣ ನಡೆ ಇನ್ನೂ ನಿಗೂಢ. ಎರಡನೇ ಎಫ್ಐಆರ್ ಸಂಬಂಧ ಸಾಕ್ಷಿ ಕಲೆ ಹಾಕುತ್ತಿರೋ ಎಸ್ಐಟಿ ಟೀಂ. ಇಡೀ ಪ್ರಕರಣದ ಇವತ್ತಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.


COMMERCIAL BREAK
SCROLL TO CONTINUE READING

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ವಿರುದ್ದ ತನಿಖೆ ಕೈಗೊಂಡಿರೋ ಎಸ್ಐಟಿ ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದ ಎಸ್ಐಟಿ ತಂದೆ ಮಗನಿಗೆ ವಿಚಾರಣೆಗೆ ಹಾಜರಾಗುವಂತೆ ಇಂದು ಮೂರನೇ ನೋಟಿಸ್ ಜಾರಿ ಮಾಡಿದೆ. ಇದ್ರ ನಡುವೆ ಹೊಳೆನರಸೀಪುರದಲ್ಲಿ ದಾಖಲಾಗಿರೋ ಪ್ರಕರಣದಲ್ಲಿ ನಾನ್ ಬೇಲೆಬಲ್ ಸೆಕ್ಷನ್ ಗಳಿಲ್ಲ ಅನ್ನೋ ಕಾರಣಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ಸು ಪಡೆದಿದ್ರು. 


ಇದನ್ನೂ ಓದಿ:ಎಣ್ಣೆ ಪಾರ್ಟಿ ನಡುವೆ ಸ್ನೇಹಿತರ ಮಧ್ಯೆ ಕಿರಿಕ್..! ಮೂರನೇಯವನ ಎಂಟ್ರಿ.. ಚಾಕು ಇರಿದು ಒಬ್ಬನ ಕೊಲೆ


ಆದ್ರೆ, ಕೆ.‌ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೊ ಎಫ್ಐಆರ್ ನಲ್ಲಿ ನಾನ್ ಬೇಲಾಬಲ್ ಸೆಕ್ಷನ್ಸ್ ಇರೋದ್ರಿಂದ ಬಂಧನ ಭೀತಿಯಿಂದಾಗಿ ಮತ್ತೆ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ರು. ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ ಎಸ್ಐಟಿ ಪರ ವಾದ ಮಂಡಿಸುತ್ತಿರೊ ಎಸ್ ಪಿಪಿಗೆ ನೊಟೀಸ್ ನೀಡಿ ಮುಂದಿನ ವಿಚಾರಣೆ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದೆ.


ಅಹವಾಲು ನೀಡಲು ಹೋದ ಸಂಸತ್ರಸ್ಥೆಗೆ ಗನ್ ತೋರಿಸಿ ಅತ್ಯಾಚಾರ : ಮತ್ತೊಂದೆಡೆ ಸಿಐಡಿಯಲ್ಲಿ ದಾಖಲಾಗಿರೋ ಎರಡನೇ ಎಫ್ಐಆರ್ ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಎಸಗಿರೋ ನೀಚ ಕೃತ್ಯದ ಬಗ್ಗೆ ಸಂತ್ರಸ್ಥೆ ಗಂಭೀರ ಆರೋಪ ಮಾಡಿದ್ದಾಳೆ. ಕ್ಷೇತ್ರದ ಅಭಿವೃದ್ದಿ ಕೆಲಸಗಳ ಬಗ್ಗೆ ಅಹವಾಲು ಸಲ್ಲಿಸಲು ಹೋದಾಗ ಅವ್ರ ಗೆಸ್ಟ್ ಹೌಸ್ ನಲ್ಲಿ ನನಗೆ ಗನ್ ತೋರಿಸಿ ಬೆದರಿಕೆ ಹಾಕಿದ್ರು. ಬಳಿಕ ತನ್ನ ಪತಿಯನ್ನ ಕೊಲೆ‌ ಮಾಡೋದಾಗಿ ಬೆದರಿಕೆ ಹಾಕಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ.


ಇದನ್ನೂ ಓದಿ:ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ 400 ಸ್ಥಾನ ಗೆಲ್ಲುತ್ತದೆ


ಅಷ್ಟೇ ಅಲ್ಲದೆ ಅತ್ಯಾಚಾರದ ದೃಶ್ಯಗಳನ್ನ ಮೊಬೈಲ್ ನಲ್ಲಿ‌ ಸೆರೆ ಹಿಡಿದು, ಬ್ಲಾಕ್ ಮೇಲ್ ಮಾಡೊ‌ಮೂಲಕ‌ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ವಿಡಿಯೋ ಕಾಲ್ ಮಾಡಿ ನಗ್ನವಾಗುವಂತೆ ಬೆದರಿಕೆ ಹಾಕುತ್ತಿದ್ರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆ ಹಿನ್ನೆಲೆ ಇಂದು ಬೆಳ್ಳಬೆಳಗ್ಗೆ ಹಾಸನದ ಎಂಪಿ ಗೆಸ್ಟ್ ಹೌಸ್, 


ಬೆಂಗಳೂರಿನ ಬಸವನಗುಡಿಯಲ್ಲಿರುವ ಮನೆ, ಹೊಳೆನರಸೀಪುರದ ಪಡುವಲಹಿಪ್ಪೆಯ ಫಾರ್ಮ್ ಹೌಸ್,ಸೂರಜ್ ರೇವಣ್ಣ ಗೆ ಸೇರಿದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಮಹತ್ವದ ಸಾಕ್ಷಿ ಕಲೆ ಹಾಕಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ‌ ನಡುವೆ ಎಸ್ಐಟಿ ಮುಂದೆ ವಕೀಲ ದೇವರಾಜೇಗೌಡ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ದಾಖಲೆಗಳನ್ನ ನೀಡಿದ್ದು, ಮಹಿಳೆಯರ ಮಾನ ಹರಾಜು ಮಾಡಿರುವ ಕಿಡಿಗೇಡಿಗಳ ವಿರುದ್ದ ಕ್ರಮಜರುಗಿಸುವಂತೆ ಮನವಿ‌ಮಾಡಿದ್ದಾರೆ. ಇನ್ನೊಂದೆಡೆ ಪ್ರಜ್ವಲ್ ರೇವಣ್ಣ ಸಹ ಇನ್ನು ವಿಚಾರಣೆಗೆ ಹಾಜರಾಗದ ಹಿನ್ನೆಲೆ ಮುಂದೆ ಯಾವ ರೀತಿ ತನಿಖೆಯನ್ನ ಮುನ್ನಡೆಸಬೇಕೆಂದು ಎಸ್ಐಟಿ ತಂಡ ಚಿಂತನೆ ನಡೆಸ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.