ರಾಹುಲ್ ಅಲ್ಲ ಅವರ ತಾತ - ಮುತ್ತಾತ ಬಂದ್ರೂ ಆರ್ಟಿಕಲ್ 370 ವಾಪಸ್ ತರಲಾಗಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Pralhad Joshi News : ರಾಹುಲ್ ಅಲ್ಲ ಅವರ ತಾತ, ಮುತ್ತಾತ ಬಂದ್ರೂ ಆರ್ಟಿಕಲ್ 370 ವಾಪಸ್ ತರಲು ಆಗಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿ: ಜಮ್ಮು ಕಾಶ್ಮೀರದಲ್ಲಿ ರಾಹುಲ್ ಅಲ್ಲ ಅವರ ತಾತ, ಮುತ್ತಾತ ಬಂದ್ರೂ ಆರ್ಟಿಕಲ್ 370 ವಾಪಸ್ ತರಲು ಆಗಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಧಾರವಾಡದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ ಜೋಶಿ, ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಯನ್ನು ವಾಪಸ್ ತರುತ್ತೇವೆ ಎಂದೇ ಘೋಷಿಸುತ್ತಿದ್ದಾರೆ. ಆದರೆ ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ, ಇಂಡಿ ಕೂಟ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಧೈರ್ಯ ತೋರಲಿ ಮೊದಲು ಎಂದು ಜೋಶಿ ಸವಾಲೆಸೆದರು. ಬಿಜೆಪಿ - NDA ಒಕ್ಕೂಟ ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಘೋಷಿಸಿದೆ. ಆದರೆ, ಕಾಂಗ್ರೆಸ್ - ಇಂಡಿ ಕೂಟ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ ನೋಡೋಣ ಎಂದರು.
"ದಿಲ್ಲಿ ಮೇ ದೋಸ್ತಿ- ಕಲ್ಕತ್ತಾ ಮೇ ಕುಸ್ತಿ"
ರಾಹುಲ್ ಬಾಬಾ ಮೇಲೆ ಇಂಡಿ ಕೂಟದ ಯಾರಿಗೂ ನಂಬಿಕೆಯಿಲ್ಲ. ಸ್ವತಃ ಕಾಂಗ್ರೆಸ್ಸಿಗರಿಗೇ ವಿಶ್ವಾಸವಿಲ್ಲ. ಇಂಡಿ ಕೂಟದ ಸ್ಥಿತಿ ಇಂದು "ದಿಲ್ಲಿ ಮೇ ದೋಸ್ತಿ- ಕಲ್ಕತ್ತಾ ಮೇ ಕುಸ್ತಿ" ಎನ್ನುವಂತಿದೆ ಎಂದು ಜೋಶಿ ಲೇವಡಿ ಮಾಡಿದರು.
ಇದನ್ನೂ ಓದಿ: ಕೋವಾಕ್ಸಿನ್ ಅತ್ಯುತ್ತಮ ಸುರಕ್ಷತಾ ದಾಖಲೆಯನ್ನು ಹೊಂದಿದೆ : ಭಾರತ್ ಬಯೋಟೆಕ್
ದೇಶ ವಿರೋಧಿಗಳ ಜತೆ, ಪಿಎಫ್ ಐನೊಂದಿಗೆ ಕಾಂಗ್ರೆಸ್ ನಂಟು ಬೆಳೆಸಿಕೊಂಡಿದೆ. ಕಾಂಗ್ರೆಸ್ ಧ್ವಜದಲ್ಲಿ ಕೇಸರಿ ಇರುವ ಕಾರಣಕ್ಕೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಕೇರಳದಲ್ಲಿ ಮುಸ್ಲಿಂ ಲೀಗ್ ಕಾಂಗ್ರೆಸ್ ಧ್ವಜ ಬಿಟ್ಟು ಬರುವಂತೆ ಹೇಳಿತು. ರಾಹುಲ್ ಮುಸ್ಲಿಂ ಲೀಗ್ ಧ್ವಜ ಹಿಡಿದೇ ಹೋದರು. ಇದು ನಮ್ಮ ದೇಶದ ದುರ್ದೈವ ಎಂದು ಜೋಶಿ ಹೇಳಿದರು.
ಸಿದ್ದರಾಮಯ್ಯ ರೂಪದಲ್ಲಿದ್ದಾರೆ ಹಿಂದೂ ವಿರೋಧಿಗಳು
ಸಿಎಂ ಸಿದ್ದರಾಮಯ್ಯ ಅಕ್ಕ-ಪಕ್ಕದಲ್ಲಿ ಇರುವವರು ಹಿಂದೂ ಧರ್ಮವನ್ನು ಸಂಪೂರ್ಣ ನಿರ್ನಾಮ ಮಾಡುತ್ತೇವೆಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ರೂಪದಲ್ಲೇ ಇದ್ದಾರೆ ಹಿಂದೂ ವಿರೋಧಿಗಳು ಎಂದು ಆರೋಪಿಸಿದರು.
ಜಗತ್ತಿನ ಕಣ್ಣು ಕುಕ್ಕುವಂತಿದೆ ಭಾರತದ ಅಭಿವೃದ್ಧಿ
ಭಾರತದಲ್ಲಿ ಆರ್ಥಿಕ ಸುಧಾರಣೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ವಿಕಸಿತ ಭಾರತದತ್ತದ ಹೆಜ್ಜೆ ಜಗತ್ತಿನ ಕಣ್ಣು ಕುಕ್ಕುವಂತಿದೆ. ಸುರಕ್ಷಿತ ಭಾರತ ನಿರ್ಮಾಣಕ್ಕಾಗಿ ಮೋದಿ ಸಂಕಲ್ಪ ತೊಟ್ಟಿದ್ದಾರೆ. ಇಂಥ ಒಬ್ಬ ಸಂತನನ್ನು ಮತ್ತೆ ಪ್ರಧಾನಿಯಾಗಿಸಲು ಬಿಜೆಪಿಎನ್ನು ಗೆಲ್ಲಿಸಿ ಎಂದು ಜೋಶಿ ಮನವಿ ಮಾಡಿದರು.
ಇದನ್ನೂ ಓದಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮತ್ತೊಂದು ಗೌರವದ ಗರಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.