ಹುಬ್ಬಳ್ಳಿ: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಮುಂದುವರಿಯುತ್ತದೆ. ಕನಿಷ್ಠ ಇನ್ನೂ10 ವರ್ಷ ಕಾಲ ಮೋದಿ ಆಡಳಿತ ನಡೆಸುತ್ತಾರೆ ಎಂಬುದನ್ನು ಅಂತಾರಾಷ್ಟ್ರೀಯ ಮಾನಿಟರಿ ಫಂಡ್ ಹೇಳಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು.


COMMERCIAL BREAK
SCROLL TO CONTINUE READING

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ದುಂಡಶಿ ಗ್ರಾಮದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲೇ ಪ್ರಧಾನಿ ಮೋದಿ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.


ಅಂತಾರಾಷ್ಟ್ರೀಯ ಮಾನಿಟರಿ ಫಂಡ್ ಭಾರತದ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ. ಮೋದಿ ಆಡಳಿತದಲ್ಲಿ ದೇಶದ 25 ಕೋಟಿ ಜನ ಬಡತದಿಂದ ವಿಮುಕ್ತಿ ಹೊಂದಿದ್ದಾರೆಂದು ಆ ಸಂಸ್ಥೆಯೇ ಹೇಳಿದೆ ಎಂದು ಜೋಶಿ ತಿಳಿಸಿದರು.


ಇದನ್ನೂ ಓದಿ: ಬಿಜೆಪಿ ಅವರಿಂದ ಅಪಪ್ರಚಾರ, ಮರಳು ದಂಧೆ ಸಾಬೀತು ಪಡಿಸಿದರೇ ನಾಮಪತ್ರವೇ ಸಲ್ಲಿಸಲ್ಲ: ಸುನಿಲ್ ಬೋಸ್ 


ಸಂಪೂರ್ಣ ಬಡತನ ನಿರ್ಮೂಲನೆಗೆ ಮೋದಿ ಸಂಕಲ್ಪ: ಬರುವ ಹತ್ತು ವರ್ಷದಲ್ಲಿ ದೇಶದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಜತೆಗೆ ಜಗತ್ತಿನಲ್ಲೇ ಭಾರತವನ್ನು ಅಭಿವೃದ್ಧಿಯಲ್ಲಿ ನಂಬರ್ 1. ರಾಷ್ಟ್ರವಾಗಿ ಪರಿವರ್ತಿಸಲು ಪ್ರಧಾನಿ ಮೋದಿ ಸಂಕಲ್ಪ ತೊಟ್ಟಿದ್ದಾರೆ ಎಂದು ಹೇಳಿದರು.


ಕೇಂದ್ರದ ವಿವಿಧ ಯೋಜನೆಗಳು ಮತ್ತು ಆರ್ಥಿಕ ಸುಧಾರಣೆ ಪರಿಣಾಮ 25 ಕೋಟಿಗೂ ಅಧಿಕ ಜನರು ಈಗಾಗಲೇ ಬಹು ಆಯಾಮಿ ಬಡತನದಿಂದ ಹೊರ ಬಂದು ಆರ್ಥಿಕ ಸಬಲತೆ ಸಾಧಿಸಿದ್ದಾರೆ ಎಂದು ಸಚಿವ ಜೋಶಿ ಪ್ರತಿಪಾದಿಸಿದರು.


5 ವರ್ಷದಲ್ಲಿ ಎಲ್ಲರಿಗೂ ಮನೆ: ಬರುವ 5 ವರ್ಷದೊಳಗೆ ದೇಶದ ಎಲ್ಲರಿಗೂ ಮನೆ ಸಿಗಬೇಕು ಎಂಬ ದಿಶೆಯಲ್ಲಿ ಕೇಂದ್ರ ಸಂಪುಟದಲ್ಲಿ ಚರ್ಚೆಯಾಗಿದೆ. 2 ಕೋಟಿ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಲು ಆಗಲೇ ಅನುಮೋದಿಸಿದೆ ಎಂದು ತಿಳಿಸಿದರು.


ಹತ್ತೇ ವರ್ಷದಲ್ಲಿ 6 ಕೋಟಿ ಮನೆ ನೀಡಿದೆ ಕೇಂದ್ರ: ಕಾಂಗ್ರೆಸ್ 65 ವರ್ಷದ ಆಡಳಿತದಲ್ಲಿ ಕೇವಲ 3.5 ಕೋಟಿ ಮನೆ ನೀಡಿದ್ದಾರೆ, ಮೋದಿ ಅವರು ಪ್ರಧಾನಿ ಆದ ಮೇಲೆ ಹತ್ತೇ ವರ್ಷದಲ್ಲಿ ಅವರಿಗಿಂತ ಹೆಚ್ಚು 4 ಕೋಟಿಗೂ ಅಧಿಕ ಮನೆಗಳನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೀಡಿದ್ದಾರೆ. ಒಟ್ಟು 6 ಕೋಟಿ ಮನೆಗಳನ್ನು ಮೋದಿ ಸರ್ಕಾರ ಹಂಚಿದೆ ಎಂದು ಹೇಳಿದರು.


ಇದನ್ನೂ ಓದಿ: ಧಾರವಾಡದ ಪ್ರತಿ ಹಳ್ಳಿಗೂ ಒಂದೂವರೆ ವರ್ಷದಲ್ಲಿ ಮಲಪ್ರಭಾ ನೀರು ಕೊಟ್ಟೇ ಕೊಡುವೆ: ಸಚಿವ ಜೋಶಿ ಭರವಸೆ 


ಕೇಂದ್ರ ಕೊಟ್ಟ ಮನೆಗಳನ್ನೇ ರಾಜ್ಯ ಸರ್ಕಾರ ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ಹಂಚುತ್ತಿದೆ. ನಾವು ದಿಲ್ಲಿಯಲ್ಲಿ ಕುಳಿತು ಹಂಚಲು ಬರುವುದಿಲ್ಲ. ಸ್ಥಳೀಯ ಆಡಳಿತ ಸಮನಾಗಿ ಹಂಚುವ ಕೆಲಸ ಮಾಡಬೇಕು ಎಂದು ಸಚಿವ ಪ್ರಹ್ಲಾದ ಜೋಶಿ  ಹೇಳಿದರು.


ಸಮಾವೇಶದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪಕ್ಷದ ಪ್ರಮುಖರಾದ ಶ್ರೀಕಾಂತ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣನವರ, ಶೋಭಾ ನಿಸ್ಸೀಮಗೌಡ್ರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.