ಧಾರವಾಡ : ಬೆಂಗಳೂರಿನಲ್ಲಿ ಉಗ್ರರ ಬಂಧನವಾಗಿದೆ. ಇಬ್ಬರು ಮಹಿಳೆಯರ ಉಲ್ಲೇಖವೂ ಆಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ರೀತಿ ಕೆಟ್ಟ ಹುಳ ಹೊರ ಬರುತ್ತಿವೆ. ಇವರಿಗೆಲ್ಲ ಕಾಂಗ್ರೆಸ್‌ ಸರ್ಕಾರ ಪೋಷಣೆ ನೀಡಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ವಿಚಾರವಾಗಿ ಧಾರವಾಡದಲ್ಲಿ ಪ್ರತಿಕ್ರಿಯೆ ಪ್ರಮೋದ ಮುತಾಲಿಕ್, ಇವತ್ತು ಸಿಸಿಬಿ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಅವರ ಬಳಿ ಜೀವಂತ ಬಾಂಬ್ ಸೇರಿ ಅನೇಕ ವಸ್ತುಗಳು ಸಿಕ್ಕಿವೆ. ಇವರು ಸುಲ್ತಾನಪಾಳ್ಯದಲ್ಲಿ ಇವರು ವಾಸವಾಗಿದ್ದರು, ಇಬ್ಬರು ಮಹಿಳೆಯರ ಉಲ್ಲೇಖವೂ ಆಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ, ಅದಕ್ಕೆ ಈ ರೀತಿ ಕೆಟ್ಟ ಹುಳ ಹೊರ ಬರುತ್ತಿವೆ ಎಂದು ಗುಡುಗಿದರು.


ಇದನ್ನೂ ಓದಿ: ಶಂಕಿತ ಉಗ್ರರ ಬಂಧನ: ಕಾನೂನು ಸುವ್ಯವಸ್ಥೆ ಬಿಗಿ ಮಾಡಲು ಎಚ್.ಡಿ.ಕುಮಾರಸ್ವಾಮಿ ಆಗ್ರಹ


ಅಲ್ಲದೆ, ಇವರಿಗೆಲ್ಲ ಪೋಷಣೆ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಇಂತಹ ಉಗ್ರರನ್ನೆ ಅವರು ಪೋಷಣೆ ಮಾಡುತ್ತ ಬಂದಿದ್ದಾರೆ. ಈ ಮೂಲಕ ಲಕ್ಷಾಂತರ ಜನರನ್ನು ಕೊಂದು ಹಾಕಿದ್ದಾರೆ. ಈಗ ಕಾಂಗ್ರೆಸ್ ಬಂದಿದ್ದರಿಂದ ಇಂತಹವುಗಳು ಇನ್ನೂ ಆಗುತ್ತವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹರ್ಷ ಕೊಲೆ ಆಯ್ತು, ಕೊಲೆ ಆರೋಪಿಗಳು ಜೈಲಿನಲ್ಲಿ ಫೋನ್ ನಲ್ಲಿ ಮಾತನಾಡುತ್ತ ಆನಂದವಾಗಿದ್ದರು, ಇವತ್ತು ಸಿಕ್ಕ ಶಂಕಿತರು ಅವರೊಂದಿಗೆ ಸಂಪರ್ಕದಲ್ಲಿದ್ದರೆಂಬ ಮಾಹಿತಿ ಬರುತ್ತಿದೆ ಎಂದರು.


ಜೈಲಿನಲ್ಲಿ ಉಗ್ರರು, ಪಾಕಿಸ್ತಾನಿಗಳು, ಕೊಲೆಗಡುಕರು ಇದಾರೆ. ಮುಸ್ಲಿಂ ಭೂಗತ ವ್ಯಕ್ತಿಗಳಿದ್ದಾರೆ, ಸರ್ಕಾರದ ನಿರ್ಲಕ್ಷ್ಯದಿಂದ ಈ ಎಲ್ಲ ಕೃತ್ಯ ಆಗುತ್ತಿವೆ, ಇದಕ್ಕೆ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ ಸಹ ಕಾರಣ, ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಿಂದಿನ ದಾಖಲೆ ಹೊರತೆಗೆಯಲಿ, ಮಲೆನಾಡಿನಲ್ಲಿ ವ್ಯವಸ್ಥಿತವಾಗಿ ಪ್ಲಾನಿಂಗ್‌ಗಳು ನಡೆಯುತ್ತಿವೆ ಎಂದು ಹೇಳಿದರು.


ಇದನ್ನೂ ಓದಿ: ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ವಿಶೇಷ ಸಚಿವ ಸಂಪುಟ ಸಭೆ


ಇನ್ನು ಚಾಮರಾಜಪೇಟೆ ಕ್ಷೇತ್ರದಲ್ಲಿ ಉಗ್ರವಾದಿಗಳಿದ್ದಾರೆ ಬಾಂಗ್ಲಾ, ಅಪಘಾನಿಸ್ತಾನಗಳಿದ್ದಾರೆ, ಇದೇ ಕಾರಣಕ್ಕೆ ಕೋವಿಡ್ ಸಮಯದಲ್ಲಿ ಸರ್ವೆಗೆ ಬಿಡಲಿಲ್ಲ, ಕೆಜಿ ಹಳ್ಳಿ, ಡಿಜೆ ಹಳ್ಳಿ, ಹಳೆ ಹುಬ್ಬಳ್ಳಿ, ಮೈಸೂರ ಘಟನೆಗಳೆಲ್ಲ ಉಗ್ರ ಕೃತ್ಯಗಳೆ, ರಾಜಕಾರಣಿಗಳು ಕೇವಲ ಅಧಿಕಾರ ದಾಹದಲ್ಲಿದ್ದಾರೆ, ಆ ಮೂಲಕ ಜನರ ಬಲಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮುತಾಲಿಕ್‌ ಗುಡುಗಿದರು.


ಸಿಸಿಬಿ ಪೊಲೀಸರ ಕಾರ್ಯ ಶ್ಲಾಘನೀಯ, ಅಲ್ಲಿ ಸಿಕ್ಕಿ ಮಹಿಳೆಯರನ್ನು ಬಂಧಿಸಿ ವಿಚಾರಣೆ ಮಾಡಬೇಕು, ಪಬ್ ಜಿ ಆಟದ ಪ್ರೀತಿ ಹೆಸರಿನಲ್ಲಿ ಪಾಕ್ ಮಹಿಳೆ ದೇಶಕ್ಕೆ ಬಂದಿದ್ದಾಳೆ, ಬೆಂಗಳೂರಿನಲ್ಲಿ ಸಿಕ್ಕವರು ಈಗ ಐದು ಜನ ಮಾತ್ರ, ಎಲ್‌ಇಟಿ ಸಂಘಟನೆ ಮಾತ್ರವಲ್ಲ ಎಲ್ಲ ಸಂಘಟನೆ ಸಕ್ರಿಯ ಆಗುತ್ತವೆ, ಗೋ ಹತ್ಯೆ ನಿರಂತರವಾಗಿ ನಡೆಯುತ್ತಿದೆ, ಇದರ ಹಣವೇ ಉಗ್ರ ಕೃತ್ಯಕ್ಕೆ ಹೊರಟಿದೆ ಎಂದು ಪ್ರಮೋದ್‌ ಮುತಾಲಿಕ್‌ ಆರೋಪಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.