ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹದಲ್ಲಿ ಮೂಲ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.


COMMERCIAL BREAK
SCROLL TO CONTINUE READING

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ‌ ಖೈದಿಗಳ ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದುವರೆಗೂ 1334 ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. 2015ರಿಂದ ಈವರೆಗೂ ಯಾವ ಖೈದಿಯನ್ನೂ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮತ್ತೆ ಗೃಹ ಸಚಿವನಾದ ಬಳಿಕ  ಸನ್ನಡತೆ ಮೇಲೆ ಬಿಡುಗಡೆ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದರು.



ರಾಜ್ಯದಲ್ಲಿ ವಿವಿಧ ಕಾರಾಗೃಹದಲ್ಲಿ 14500 ಖೈದಿಗಳು ಬಂಧಿಯಾಗಿದ್ದಾರೆ. ಇದರಲ್ಲಿ ಬಹುತೇಕರು ಉದ್ದೇಶಪೂರ್ವಕವಾಗಿ ಜೈಲಿಗೆ ಬಂದಿರುವುದಿಲ್ಲ. ಆಕಸ್ಮಿಕವಾಗಿ ಅಥವಾ ಆ ಕ್ಷಣದಲ್ಲಾದ ತಪ್ಪಿನಿಂದ ಜೈಲಿಗೆ ಬಂದಿರುತ್ತಾರೆ. ಆ ನಂತರ ಅವರಿಗೆ ತಮ್ಮ ತಪ್ಪಿನ‌ಅರಿವೂ ಆಗಿರುತ್ತದೆ. ಅಂಥವರ ನಡವಳಿಕೆ ಗಮನಿಸಿ‌ ಸರಕಾರ ಅವರನ್ನು ಬಿಡುಗಡೆ ಗೊಳಿಸಿ ಸಮಾಜದಲ್ಲಿ‌ ಬದುಕಲು‌ ಮತ್ತೊಂದು  ಅವಕಾಶಕೊಡುತ್ತದೆ ಎಂದು ಹೇಳಿದರು.