ಬೆಂಗಳೂರು: ನಗರದಲ್ಲಿ ಸ್ಲಂಗಳನ್ನು ಮುಕ್ತಗೊಳಿಸುವ‌ ಮೂಲಕ ಅವರಿಗೆ ಉತ್ತಮ ಜೀವನ ಕಟ್ಟಿಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.‌


COMMERCIAL BREAK
SCROLL TO CONTINUE READING

ಬಿಬಿಎಂಪಿ ಯಲಹಂಕ ಉಪನಗರ ವಾರ್ಡ್ 4 ವ್ಯಾಪ್ತಿಯ‌ ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿರುವ 259 ದಲಿತ ಮತ್ತು ಹಿಂದುಳಿದ ಕುಟುಂಬಗಳಿಗೆ ನಿವೇಶನದ ಕ್ರಯಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಯಲಹಂಕದ ಅಂಬೇಡ್ಕರ್ ಭವನದಲ್ಲಿ ಹಲವು ವರ್ಷದಿಂದ‌ವಾಸವಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಇಂದು ಕ್ರಯ ಪತ್ರ ವಿತರಿಸುತ್ತಿದ್ದು , ಈ ಆಸ್ತಿಯ ಹಕ್ಕನ್ನು ನೀಡಲಾಗುತ್ತಿದೆ ಎಂದರು.


ನಗರದ ಕೆಲವೆಡೆ ಕೊಳಚೆ ಪ್ರದೇಶದಲ್ಲಿ ಜನರು‌ ಅತ್ಯಂತ ಚಿಕ್ಕ ಸ್ಥಳದಲ್ಲಿ ವಾಸವಿದ್ದಾರೆ. ಸ್ಲಂಗಳಲ್ಲಿ ಮೂಲಸೌಕರ್ಯ ಒದಗಿಸಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು.‌ ಈ ಭಾಗದಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆಗಾಗಿ 32 ಲಕ್ಷ ರೂ. ಒದಗಿಸಿಕೊಡಲಾಗಿದೆ ಎಂದು ತಿಳಿಸಿದರು.