ರಾಯಚೂರು: ಚಲಿಸುತ್ತಿದ್ದ ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
![ರಾಯಚೂರು: ಚಲಿಸುತ್ತಿದ್ದ ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ ರಾಯಚೂರು: ಚಲಿಸುತ್ತಿದ್ದ ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ](https://kannada.cdn.zeenews.com/kannada/sites/default/files/styles/zm_500x286/public/2024/08/03/428633-99d07c47-6be8-4363-a89a-2b2c9c0b3bc6.jpeg?itok=wBevwbyb)
ರಾಯಚೂರು: ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಮಸ್ಕಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಾಯಚೂರಿನ ಸಂತೆ ಬಜಾರ್ ರಸ್ತೆಯ ನಿವಾಸಿ ಮಹಿಳೆ ಒಬ್ಬರು ತುಂಬು ಗರ್ಬಿಣಿಯಾಗಿದ್ದು ಶುಕ್ರವಾರ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ಚೀರಾಡುತ್ತಿದ್ದ ಮಹಿಳೆಯನ್ನು ಕಂಡ ಕುಟುಂಬಸ್ಥರು ತಕ್ಷಣ ಆಟೋ ಕರೆಸಿದ್ದಾರೆ.
ರಾಯಚೂರು: ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಮಸ್ಕಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಾಯಚೂರಿನ ಸಂತೆ ಬಜಾರ್ ರಸ್ತೆಯ ನಿವಾಸಿ ಮಹಿಳೆ ಒಬ್ಬರು ತುಂಬು ಗರ್ಬಿಣಿಯಾಗಿದ್ದು ಶುಕ್ರವಾರ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ಚೀರಾಡುತ್ತಿದ್ದ ಮಹಿಳೆಯನ್ನು ಕಂಡ ಕುಟುಂಬಸ್ಥರು ತಕ್ಷಣ ಆಟೋ ಕರೆಸಿದ್ದಾರೆ.
ಶುಕ್ರವಾರ ಬೆಳಗ್ಗೆ ರಾಯಚೂರಿನ ಸಂತೆ ಬಜಾರ್ ರಸ್ತೆಯ ನಿವಾಸಿ ಮಹಿಳೆ ಹೆರಿಗೆ ನೋವಿನಿಂದ ಚೀರಾಡಿದ್ದಾರೆ. ಮಹಿಲೆಯ ಆಕ್ರಂದನ ಕಂಡ ಕುಟುಂಬಸ್ಥರು ಆಟೋ ಕರೆಸಿ ಮಹಿಳಯನ್ನು ಆಸ್ಪತ್ರೆ ಕರೆದೊಯುತ್ತಿದ್ದ ಮಾರ್ಗ ಮಧ್ಯೆ ಮಹಿಳೆ ಆಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಪಾದಯಾತ್ರೆ... ಹೈಕೋರ್ಟ್‌ನಿಂದ ಮಹತ್ವದ ಆದೇಶ !
ಆಟೋದಲ್ಲಿ ಮಹಿಳೆಯನ್ನು ಕೂರಿಸಿಕೊಂಡು ಆಸ್ಪತ್ರೆಗೆ ಹೋಗುವ ವೇಳೆ ಹೆರಿಗೆ ನೋವು ಇನ್ನೂ ಹೆಚ್ಚಾಗಿದೆ, ಇದನ್ನು ನೋಡಿದ ಆಟೋ ಚಾಲಕ ಮಾರ್ಗ ಮಧ್ಯೆಯೇ ಆಟೋ ನಿಲ್ಲಿಸಿದ್ದಾನೆ. ಸ್ಥಳದಲ್ಲಿದ್ದ ಮಹಿಳೆಯರು ಸೇರಿ ಕುಟುಂಬಸ್ಥರು ಆಟೋದ ಸುತ್ತಲೂ ಪರದೆಯನ್ನು ಕಟ್ಟಿ ಮಹಿಳೆಗೆ ಹೆರಿಗೆ ಮಾಡಿದ್ದಾರೆ. ಇನ್ನೂ ಸ್ಥಳಿಯ ಮಹಿಳೆಯರ ಸಯಾದಿಂದ ಮಹಿಳಿಗೆ ಹೆರಿಗೆ ಮಾಡಲಾಗಿದ್ದು, ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಹೆರಿಗೆ ಮಾಡಿಸಿದ ಸ್ಥಳಿಯರು ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಮತ್ತು ಮಗುವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಥಮ ಚಿಕಿತ್ಸೆ ನೀಡಲಾಗುತ್ತಿದ್ದು, ತಾಯಿ ಮಗು ಸುರಕ್ಷಿತವಾಗಿ ಇದ್ದಾರೆ ಎಂಬುದು ತಿಳಿದು ಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.