88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ
88ನೇ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ವಿದ್ಯುಕ್ತ ಚಾಲನೆ ನೀಡಿದರು.
ಹಾಸನ : ಇಂದಿನಿಂದ ಆರಂಭವಾಗಲಿರುವ 88ನೇ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ವಿದ್ಯುಕ್ತ ಚಾಲನೆ ನೀಡಿದರು.
ಶ್ರವಣಬೆಳಗೊಳದಲ್ಲಿನ ಚಾವುಂಡರಾಯ ಸಭಾಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಪಾಲ ವಜುಭಾಯ್ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎ.ಮಂಜು, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ದಿಂಗಂಬರ ಮುನಿಗಳು, ಆಚಾರ್ಯರು ಮತ್ತು ಮಾತಾಜಿಯವರು ಭಾಗಿಯಾಗಿದ್ದರು. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಅವರು ಅಧ್ಯಕ್ಷತೆ ವಹಿಸಿದ್ದರು.
ಫೆ.7 ರಿಂದ 26ರವರೆಗಿನ ಕಾರ್ಯಕ್ರಮಗಳು
ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಫೆ.7ರಿಂದ ಪ್ರತಿದಿನ ಬೆಳಿಗ್ಗೆ ಬೆಳಗ್ಗೆ 7 ರಿಂದ 11 ರವರೆಗೆ ಪಂಚಕಲ್ಯಾಣ ಮಹೋತ್ಸವಗಳು ಜರುಗಲಿವೆ. ಫೆ.12 ರಿಂದ 15 ರವರೆಗೆ ಪಂಚಪರಮೇಷ್ಠಿ ಕಾರ್ಯಕ್ರಮಗಳು ಜರುಗಲಿವೆ. ಫೆ.16 ರಂದು ವಿಂಧ್ಯಗಿರಿ ಸುತ್ತ ಬೃಹತ್ ಮೆರವಣಿಗೆ ಮತ್ತು
ರಥೋತ್ಸವ ನಡೆಯಲಿದೆ. ಫೆ.17 ರಂದು 108 ಕಳಶಗಳ ಅಭಿಷೇಕದೊಂದಿಗೆ ಮಹಾ ಮಸ್ತಕಾಭಿಷೇಕ ಆರಂಭವಾಗಲಿದ್ದು, ಪ್ರತಿದಿನ 1008 ಕಳಶಗಳ ಅಭಿಷೇಕ ನೆರವೇರಲಿದೆ. ಫೆ.26 ರಂದು ಮಹಾಮಸ್ತಕಾಭಿಷೇಕ ಸಮಾರೋಪ ಸಮಾರಂಭ ನಡೆಯಲಿದ್ದು, 2 ನೇ ಮಹಾಮಸ್ತಕಾಭಿಷೇಕಕ್ಕೆ ತೆರೆ ಬೀಳಲಿದೆ.