ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ, ಕೊಮ್ಮಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆ ಬಳಿಒಕ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, "ಕರುನಾಡ ಜನತೆಗೆ ನಮಸ್ಕಾರ" ಎಂದು ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸಿದರು. ಬೆಂಗಳೂರಿನ ಮಹಾಜನತೆಗೆ ವಿಶೇಷ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಮಾತನಾಡಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಯೋಗ ದಿನಕ್ಕೆ ಅರಮನೆ ನಗರಿ ಸರ್ವಸಜ್ಜು.. ಪಿಎಂ ಆಗಮನ ಹಿನ್ನೆಲೆ ಮೈಸೂರಲ್ಲಿ‌ ಹೈ ಅಲರ್ಟ್


ಇವತ್ತು 27 ಸಾವಿರ ಕೋಟಿ ವೆಚ್ಚದ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ ಆಗಿದೆ. ಹಲವು ಯೋಜನೆಗಳ ಮೂಲಕ ಜನರ ಸೇವೆಗೆ ಅವಕಾಶ ಸಿಕ್ಕಿದೆ. ಇಲ್ಲಿಗೆ ಬರೋ‌ ಮುಂಚೆ ಐಐಎಸ್‌ಸಿ, ಬೇಸ್ ವಿವಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಕರ್ನಾಟಕದಲ್ಲಿ ಹಲವು ಮೂಲಭೂತ ಯೋಜನೆಗಳನ್ನು ಕಲ್ಪಿಸುವ ಯೋಜನೆಗಳಿಗೆ ಚಾಲನೆ ಕೊಟ್ಟಿರೋದು ನಮಗೆ ಸಂತೋಷ ತಂದಿದೆ ಎಂದರು.


ಬೆಂಗಳೂರಿನ ಸಂಚಾರ ದಟ್ಟಣೆ ಇಳಿಸಲು ಪಣ:


ಬೆಂಗಳೂರಿನ ಲಕ್ಷಾಂತರ ಜನರಿಗೆ ಕನಸಿನ ನಗರಿ. ಬೆಂಗಳೂರಿನ ಅಭಿವೃದ್ಧಿ ‌ಲಕ್ಷಾಂತರ ಕನಸುಗಳ ವಿಕಾಸವಾಗುತ್ತದೆ. ಕೇಂದ್ರದಿಂದ ಬೆಂಗಳೂರು ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ಕೊಡಲಾಗುತ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಇಳಿಸಲು ಹಲವು ಯೋಜನೆ ಕೊಡಲಾಗಿದೆ. ಸಂಚಾರ ದಟ್ಡಣೆಯಿಂದ ಮುಕ್ತಿ ಕೊಡಲು ರೈಲು, ರಸ್ತೆ, ಮೂಲಸೌಕರ್ಯ ಹೆಚ್ಚಿಸಿದ್ದೇವೆ. ಮೂಲಸೌಕರ್ಯ ಕೊಡುವ ಕೆಲಸವನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ಮಾಡಿದೆ ಎಂದರು. 


ಸಬ್‌ ಅರ್ಬನ್ ಯೋಜನೆ ಬಗ್ಗೆ 40 ವರ್ಷದಿಂದ ಚರ್ಚೆ ಮಾತ್ರ ನಡೀತಿತ್ತು. ನಾವು ಈಗ ನಿಮ್ಮ ಕನಸನ್ನು ನನಸು ಮಾಡಿದ್ದೇವೆ. ಹದಿನಾರು ವರ್ಷದವರೆಗೆ ಸಬ್‌ ಅರ್ಬನ್ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧರಾಗಿದ್ಧೇವೆ. ನಲವತ್ತು ವರ್ಷ ಚರ್ಚೆಯಲ್ಲಿದ್ದ ಈ ಯೋಜನೆ ಆರಂಭಿಸುವ ಪುಣ್ಯ ನಮಗೆ ಸಿಕ್ಕಿದೆ. ನಲವತ್ತು ವರ್ಷ ಕಮ್ಮಿ ಅವಧಿ ಅಲ್ಲ. ಈ ಸುವರ್ಣ ಅವಕಾಶ ನಮಗೆ ಸಿಕ್ಕಿದೆ ಎಂದು ಹೇಳಿದರು.


ಐದು ನ್ಯಾಷನಲ್ ಹೈವೇ ಯೋಜನೆಗಳಿಗೆ ಚಾಲನೆ:


ಬೆಂಗಳೂರಿನಲ್ಲಿ ಇದು ಕೊನೆಯ ಕಾರ್ಯಕ್ರಮ, ಇಲ್ಲಿಂದ ಮೈಸೂರಿಗೆ ಹೋಗ್ತೇನೆ. ರಾಜ್ಯದಲ್ಲಿ ಐದು ನ್ಯಾಷನಲ್ ಹೈವೇ ಯೋಜನೆಗಳು, ಏಳು ರೈಲು ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ 1200 ಕಿ.ಮೀ ಗೂ ಹೆಚ್ಚಿನವರೆಗೆ ವಿವಿಧ ರೈಲು ಕಾಮಗಾರಿ ಮಾಡಲಾಗಿದೆ. ಸಬ್‌ ಅರ್ಬನ್ ರೈಲು ಯೋಜನೆ ಹಾಗೆಯೇ ಬೆಂಗಳೂರು ರಿಂಗ್ ರಸ್ತೆ ಅಗಲೀಕರಣ ಯೋಜನೆ ನಡೆಯುತ್ತದೆ. ಇದರಿಂದ ಸಂಚಾರ ದಟ್ಟಣೆ ಕಮ್ಮಿ ಆಗಲಿದೆ ಎಂದರು. 


ಇದನ್ನೂ ಓದಿ: "ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ": ಕನ್ನಡದಲ್ಲಿ ಪ್ರಧಾನಿ ಮೋದಿ ಟ್ವೀಟ್‌


ಬೊಮ್ಮಾಯಿ ಹೊಗಳಿದ ಮೋದಿ: 


ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ಕರ್ನಾಟಕ ವಿಕಾಸ ಆಗ್ತಿದೆ. ಬೊಮ್ಮಾಯಿ ಆಡಳಿತಕ್ಕೆ ಮೋದಿ ಶ್ಲಾಘನೆ. ಕೊರೊನಾ ವೇಳೆ ಬೆಂಗಳೂರಿನಲ್ಲಿ ಇರುವ ನಮ್ಮ ಯುವ ಸಮೂಹ ಉತ್ತಮ ಸೇವಾಕಾರ್ಯ ಮಾಡಿದ್ದಾರೆ. ಬೆಂಗಳೂರಿಗೆ ಜನರ ಮನಸ್ಥಿತಿ ಬದಲಾಯಿಸುವ ಶಕ್ತಿ ಇದೆ. ಜಗತ್ತಿನ‌ ಮುಂಚೂಣಿ ನಗರಗಳಲ್ಲಿ ಬೆಂಗಳೂರು ಒಂದು. ಉದ್ಯೋಗ ಸೃಷ್ಟಿ, ನವೋದ್ಯಮಗಳ ಸೃಷ್ಟಿ‌‌ ಮಾಡುವ ನಗರ ಎಂದು ಹೇಳಿದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.