ಬೆಂಗಳೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ವತಿಯಿಂದ ಇಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ.


COMMERCIAL BREAK
SCROLL TO CONTINUE READING

ಖಾಸಗಿ ಆಸ್ಪತ್ರೆಗಳು ನೀಡುವ ವೈದ್ಯಕೀಯ ಚಿಕಿತ್ಸಾ ಶುಲ್ಕವನ್ನು ಸರ್ಕಾರ ನಿಗದಿ ಪಡಿಸಲು ಮುಂದಾಗಿರುವುದು ಮತ್ತು ಜನರ ದೂರು ಆಲಿಸಲು ಸಮಿತಿ ರಚನೆ ಮಾಡಿರುವುದು ಅವೈಜ್ಞಾನಿಕ ಈ ಹಿನ್ನೆಲೆಯಲ್ಲಿ ನಾವು ಇಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಲಿದ್ದೇವೆ. ಕೇವಲ ಗರ್ಭಿಣಿಯರಿಗಷ್ಟೇ ಸೇವೆ ನೀಡಲಾಗುವುದು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನ ಡಾ|| ಹೆಚ್.ಎನ್. ರವೀಂದ್ರ ಹೇಳಿಕೆ ನೀಡಿದ್ದಾರೆ.


ಸಿಎಂ ಸಭೆ ಕರೆದ ಹಿನ್ನೆಲೆ ನಾವು ನಮ್ಮ ಮುಷ್ಕರ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಆದರೆ, ಅದು ಅನಧಿಕೃತ ಸಭೆಯಾದ್ದರಿಂದ ನಾವು ಸಭೆಯಲ್ಲಿ ಭಾಗವಹಿಸಿಲ್ಲಾ. ಈ ಹಿಂದೆ ಕೂಡ ಜೂನ್ 16 ರಂದು ತಿದ್ದುಪಡಿ ವಿರೋಧಿಸಿ  ಪ್ರತಿಭಟನೆ ನಡೆಸಿದ್ದೇವು. ನಂತರ ಸರ್ಕಾರಕ್ಕೆ ವಿಕ್ರಮ್ ಜಿತ್ ಅವರ ಸಮಿತಿ ರಚನೆ ಮಾಡಿ ವರದಿ ಸಲ್ಲಿಸಲಾಗಿತ್ತು. ಆದರೆ ಆ ವರದಿಯನ್ನು ಕಡೆಗಣಿಸಿ ಸರ್ಕಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ‌ ಮಂಡಿಸಲು ಹೊರಟಿದೆ. ಈ ಹಿನ್ನೆಲೆಯಲ್ಲಿ ನಾವು ಬಂದ್ ನಡೆಸುತ್ತಿದ್ದೇವೆ. ಇಂದು ಒಂದು ದಿನದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗುವುದು, ಸರ್ಕಾರ ಬಗ್ಗದಿದ್ದಲ್ಲಿ ನಮ್ಮ ವೃತ್ತಿಯನ್ನೇ ಕೈಬಿಡುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಾ|| ಹೆಚ್.ಎನ್. ರವೀಂದ್ರ ಎಚ್ಚರಿಕೆ ನೀಡಿದ್ದಾರೆ.