ಬೆಂಗಳೂರು : ಬಿಜೆಪಿಯ 40% ಸರ್ಕಾರದಲ್ಲಿ ಪ್ರಮುಖ ಭ್ರಷ್ಟಾಚಾರ ಪ್ರಕರಣ ಎಂದರೆ ಯುವಕರ ಭವಿಷ್ಯ ಮಾರಾಟ ಮಾಡಿದ ಪಿಎಸ್ಐ ನೇಮಕಾತಿ ಹಗರಣ. ಸರ್ಕಾರ 545 ಹಾಗೂ 402 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿತ್ತು. 545 ನೇಮಕಾತಿ ಪ್ರಕ್ರಿಯೆ ಹಗರಣದ ವಿಚಾರ ಎಲ್ಲರಿಗೂ ಗೊತ್ತಿದೆ. ಇನ್ನು 402 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ದೈಹಿಕ ಪರೀಕ್ಷೆ ನಡೆಸಲಾಗಿದ್ದು, ಈಗ ಅದನ್ನು ಮುಂದುವರಿಸಲು ಆದೇಶ ನೀಡಿದೆ.


COMMERCIAL BREAK
SCROLL TO CONTINUE READING

ಆಶ್ಚರ್ಯಕರ ಸಂಗತಿ ಎಂದರೆ, ಈ ಸರ್ಕಾರದಲ್ಲಿ ಏನಾಗುತ್ತಿದೆ ಎಂದು ಸರ್ಕಾರಕ್ಕೆ ತಿಳಿದಿಲ್ಲ. ಗೃಹ ಸಚಿವಾಲಯಕ್ಕೆ ತನ್ನ ಹಿಂದಿನ ಹೇಳಿಕೆಗಳ ಬಗ್ಗೆ ಗೃಹಸಚಿವರು, ಮುಖ್ಯಮಂತ್ರಿಗಳಿಗೆ ಡಿಜಿ ಅವರು ಏನು ಹೇಳಿದ್ದಾರೆ ಎಂದು ಗೋತ್ತಿಲ್ಲ. 545 ಹುದ್ದೆಗಳ ನೇಮಕಾತಿ ಹಗರಣದ ಸಮಗ್ರ ತನಿಖೆ ಮುಗಿಯುವವರೆಗೂ ಯಾವುದೇ ನೇಮಕಾತಿ ಪ್ರಕ್ರಿಯೆ ಮಾಡುವುದಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕರು ಹೇಳಿದ್ದರು. ಇದನ್ನು ಗೃಹ ಸಚಿವರೂ ಸಮರ್ಥಿಸಿಕೊಂಡಿದ್ದರು. ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ನಡೆಸಲಾಗುವುದು ಎಂದು ಹೇಳಿದ್ದರು. ಆ ಪರೀಕ್ಷೆ ವರದಿ ಬಂದಿದೆಯೋ ಇಲ್ಲವೋ? ಬಂದಿದ್ದರೆ ಅದು ಎಲ್ಲಿದೆ? ಈಗ ಸರ್ಕಾರ ತನ್ನ ಹೇಳಿಕೆಗೆ ವಿರುದ್ಧವಾಗಿ ಯಾಕೆ ನಡೆದುಕೊಳ್ಳುತ್ತಿದೆ?


ಇದನ್ನೂ ಓದಿ: ಸರ್ಕಾರಿ ಕಚೇರಿಗೇ ಕನ್ನ ಹಾಕಿದ ಖದೀಮರು: ದಾಖಲೆಗಳು ಸೇರಿ ಕಂಪ್ಯೂಟರ್ ಕಳ್ಳತನ!


ಇಲ್ಲಿ ಗೊಂದಲ ಸೃಷ್ಟಿಸಿರುವುದು ಡಿಜಿ ಹಾಗೂ ಗೃಹಸಚಿವರು. ನೊಂದ ಅಭ್ಯರ್ಥಿಗಳು ಗೃಹ ಸಚಿವರನ್ನು ಭೇಟಿಯಾದಾಗ, ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ. ನೇಮಕಾತಿ ಪ್ರಕ್ರಿಯೆ ಮಾಡುವುದಿಲ್ಲ ಎಂದು ಹೇಳಿದರು. ಇನ್ನು ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿ ಹೋದಾಗ, ನಮ್ಮ ಬಳಿ ಹೊಸ ತಂತ್ರಜ್ಞಾನ ಇದೆ. ನೀವು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದರೆ ತಂತ್ರಜ್ಞಾನ ಬಳಸಿಕೊಂಡು ನಿಮಗೆ ನ್ಯಾಯ ಒದಗಿಸುತ್ತೇವೆ ಎಂದು ಭರವಸೆ ನೀಡಿ ಅಭ್ಯರ್ಥಿಗಳಲ್ಲಿ ಆಸೆ ಮೂಡಿಸಿದರು. ಈಗ ಸರ್ಕಾರ ಯಾರ ಮಾತು ಉಳಿಸಿಕೊಂಡಿದೆ? ಅವರ ಮಾತಿಗೆ ಅವರೇ ಬೆಲೆ ನೀಡುವುದಿಲ್ಲವೇ? ಅಥವಾ ಮೈಗೆ ಎಣ್ಣೆ ಹಚ್ಚಿಕೊಂಡು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರಾ?


ಈಗ ಸಾಮಾಜಿಕ ಜಾಲತಾಣಗಳಲ್ಲಿ 2 ಆಡಿಯೋಗಳು ಹರಿದಾಡುತ್ತಿವೆ. ಅಭ್ಯರ್ಥಿಯೊಬ್ಬರು ಗೃಹಸಚಿವರ ಜತೆ ಮಾತನಾಡುತ್ತಿದ್ದಾರೆ. ಈ ಆಡಿಯೋ ಹಿನ್ನೆಲೆಯಲ್ಲಿ ನಾವು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ 10 ಪ್ರಶ್ನೆಗಳನ್ನು ಕೇಳಬಯಸುತ್ತೇವೆ. ಈ ಆಡಿಯೋ ವಿಚಾರಕ್ಕೂ ನಮಗೆ ನೋಟಿಸ್ ನೀಡುತ್ತಾರೋ ಏನೋ?


ಇದನ್ನೂ ಓದಿ: ಸರ್ಕಾರಿ ಕಚೇರಿಗೇ ಕನ್ನ ಹಾಕಿದ ಖದೀಮರು: ದಾಖಲೆಗಳು ಸೇರಿ ಕಂಪ್ಯೂಟರ್ ಕಳ್ಳತನ!


ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರ ಮಾಧ್ಯಮಗೋಷ್ಠಿ ಮುಖ್ಯಾಂಶಗಳು: 


1.           402 ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದ್ದು, ಅದಕ್ಕೆ ಸಂಬಂಧಿಸಿದಂತೆ ನಾವು ಸಿಐಡಿಗೆ ಸಾಕ್ಷಿ ಪುರಾವೆ ಸಲ್ಲಿಸಿದ್ದೇವೆ ಎಂದು ಅಭ್ಯರ್ಥಿ ಗೃಹಸಚಿವರಿಗೆ ಹೇಳಿದ್ದಾರೆ. ಆದರೂ ತನಿಖೆಗೂ ಮುನ್ನ ಮತ್ತೆ ನೇಮಕಾತಿ ಪ್ರಕ್ರಿಯೆ ಮುಂದುವರಿಯುತ್ತಿರುವುದೇಕೆ?


2.          ನೀವು ಕೇವಲ ಉತ್ತರ ಪರೀಕ್ಷೆ ವಿಚಾರವಾಗಿ ತನಿಖೆ ಮಾಡುತ್ತಿದ್ದೀರಿ. ಆದರೆ ದೈಹಿಕ ಪರೀಕ್ಷೆಯಲ್ಲೂ ಅಕ್ರಮವಾಗಿದೆ. ಪ್ರಶ್ನೆ ಪತ್ರಿಕೆ 1ರಲ್ಲೂ ಅಕ್ರಮ ನಡೆದಿದ್ದು, ಅದಕ್ಕೂ ನಾವು ಸಾಕ್ಷಿ ನೀಡಿದ್ದು ಹೇಳಿದ್ದು, ಸರ್ಕಾರ ಈ ಬಗ್ಗೆ ತನಿಖೆ ಯಾಕೆ ಮಾಡುತ್ತಿಲ್ಲ?


3.           ಆರೋಪಿಗಳಿಗೆ ಜಾಮೀನು ಹೇಗೆ ಸಿಗುತ್ತಿದೆ ಎಂದು ಕೇಳಿದಾಗ. ಅದು ತಾಂತ್ರಿಕ ಸಮಸ್ಯೆಯಿಂದ ಆಗಿದ್ದು, ನಾವು ಮೇಲ್ಮನವಿ ಹಾಕಬೇಕಾ ಬೇಡವೆ ಎಂದು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ತಾಂತ್ರಿಕ ಸಮಸ್ಯೆ ಅಂದರೆ ಅರ್ಥವೇನು? ಗೃಹಸಚಿವರ ಪ್ರಕಾರ ಸರ್ಕಾರದ ಪರ ವಾದ ಮಾಡುತ್ತಿರುವ ವಕೀಲರು ಅಸಮರ್ಥರೇ? 56 ಸಾವಿರ ಯುವಕರಿಗೆ ಅನ್ಯಾಯವಾಗುತ್ತಿರುವಾಗ ಅದನ್ನು ವಾದ ಮಾಡಲಾಗದೇ ಜಾಮೀನು ಸಿಗುತ್ತಿದೆ ಎಂದರೆ ಸರ್ಕಾರ ಹಗರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರಾ? ಮೇಲ್ಮನವಿ ಸಲ್ಲಿಸಲು ಕಾಯುತ್ತಿರುವುದೇಕೆ?


4.           ನಾವು ಡಿಜಿ, ಐಜಿ, ಕಲಬುರ್ಗಿ ಆಯುಕ್ತರ ಬಗ್ಗೆಯೂ ಸಾಕ್ಷಿ ನೀಡಿದ್ದು, ತನಿಖೆಯನ್ನು ಕೇವಲ ಅಮೃತ್ ಪೌಲ್ ಅವರಿಗೆ ಮಾತ್ರ ಸೀಮಿತಗೊಳಿಸಿರುವುದೇಕೆ? ಅವರ ಮೌನವನ್ನು ನಾವು ತಪ್ಪೊಪ್ಪಿಗೆ ಎಂದು ಭಾವಿಸಬೇಕೆ?


5.           ಮೂವರು ಶಾಸಕರ ಬಗ್ಗೆ ದೂರು ಇದ್ದು, ಆಬಗ್ಗೆ ತನಿಖೆ ಯಾಕಿಲ್ಲ ಎಂದು ಕೇಳಿದಾಗ. ನಾವು ತನಿಖೆ ಮಾಡಿದ್ದು ಸಾಕ್ಷಿಗಳು ಯಾರೂ ಮುಂದೆ ಬರುತ್ತಿಲ್ಲ ಎಂದು ಹೇಳಿದ್ದಾರೆ. ಆ ಮೂವರು ಶಾಸಕರು ಯಾರು? ಅವರ ವಿರುದ್ಧ ಯಾವ ತನಿಖೆ ನಡೆದಿದೆ? ಆ ಮೂವರು ಶಾಸಕರು ಕಾಂಗ್ರೆಸ್ ನವರಾ? ಬಿಜೆಪಿಯವರಾ? ಜೆಡಿಎಸ್ ನವರಾ? ಈ ಬಗ್ಗೆ ಮಾಹಿತಿ ಬಹಿರಂಗಪಡಿಸುತ್ತಿಲ್ಲವೇಕೆ? ಈ ವಿಚಾರವನ್ನು ಅಧಿವೇಶನದಲ್ಲೂ ಚರ್ಚೆ ಮಾಡುತ್ತಿಲ್ಲ.


6.           ಶಾಸಕರೊಬ್ಬರ ಆಡಿಯೋ ಸೋರಿಕೆಯಾದಾಗ ಆ ಧ್ವನಿ ನನ್ನದೇ, ಸರ್ಕಾರ ಸಚಿವರ ಪರವಾಗಿ ಡೀಲ್ ಮಾತನಾಡಿ ಶಾಸಕರ ಭವನದಲ್ಲಿ ಹಣ ಪಡೆದಿರುವುದಾಗಿಯೂ ಹೇಳಿದ್ದರು. ಆ ಬಗ್ಗೆ ತನಿಖೆ ಏನಾಯ್ತು? ಸಾಕ್ಷಿ ನೀಡುತ್ತಿರುವವರ ಮೇಲೆ ಸಿಸಿಬಿ ನೋಟೀಸ್ ನೀಡುತ್ತಿದ್ದೀರ?


7.           402 ನೇಮಕಾತಿ ಅಕ್ರಮದ ಎಲ್ಲ ಸಾಕ್ಷಿಗಳನ್ನು ನಾವು ನಿಮಗೆ ತಲುಪಿಸಿದ್ದು, ನೀವು ಅದನ್ನು ಸಿಐಡಿಗೆ ತಲುಪಿಸಿದರಾ? ಸಿಐಡಿಯಿಂದ ಸಾಕ್ಷಿ ಪರಿಶೀಲನೆ ಮಾಡಿಸಿದಿರಾ? ಆ ಸಾಕ್ಷಿಗಳು ಎಲ್ಲಿವೆ? ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?


8.           ಅಂದಿನ ಹಾಗೂ ಇಂದಿನ ಗೃಹಸಚಿವರಿಗೆ ಎಲ್ಲವೂ ಗೊತ್ತಿದೆ. ಯತ್ನಾಳ್ ಅವರು ಅವಕಾಶ ಸಿಕ್ಕಾಗೆಲ್ಲಾ ಇದರಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಇದ್ದಾರೆ. ಈ ಡೀಲ್ ವಿಧಾನಸೌಧದಲ್ಲೇ ಆಗಿದೆ ಎಂದು ಹೇಳಿದ್ದಾರೆ. ಅವರು ಬಹಿರಂಗವಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ವಿಚಾರಣೆ ನಡೆಸಿದರಾ? ನಾನು ಪತ್ರಿಕೆಗಳಲ್ಲಿ ಬಂದಿರುವ ಅಂಶಗಳ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೋಟೀಸ್ ಜಾರಿ ಮಾಡಿದ್ದರು. ಇವರಿಗೆ ಮಾಹಿತಿ ಎಲ್ಲಿಂದ ಬಂತು? ಯಡಿಯೂರಪ್ಪ ಹಾಗೂ ವಿಜೇಂದ್ರ ಅವರ ವಿಚಾರಣೆ ಮಾಡಿದರಾ? ಕಾಂಗ್ರೆಸ್ ಗೊಂದು ನ್ಯಾಯಾ, ಬಿಜೆಪಿಗೊಂದು ನ್ಯಾಯವೇ?


9.           ಅಮೃತ್ ಪೌಲ್ ಅವರು ಸೆಕ್ಷನ್ 164ಎ ನಲ್ಲಿ ಹೇಳಿಕೆ ನೀಡಲು ಸಿದ್ಧ ಎಂದು ಹೇಳಿದ್ದರೂ ನೀವು ಹೇಳಿಕೆ ದಾಖಲಿಸಿಕೊಳ್ಳಲು ಹಿಂಜರಿಯುತ್ತಿರುವುದೇಕೆ? ಯಾವುದಕ್ಕೆ ಹೆದರುತ್ತಿದ್ದೀರಿ? ನಿಮ್ಮ ಪ್ರಕಾರ ಕಾಂಗ್ರೆಸ್ ನಾಯಕರ ಹೆಸರು ಬರುತ್ತದೆಯಲ್ಲವೇ? ಆದರೂ ಹಿಂಜರಿಯುತ್ತಿರುವುದೇಕೆ? ನಿಮ್ಮ ಧಮ್ಮು, ತಾಕತ್ತು ಇದರಲ್ಲಿ ತೋರಿಸಿ. ಕೇವಲ ಜನಸ್ಪಂದನೆ ಕಾರ್ಯಕ್ರಮದಲ್ಲಿ ಧಮ್ಮು, ತಾಕತ್ತು ಬಗ್ಗೆ ಮಾತನಾಡುವುದಲ್ಲ. ನಿಮಗೆ ತಾಕತ್ತಿದ್ದರೆ ನೇಮಕಾತಿ ಪರೀಕ್ಷೆ ಬರೆದಿರುವ ಅಬ್ಯರ್ಥಿಗಳಿಗೆ ನ್ಯಾಯ ಒದಗಿಸಿ ಪೌಲ್ ಅವರ ಹೇಳಿಕೆ ದಾಖಲಿಸಿಕೊಳ್ಳಿ.


10.         ಇನ್ನು ಈ ವಿಚಾರವಾಗಿ ಇಡಿ ತನಿಖೆ ನಡೆಸಿದ್ದು, ಇದಾದ ನಂತರವೂ ಅನುಮಾನ ಯಾಕೆ? ನ್ಯಾಯಾಂಗ ತನಿಖೆಗೆ ನೀಡುತ್ತಿಲ್ಲ ಯಾಕೆ? ಎಲ್ಲೆಡೆ ನೀವು ನಿಮ್ಮ ಬೆನ್ನು ಚಪ್ಪರಿಸಿಕೊಲ್ಳುತ್ತಿದ್ದೀರಿ. ಹಾಗಿದ್ದರೆ ನ್ಯಾಯಾಂಗ ತನಿಖೆ ಮಾಡಿಸಿ. ನಾವು ಹಿಂದಿನಿಂದಲೂ ಆಗ್ರಹಿಸುತ್ತಿದ್ದೇವೆ.


ಇಲ್ಲಿ ಹಾಸ್ಯಾಸ್ಪದ ಎಂದರೆ, ಸಾಕ್ಷಿ ಇದ್ದರೆ ಕೊಡಿ ಎಂದು ಗೃಹ ಸಚಿವರು ಕೇಳುತ್ತಿದ್ದಾರೆ. ನೀವು ಸಚಿವರಾಗಿದ್ದು, ಗುಪ್ತಚರ, ಪೊಲೀಸ್ ಇಲಾಖೆ ನಮ್ಮ ಕಯಲ್ಲಿದೆ. ನೀವು ಅಭ್ಯರ್ಥಿಗಳ ಬಳಿ ಸಾಕ್ಷಿ ಕೇಳುತ್ತಿದ್ದೀರಿ. ಇದೇನಾ ಗೃಹಸಚಿವರ ಜವಾಬ್ದಾರಿ? ನೀವು ಏನು ಮಾಡಲು ಹೊರಟಿದ್ದೀರಿ. ನಾವು ಕೇಳಿದರೆ ನಮ್ಮನ್ನು ಪ್ರಚಾರ ಪ್ರಿಯರು ಎನ್ನುತ್ತೀರಿ. ಹೌದು ನಾವು ಪ್ರಚಾರ ಪ್ರಿಯರೆ, ನಾವು ಕೇಳಿರುವ ಈ 10 ಪ್ರಶ್ನೆಗಳಿಗೆ ಉತ್ತರಿಸಿ.


ನಿಮಗೆ ತಾಕತ್ತು ಧಮ್ಮು ಇದ್ದರೆ ಈ ಬಗ್ಗೆ ಚರ್ಚೆ ಮಾಡಿ. ನೀವು ಮಾಧ್ಯಮ ಅಥವಾ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ. ನಾವು ಸಿದ್ಧವಿದ್ದೇವೆ. ನಾವು ಏನಾದರೂ ಕೇಳಿದರೆ, ಕಾಂಗ್ರೆಸ್ ಅವಧಿಯಲ್ಲಿ ನಡೆದಿಲ್ಲವಾ ಎಂದು ಕೇಳುತ್ತೀರಿ. ಇದೇನಾ ನಿಮ್ಮ ಜವಾಬ್ದಾರಿ. ಇಷ್ಟೆನಾ ನಿಮ್ಮ ಸರ್ಕಾರದ ಸಾಮರ್ಥ್ಯ? ಈ ಅಸಮರ್ಥ ಉತ್ತರ ನೀಡಲು, ಇಂತಹ ಅಯ್ಯೋಗ್ಯ ಸರ್ಕಾರ ಮಾಡಲು ಇವರು ಸಾವಿರ ಕೋಟಿ ಖರ್ಚು ಮಾಡಿ ಬಾಂಬೆತನಕ ಹೋಗಿದ್ದರು. ನೀವು ಹಾಕಿರುವ ಬಂಡವಾಳ ಹಿಂಪಡೆಯಲು ಸರ್ಕಾರ ನಡೆಸುತ್ತಿದ್ದೀರಾ? ಯುವಕರ ಭವಿಷ್ಯ ಹಾಳು ಮಾಡುತ್ತಿದ್ದೀರಲ್ಲಾ ನಾಚಿಕೆಯಾಗುವುದಿಲ್ಲವೇ? ಅದಾಗ್ಯೂ ದೊಡ್ಡಮಾತಗಳನ್ನಾಡುತ್ತೀರಿ.


ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ : ಶಾರೀಕ್‌ಗೆ ಬೆಂಗಳೂರಿನ ವಿಕ್ಟೋರಿಯಾದಲ್ಲಿ ಚಿಕಿತ್ಸೆ


ಮೊನ್ನೆ ಅವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಯುವಕರಿಗೆ 1 ಲಕ್ಷ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ? ಹೇಗೆ ನೀಡುತ್ತೀರಾ ಸ್ವಾಮಿ? ಕೆಎಎಸ್ ಒಂದೂ ಆಗಿಲ್ಲ, ಕೆಪಿಎಸ್ ಸಿ 9-11 ಆಗಿರಬಹುದು. ಎಲ್ಲವೂ ಹಗರಣವಾಗಿವೆ. ಈ ಸರ್ಕಾರದಲ್ಲಿ ಆಗಿರುವ ಎಲ್ಲ ನೇಮಕಾತಿ ಹಗರಣವಾಗಿದ್ದು, ನೀವು 1 ಲಕ್ಷ ಉದ್ಯೇಗ ನೀಡುತ್ತೀರಾ? 54 ಸಾವಿರ ಅಭ್ಯರ್ಥಿಗಳು ನಮ್ಮನ್ನು ನೋಡುತ್ತಿದ್ದು ಅವರಿಗೆ ಯಾವ ಸಂದೇಶ ರವಾನಿಸುತ್ತಿದ್ದೀರ?


ಈ ಸರ್ಕಾರ ಬೆಳಗ್ಗೆ ಒಂದು, ಸಂಜೆ ಒಂದು, ಡಿಜಿ, ಸಿಎಂ, ಗೃಹಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ.ಇದೇನಾ ನೀವು ಸರ್ಕಾರ ನಡೆಸುವ ರೀತಿ. ನೀವು ಮಾಡಲು ಹೊರಟಿರುವ ಕೆಲಸಕ್ಕೆ ಉತ್ತರ ನೀಡಿ. ಈ ಆಡಿಯೋ ಯಾರದ್ದು? ಅದರಲ್ಲಿ ಏನು ಚರ್ಚೆ ಮಾಡಿದ್ದೀರಿ? ಅದು ಸತ್ಯವೇ ಅಲ್ಲವೇ? ಎಲ್ಲವೂ ಹೊರಬರಬೇಕು. ಈ ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಫ್ಪಿಸಬೇಕು. ಸದನದಲ್ಲಿ ಈ ಬಗ್ಗೆ ಚರ್ಚಿಸಲು ನಾವು ತಯಾರಾಗಿದ್ದು, ಅವಕಾಶ ಮಾಡಿಕೊಡಬೇಕು. ಕೇವಲ ಪಿಎಸ್ ಐ ಮಾತ್ರವಲ್ಲ, ಜೆಇಇ, ಡಿಡಬ್ಲ್ಯೂ ಡಿ, ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಎಲ್ಲ ನೇಮಕಾತಿ ಹುದ್ದೆ ಅಕ್ರಮದ ಚರ್ಚೆ ಆಗಬೇಕು.


ಈ ಸರ್ಕಾರದ ಎಲ್ಲ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ನೀವು 1 ಲಕ್ಷ ನೀಡುವುದಾಗಿ ಹೇಳುತ್ತಿದ್ದೀರಿ. ಕಳೆದ ಮೂರು ವರ್ಷಗಳಲ್ಲಿ ಒಬ್ಬರಿಗೂ ಕೆಲಸ ನೀಡಿಲ್ಲ. ಹೀಗಾಗಿ ನಾವು ಈ ಬಗ್ಗೆ ನಿರಂತರ ಹೋರಾಟ ಮಾಡುತ್ತೇವೆ. ಯುವಕರ ಭವಿಷ್ಯಕ್ಕಾಗಿ ನಾವು ಸದಾ ಇಂತಹ ಹೋರಾಟಕ್ಕೆ ಬೆನ್ನೆಲುಬಾಗಿ ಇರುತ್ತೇವೆ. ಸರ್ಕಾರ ಉತ್ತರ ನೀಡುವವರೆಗೂ ನಾವು ಪ್ರಶ್ನೆ ಕೇಳುತ್ತಲೇ ಇರುತ್ತೇವೆ. ಸರ್ಕಾರಕ್ಕೆ ಮಾನ ಮಾರ್ಯಾದೆ ಇದ್ದರೆ ಮೊದಲು ಗೃಹ ಸಚಿವರಿಂದ ರಾಜೀನಾಮೆ ಪಡೆಯಬೇಕು.


ಕುಕ್ಕರ್ ಬ್ಲಾಸ್ಟ್ ಆಕಸ್ಮಿಕವಾಗಿ ಸ್ಫೋಟಗೊಂಡ ನಂತರ ಇವರಿಗೆ ಗೊತ್ತಾಗಿದೆ. ಆದರೂ ನಾವು ಹಿಡಿದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸ್ಫೋಟ ಮಾಡಲು ಮುಂದಾಗಿದ್ದ ಯುವಕ ತರಬೇತಿ ಪಡೆದಿದ್ದು ಗೃಹ ಸಚಿವರ ತಾಲೂಕಿನಲ್ಲಿ. ನಿಮ್ಮ ಮೂಗಿನ ಕೆಳಗೆ ಎಲ್ಲ ನಡೆಯುತ್ತಿದ್ದರೂ ಅವರಿಗೆ ಗೊತ್ತಿಲ್ಲ. ರಾಜ್ಯದಲ್ಲಿ ಗುಪ್ತಚರ ವಿಫಲವಾಗಿದೆ. ಹಗರಣ ಆದರೆ ನೀವೇ ಅವರಿಗೆ ಸಾಕ್ಷಿ ನೀಡಿ ಎಂದು ಕೇಳುತ್ತೀರಿ. ಇದರಲ್ಲಿ ಗೃಹ ಸಚಿವರು ವಿಫಲರಾಗಿದ್ದು ಅವರು ರಾಜೀನಾಮೆ ಕೇಳಬೇಕು. ಇನ್ನು ಆಗಿನ ಗೃಹ ಸಚಿವರು ಅಂದರೆ ಈಗಿನ ಮುಖ್ಯಮಂತ್ರಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ನಿಮಗೆ ಧಮ್ಮು ತಾಕತ್ತು ಇದ್ದರೆ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಆಗ್ರಹಿಸುತ್ತೇವೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.