ಬೆಳಗಾವಿ: ಪ್ರವಾದಿ ಮಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ನಾಯಕಿ ನೂಪೂರ್ ಶರ್ಮಾ ಪ್ರತಿಕೃತಿಯನ್ನು ನಡುರಸ್ತೆಯಲ್ಲಿಯೇ ಕಿಡಿಗೇಡಿಗಳು ನೇತುಹಾಕಿದ್ದಾರೆ. ಕುಂದಾನಗರಿ ಬೆಳಗಾವಿಯಲ್ಲಿ ಈ ಘಟನೆ ನಡೆದಿದೆ.  


COMMERCIAL BREAK
SCROLL TO CONTINUE READING

ನಗರದ ಪೋರ್ಟ್ ರಸ್ತೆಯ ಮಸೀದಿಯ ಬಳಿಯ ನಡುರಸ್ತೆಯಲ್ಲೇ ಎರಡು ಬದಿಯ ಕಟ್ಟಡಗಳಿಗೆ ಹಗ್ಗ ಕಟ್ಟಿ ಗಲ್ಲಿಗೆ ಏರಿಸಿದ ರೀತಿಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಿ ಕಿಡಿಗೇಡಿಗಳು ಪರಾರಿ ಆಗಿದ್ದಾರೆ. ನಡುರಸ್ತೆಯಲ್ಲಿಯೇ ಬಿಜೆಪಿ ಮಾಜಿ ನಾಯಕಿಯ ಪ್ರತಿಕೃತಿ ನೇತು ಹಾಕಿರುವ ಪೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನಿನ್ನೆ(ಜೂನ್ 9) ತಡರಾತ್ರಿ ಅಪರಿಚಿತ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದಾರೆ.


ಇದನ್ನೂ ಓದಿ: ಗಂಡ ಹೆಂಡತಿ ಮಕ್ಕಳನ್ನು ಒಗ್ಗೂಡಿಸಿದ ಹೈಕೋರ್ಟ್ ಕಾನೂನು ಸೇವಾ ಸಮಿತಿ


ವಿಷಯ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಾರ್ಕೇಟ್ ಠಾಣೆ ಪೋಲಿಸರು ಭೇಟಿ ನೀಡಿದ್ದಾರೆ. ಬಳಿಕ ಹಗ್ಗ ಕಟ್ಟಿ ನೇತು ಹಾಕಿದ್ದ ಪ್ರತಿಕೃತಿಯನ್ನು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಇನ್ನೂ ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂಪರ ಸಂಘಟನೆಗಳ ನಾಯಕರು ಆಕ್ರೋಶ ಹೊರಹಾಕಿದ್ದಾರೆ‌. ಮಾರ್ಕೆಟ್ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬೆಳಗಾವಿಯ ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ಬಿಜೆಪಿ ರಾಷ್ಟ್ರೀಯ ವಕ್ತರರಾಗಿದ್ದ ನೂಪುರ್ ಶರ್ಮಾ ಅವರು ಟಿವಿ ಸಂವಾದವೊಂದರಲ್ಲಿ ಪ್ರವಾದಿ ಮಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದಲ್ಲದೆ ದೆಹಲಿ ಬಿಜೆಪಿ ಘಟಕದ ಮಾಧ‍್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಸಹ ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್‍ಗಳನ್ನು ಪ್ರಕಟಿಸಿದ್ದು ವಿವಾದ ಸೃಷ್ಟಿಸಿತ್ತು.


ಇದನ್ನೂ ಓದಿ: Chaddi Campaign: ಚಡ್ಡಿ ಸುಟ್ಟು ಶಾಸಕ ಪಿ.ರಾಜೀವ್ ಮನೆಮುಂದೆ ಬೂದಿ ಇಟ್ಟರು!


ಪ್ರವಾದಿ ಮಹಮ್ಮದರ ಅವಹೇಳನ ಮಾಡಿದ್ದಕ್ಕೆ ಅರಬ್ ರಾಷ್ಟ್ರಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಲವು ಮಧ‍್ಯಪ್ರಾಚ್ಯ ರಾಷ್ಟ್ರಗಳು ಭಾರತದ ರಾಯಭಾರಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದವು. ಕುವೈತ್ ಸೂಪರ್ ಮಾರ್ಕೆಟ್‍ನಿಂದ ಭಾರತದ ಉತ್ಪನ್ನಗಳನ್ನು ಬ್ಯಾನ್ ಮಾಡಲಾಗಿತ್ತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.