ಬೆಂಗಳೂರು : ವಿವಿಧ ಇಲಾಖೆ ನೇಮಕಾಗಿಗಾಗಿ ಪರೀಕ್ಷೆ ಬರೆದು ವರುಷ ಕಳೆದ್ರೂ ಬಾರದ ಫಲಿತಾಂಶಕ್ಕೆ ಅಭ್ಯರ್ಥಿ ಬೇಸತ್ತು ಇಂದು ಹೋರಾಟಕ್ಕಿಳಿದಿದ್ದರು. ಕೆಪಿಎಸ್ ಸಿ ಕಚೇರಿ ಮುಂದೆ ನೊಂದ ಅಭ್ಯರ್ಥಿಗಳ ಆಕ್ರೋಶ ಇಂದು ಮಡುಗಟ್ಟಿತ್ತು. ಹೋರಾಟದ ಕಿಚ್ಚಿಗೆ ಪೊಲೀಸರು ಅಭ್ಯರ್ಥಿಗಳ ನಡುವೆ ನೂಕಾಟ, ತಳ್ಳಾಟ, ಲಘು ಲಾಠಿ ಪ್ರಹಾರವೂ ನಡೆದಿದೆ.


COMMERCIAL BREAK
SCROLL TO CONTINUE READING

ವರ್ಷಗಳೇ ಕಳೆದರೂ ನೇಮಕಾತಿಯಿಲ್ಲ


ಕೆಪಿಎಸ್‌ಸಿಗೆ ಹಿಡಿದಿರೋ ಗ್ರಹಣ ಅದ್ಯಾಕೋ ಬಿಡುವಂತೆ ಕಾಣುತ್ತಿಲ್ಲ.  ಕೆಪಿಎಸ್ ಸಿ ಪರೀಕ್ಣೆ‌ ಬರೆದ ಫಲಿತಾಂಶ ಬಾರದ ನೊಂದು ಇಂದು ಮತ್ತೊಮ್ಮೆ ಆಕ್ರೋಶ ಹೋರಾಟದ ಹಾದಿ ತುಳಿದಿದ್ದರು. ಸರ್ಕಾರದ 3 ಸಾವಿರ ಹುದ್ದೆಗಳಿಗೆ ನಡೆದಿದ್ದ ಗೆಜೆಟೆಡ್ ಪ್ರೊಬೇಶನರಿ, ಎಸ್ಡಿಎ, ಪಿಡಬ್ಲ್ಯೂಡಿ ಜೆಇ, ಎಇ ಗ್ರೂಪ್ ಸಿ, ಎಸಿಎಫ್ ಸೇರಿದಂತೆ ಹಲವು ಹುದ್ದೆಗಳಿಗಾಗಿ ಪರೀಕ್ಷೆ ಆಗಿ 17 ತಿಂಗಳು ಕಳೆದಿದ್ರೂ ಫಲಿತಾಂಶ ಮಾತ್ರ ಬಂದಿಲ್ಲ. ಇನ್ನು ಎಸ್ಡಿಎ ನೇಮಕಾತಿಗೆ 2021ರ ಅಕ್ಟೋಬರ್ ನಲ್ಲಿ, ಪಿಡಬ್ಲ್ಯೂಡಿ ಜೆಇ ಹಾಗು ಎಇ ನೇಮಕಾತಿಗೆ 2021 ಡಿಸೆಂಬರ್ನಲ್ಲಿ ಪರೀಕ್ಷೆ ನಡೆದು ಅದರ ಫಲಿತಾಂಶ ಬಂದಿದ್ರೂ ಹಲವು ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಂದಿಲ್ಲ ಎಂದು ಆಗ್ರಹಿಸಿ  200ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಸೌಧದ ಮುಂದೆ ಪ್ರತಿಭಟನೆ ನಡೆಸಿದರು.


ಇದನ್ನೂ ಓದಿ : NavyaShree Rao : ಪೊಲೀಸ್ ವಿಚಾರಣೆಗೆ ಹಾಜರಾಗಿದ ನವ್ಯಶ್ರೀ ರಾವ್..!


ಒತ್ತಾಯ ಪೂರ್ವಕವಾಗಿ ಬಂಧನ


ಕೆಪಿಎಸ್‌ಸಿ ಅಭ್ಯರ್ಥಿಗಳು ಘೋಷಣೆ ಕೂಗಿ ಪ್ರತಿಭಟಿಸಲು ಮುಂದಾದ್ರು‌ ಈ ವೇಳೆ ಪ್ರತಿಭಟನೆ ಮಾಡದಂತೆ ಸ್ಥಳೀಯ ಪೊಲೀಸರ ಸೂಚನೆ ನೀಡಿದರು. ನೂರಾರು ಜನರು ಇಲ್ಲಿ ಸೇರುವಂತಿಲ್ಲ, ಪ್ರತಿಭಟನೆ ಮಾಡುವಂತಿಲ್ಲ.‌ ಆದರೆ ಇದಕ್ಕೆ ಅಭ್ಯರ್ಥಿಗಳು ಲಿಖಿತ ರೂಪದಲ್ಲಿ ನಮಗೆ ದಿನಾಂಕ ತಿಳಿಸೋವರೆಗೂ ಇಲ್ಲಿಂದ ಕದಲೋದಿಲ್ಲ ಎಂದು ಭಿತ್ತಿ ಪತ್ರ ಹಿಡಿದು ಧಿಕ್ಕಾರ ಕೂಗಿದರು. ಕೊನೆಗೆ ಕೆಪಿಎಸ್ ಸಿ ಕಾರ್ಯದರ್ಶಿ ಸುರಲ್ಕರ್ ವಿಕಾಸ್ ಕಿಶೋರ್ ಆಗಮಿಸಿ ಭರವಸೆ ನೀಡಿದರು. ಆದರೂ ಅಲ್ಲಿಂದ ಕಾಲ್ಕಿತ್ತದ ಪರಿಣಾಮ ಪ್ರತಿಭಟನಾಕಾರರ ಅಭ್ಯರ್ಥಿಗಳ ಮೇಲೆ ವಾಗ್ವಾದ ತಾರಕಕ್ಕೇರಿತು. ಅಭ್ಯರ್ಥಿಗಳು ರೊಚ್ಚಿಗೆದ್ದು ಕೂಗಾಡಿ, ಚೀರಾಟ ನಡೆಸಿ ಉದ್ಯೋಗ ಸೌಧ ಮುತ್ತಿಗೆಗೆ ಮುಂದಾದ್ರು.‌ ಆನಂತರ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. ಮಹಿಳಾ ಮುಖಂಡರು, ಮಹಿಳಾ ಅಭ್ಯರ್ಥಿಗಳ ಮೇಲೆ ನೂಕಾಟ, ತಳ್ಳಾಟವಾಯಿತು. ಅಲ್ಲಿಂದ ಪ್ರತಿಭಟನಾಕಾರನ್ನು ಚದುರಿಸಿ, ಕೆಲವರನ್ನು ಒತ್ತಾಯಪೂರ್ವಕವಾಗಿ ವಶಕ್ಕೆ ಪೊಲೀಸರು ಪಡೆದರು.


ಈ ಹಿಂದೆ ಪ್ರತಿಭಟನೆ ನಡೆಸಿದ್ದ ಮಾಜಿ ಸಚಿವ ಸುರೇಶ್ ಕುಮಾರ್


ಸದ್ಯ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡ್ತಿರುವ ಕೆಪಿಎಸ್‌ಸಿ ವಿರುದ್ಧ ಮಾಜಿ ಸಚಿವ ಸುರೇಶ್ ಕುಮಾರ್ ಪ್ರತಿಭಟಿಸಿದ್ರು. ಈ ಬಾರಿ ಮತ್ತೊಮ್ಮೆ ಅಭ್ಯರ್ಥಿಗಳು ಹೋರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆಯೂ ಹೀಗೆ ಫಲಿತಾಂಶ ವಿಳಂಬ ಮಾಡಿದ್ರೆ ಹೋರಾಟ ಇನ್ನಷ್ಟು ತಾರಕ್ಕೇರೋದು ಗ್ಯಾರಂಟಿ. 


ಇದನ್ನೂ ಓದಿ : Bengaluru : ಸೆರೆಸಿಕ್ಕಿದ್ದು ಒಬ್ಬರಲ್ಲ ಇಬ್ಬರು ಶಂಕಿತ ಉಗ್ರರು : 10 ದಿನ ಸಿಸಿಬಿ ವಶಕ್ಕೆ ನೀಡಿದ ಕೋರ್ಟ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.