ನಟ ಪ್ರಕಾಶ್ ರೈ ಗೆ ಪ್ರಶಸ್ತಿ ಪ್ರಧಾನ ಖಂಡಿಸಿ ಪ್ರತಿಭಟನೆ
ಉ.ಪ್ರ ಸಿಎಂ ಯೋಗಿ ಆದಿತ್ಯನಾಥ್ ವಿರುದ್ದ ರೈ ಮಾತನಾಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ.
ಉಡುಪಿ: 'ಡಾ.ಶಿವರಾಮ ಕಾರಂತ' ಹುಟ್ಟೂರು ಪ್ರಶಸ್ತಿ ಪ್ರದಾನ ಹಿನ್ನೆಲೆಯಲ್ಲಿ ಕೋಟ ಗ್ರಾಮದ ಕಾರಂತ ಥೀಮ್ ಪಾರ್ಕ್ಗೆ ಆಗಮಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ಗೆ ಪ್ರಶಸ್ತಿ ಪ್ರಧಾನ ಮಾಡದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಪ್ರಕಾಶ್ ರೈ ಮಾತನಾಡಿರುವ ಹಿನ್ನೆಲೆಯಲ್ಲಿ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ನೀಡದಂತೆ ಆಗ್ರಹಿಸಿ, ಉಡುಪಿ ತಾಲೂಕಿನ ಕೋಟತಟ್ಟು ಗ್ರಾಮದಲ್ಲಿ ನಾಥಾ ಪಂಥದ ಜೋಗಿ ಸಮುದಾಯದಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಥೀಮ್ ಪಾರ್ಕ್ ಸುತ್ತಮುತ್ತ ಪೋಲೀಸ್ ಬಿಗಿ ಭದ್ರತೆ ಏರ್ಪಟ್ಟಿದ್ದು, ಭದ್ರತೆಗಾಗಿ 100ಕ್ಕೂ ಹೆಚ್ಚು ಪೋಲೀಸರ ನಿಯೋಜನೆ ಮಾಡಲಾಗಿದೆ. ಸಮಾರಂಭದಲ್ಲಿ ಪಾಲ್ಗೊಲ್ಲುವವರನ್ನು ಮಾತ್ರ ಪರೀಕ್ಷಿಸಿ ಒಳಗೆ ಬಿಡಲಾಗುತ್ತಿದೆ.