ರೈಲು ಬದಲಾವಣೆ ಖಂಡಿಸಿ ಮಾರಿಕುಪ್ಪಂ ರೈಲ್ವೇ ನಿಲ್ಧಾಣದಲ್ಲಿ ಪ್ರತಿಭಟನೆ
ಕೋಲಾರ: ಸ್ವರ್ಣ ರೈಲಿನ ಬದಲಿಗೆ ಪುಷ್ಪುಲ್ ರೈಲು ಹಾಕಿರುವ ಕಾರಣ ಕೋಲಾರ ಜಿಲ್ಲೆಯ ಕೆಜಿಎಫ್ ನಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ಕಾರ್ಯಕರ್ತರಿಂದ ಬೆಳಿಗ್ಗೆ 6:30 ರಿಂದ ಪ್ರತಿಭಟನೆ ನಡೆಯುತ್ತಿದೆ.
ಮಾರಿಕುಪ್ಪಂ ನಿಂದ ಬೆಂಗಳೂರಿಗೆ ಸುಮಾರು 5000ಕ್ಕೂ ಹೆಚ್ಚು ಕಾಮಿಕರು ಪ್ರತಿದಿನ ಪ್ರಯಾಣ ಮಾಡುತ್ತಿದ್ದರು. ಸ್ವರ್ಣ ರೈಲಿನಲ್ಲಿ ಬೋಗಿಗಳು ಹೆಚ್ಚಿದ್ದರೂ ಸಹ ಜನರು ನೂಕು ನುಗ್ಗಲಿನಲ್ಲೇ ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಸ್ವರ್ಣ ರೈಲಿನ ಬದಲಿಗೆ ಪುಷ್ಪುಲ್ ರೈಲನ್ನು ಹಾಕಲಾಗಿದ್ದು, ಅದರಲ್ಲಿ ಬೋಗಿಗಳು ಕಡಿಮೆ ಇವೆ ಇದರಿಂದ ಪ್ರತಿದಿನ ಓಡಾಡುವ ಕಾರ್ಮಿಕರಿಗೆ ಬಹಳ ತೊಂದರೆ ಉಂಟಾಗಿದೆ. ಹಾಗಾಗಿ ರೈಲು ಬದಲಾವಣೆಯನ್ನು ಖಂಡಿಸಿ ಇಂದು ಮುಂಜಾನೆಯಿಂದಲೂ ಪ್ರತಿಭಟನೆ ನಡೆಸಲಾಗುತ್ತಿದೆ.
ಸಂಸದ ಕೆ.ಎಚ್. ಮುನಿಯಪ್ಪ ಪುತ್ರಿ ರೂಪ ನೇತೃತ್ವದಲ್ಲಿ ರೈಲು ಬದಲಾವಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.