KPSC ಪರೀಕ್ಷೆಗೆ ಹೊರಟವರಿಗೆ ಅಡ್ಡುಗಾಲಾದ ರೈಲ್ವೆ ಕಾಮಗಾರಿ... ಟ್ರೈನ್ ತಡವಾಗಿದ್ದಕ್ಕೆ ಅಭ್ಯರ್ಥಿಗಳಿಂದ ಪ್ರತಿಭಟನೆ
Protest in Raichuru: ಕೆಪಿಎಸ್‌ಸಿ (KPSC)ಆಯೋಜಿಸಿದ್ದ ಲೋಕೋಪಯೋಗಿ ಇಲಾಖೆಯ ಎಇ (AE) ಪರೀಕ್ಷೆ ಬರೆಯಲು ಹೊರಟಿದ್ದ ಅಭ್ಯರ್ಥಿಗಳು ರೈಲು ತಡವಾಗಿದ್ದರಿಂದ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.
ರಾಯಚೂರು: ಕೆಪಿಎಸ್‌ಸಿ (KPSC)ಆಯೋಜಿಸಿದ್ದ ಲೋಕೋಪಯೋಗಿ ಇಲಾಖೆಯ ಎಇ (AE) ಪರೀಕ್ಷೆ ಬರೆಯಲು ಹೊರಟಿದ್ದ ಅಭ್ಯರ್ಥಿಗಳು ರೈಲು ತಡವಾಗಿದ್ದರಿಂದ ಆಕ್ರೋಶಗೊಂಡು ಪ್ರತಿಭಟನೆ (Protest in Raichuru) ನಡೆಸಿದ ಘಟನೆ ರಾಯಚೂರಲ್ಲಿ ನಡೆದಿದೆ.
ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಮಂಗಳವಾರ ಬೆಳಗ್ಗೆ 6 ಗಂಟೆಗೆ ಕಲಬುರಗಿ ತಲುಪಬೇಕಿದ್ದವರು, 9 ಗಂಟೆಯಾದರೂ ರಾಯಚೂರಿನಲ್ಲೇ ಉಳಿಯುವಂತಾಗಿತ್ತು. ರೊಚ್ಚಿಗೆದ್ದ ಅಕಾಂಕ್ಷಿಗಳು ಹಾಸನ-ಸೋಲ್ಲಾಪುರ ರೈಲು (Hassan-Solapur Train) ತಡೆದು ಪ್ರತಿಭಟಿಸಿದರು
ಕಾಮಗಾರಿ ಎಫೆಕ್ಟ್:
ಹಿಂದೂಪುರದಲ್ಲಿ (Hindupura) ನಡೆಯುತ್ತಿರುವ ಡಬ್ಲಿಂಗ್ ಕಾಮಗಾರಿಯಿಂದಾಗಿ ತಾಂತ್ರಿಕ ಸಮಸ್ಯೆಗಳ ಕಾರಣ ನಿನ್ನೆ ರಾತ್ರಿ ಕೆಲ ರೈಲುಗಳನ್ನು ತಡೆಹಿಡಿಯಲಾಗಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗಿತ್ತು. 1000ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಘೋಷಣೆ ಕೂಗಿ, ಪರೀಕ್ಷೆ ದಿನ ಮುಂದೂಡಲು ಒತ್ತಾಯಿಸಿದರು.
3 ವರ್ಷಗಳ ಬಳಿಕ ಪರೀಕ್ಷೆ:
ಅರ್ಜಿ ಸಲ್ಲಿಸಿ ಮೂರು ವರ್ಷಗಳ ಬಳಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಇದೀಗ ಮತ್ತೆ ಪರೀಕ್ಷೆ ಕೈತಪ್ಪಿದ್ದಕ್ಕೆ ಬೇಸರಗೊಂಡ ಅಭ್ಯರ್ಥಿಗಳು ರೈಲು ಟ್ರ್ಯಾಕ್ (Railway Track) ಮೇಲೆ ನಿಂತು ಆಕ್ರೋಶ ಹೊರಹಾಕಿದ್ರು.
ಅದಲು-ಬದಲು ಆಟ:
ದಕ್ಷಿಣ ಭಾಗದ ಜಿಲ್ಲೆಗಳ ಅರ್ಜಿದಾರರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಅದಲು ಬದಲು ಮಾಡಿ ಪರೀಕ್ಷಾ ಕೇಂದ್ರ (Exam Centre) ನೀಡಲಾಗಿತ್ತು. ಈ ಕಾರಣಕ್ಕೆ ಮೈಸೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಿಂದ ಹಾಸನ-ಸೋಲ್ಲಾಪುರ ರೈಲಿನಲ್ಲಿ ಬರುತ್ತಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರೂ ಅಭ್ಯರ್ಥಿಗಳು ಪ್ರತಿಭಟನೆ ಹಿಂಪಡೆದಿಲ್ಲ.
ಇದನ್ನೂ ಓದಿ: ವಿಧಾನಪರಿಷತ್ ಚುನಾವಣಾ ಫಲಿತಾಂಶ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತಲಾ ಒಂದೊಂದು ಸ್ಥಾನದಲ್ಲಿ ಗೆಲುವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.