ಬೆಂಗಳೂರು : ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಮತ್ತೊಬ್ಬ ಪಿಎಸ್ಐಯನ್ನ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಿಎಸ್ಐ ಶರೀಫ್‌ ಕಳ್ಳಿಮಠ ಬಂಧಿತ ಆರೋಪಿ. 


COMMERCIAL BREAK
SCROLL TO CONTINUE READING

ಪಿಎಸ್ಐ ಶರೀಫ್ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶರೀಫ್ 2019ರ ಬ್ಯಾಚ್ ನಲ್ಲಿ ಟಾಪರ್ ಆಗಿದ್ದ. ಆರೋಪಿ ಶರೀಫ್ ಪಿಎಸ್ಐ ಅಕ್ರಮ ತನಿಖೆ ಚುರುಕುಗೊಳ್ಳುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ. ಸಿಐಡಿ ತಂಡ ಶರೀಫ್ ನನ್ನ ಮುಂಬೈನಲ್ಲಿ ಅಡಗಿದ್ದ ಶರೀಫ್‌ನ ಬಂಧಿಸಿದೆ. ಈಗ  ಸಿಐಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಕಸ್ಟಡಿಗೆ ಪಡೆದಿದ್ದಾರೆ. 


ಇದನ್ನೂ ಓದಿ : PSI Recruitment scam : ಪಿಎಸ್ಐ ನೇಮಕಾತಿ ಅಕ್ರಮ : ಸ್ಟ್ರಾಂಗ್ ರೂಮ್ ಗೆ ನುಗ್ಗಿ 22 OMR ಶೀಟ್ ತಿದ್ದಿದ್ದ ಪೊಲೀಸರು


ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ್ದು, 3065 ಪುಟಗಳ ಚಾರ್ಜ್ ಶೀಟ್ ನಲ್ಲಿ 202 ಸಾಕ್ಷಿಗಳು ಹಾಗೂ 330 ದಾಖಲೆ, 30 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.


ಅಕ್ಟೋಬರ್‌ 3 ರಂದು 545 ಪಿಎಸ್‌ಐಗಳ ನೇಮಕಾತಿ ಲಿಖಿತ ಪರೀಕ್ಷೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. 53 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಉತ್ತರ ಪತ್ರಿಕೆಗಳು, ಒಎಂಆರ್‌ ಪ್ರತಿಗಳನ್ನು ನೇಮಕಾತಿ ವಿಭಾಗದ 'ಸ್ಟ್ರಾಂಗ್‌ ರೂಂ'ನಲ್ಲಿ ಭದ್ರವಾಗಿ ಇರಿಸಲಾಗಿತ್ತು. ಈ ಪ್ರಕ್ರಿಯೆ ಮುಗಿದ ಮೂರೇ ದಿನಕ್ಕೆ ಹಣ ಕೊಟ್ಟ 27 ಅಭ್ಯರ್ಥಿಗಳ ಹಣೆಬರಹವನ್ನು ಶಾಂತಕುಮಾರ್‌ ಮತ್ತು ತಂಡ ಬರೆದಿತ್ತು.


ಇದನ್ನೂ ಓದಿ : Baburao Chinchansur : ಮೇಲ್ಮನೆ ಉಪಚುನಾವಣೆ : ಬಿಜೆಪಿಯಿಂದ ಬಾಬೂರಾವ್ ಚಿಂಚನಸೂರ್ ಗೆ ಟಿಕೆಟ್!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.