PSI ನೇಮಕಾತಿ ಹಗರಣ: ಸಂಜೆ 4ಗಂಟೆಯೊಳಗೆ ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರು
ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಸುರೇಶ್ ಕಾಟೇಗಾಂವ್, ಅರ್ಚನಾ, ಸುನೀತಾ, ಕಾಳಿದಾಸ್ ಸೇರಿದಂತೆ ಐವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣ ಸಂಬಂಧ ಬಂಧಿತ ಆರೋಪಿಗಳನ್ನು ಇಂದು ಸಂಜೆ 4 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ. ಕಲಬುರಗಿಯ ಮೂರನೇ ಜೆಎಮ್‌ಎಫ್‌ಸಿ ಕೋರ್ಟ್‌ಗೆ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.
ಜ್ಞಾನಜ್ಯೋತಿ ಶಾಲೆಯ ಒಡತಿ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಸುರೇಶ್ ಕಾಟೇಗಾಂವ್, ಅರ್ಚನಾ, ಸುನೀತಾ, ಕಾಳಿದಾಸ್ ಸೇರಿದಂತೆ ಐವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ನೀಡಲು ನ್ಯಾಯಾಲಯಕ್ಕೆ ಸಿಐಡಿ ಮನವಿ ಸಲ್ಲಿಸಲು ನಿರ್ಧಾರಿಸಿದೆ.
ಇದನ್ನೂ ಓದಿ: ಡಿವೈಎಸ್‌ಪಿ ಸೇರಿ 179 ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ: ಕೋಟ್ಯಾಂತರ ರೂ. ವಹಿವಾಟು ಶಂಕೆ!
ಸಿಐಡಿ ಕಚೇರಿಗೆ ದಿವ್ಯಾ ಹಾಗರಗಿ
ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪುಣೆಯಲ್ಲಿ ಬಂಧಿಸಲಾಗಿರುವ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಕಲಬುರಗಿಯ ಸಿಐಡಿ ಕಚೇರಿಗೆ ಅಧಿಕಾರಿಗಳು ಕರೆತಂದಿದ್ದಾರೆ. ದಿವ್ಯಾ ಜೊತೆಗೆ ಅರ್ಚನಾ, ಸುನೀತಾ, ಕಾಳಿದಾಸ್, ಸುರೇಶ್ ಕಾಟೇಗಾಂವ್‌ರನ್ನು ಸಹ ಕರೆತರಲಾಗಿದೆ.
ಪುಣೆಯಲ್ಲಿ ದಿವ್ಯಾ ಹಾಗರಗಿಗೆ ಉದ್ಯಮಿ ಸುರೇಶ್ ಕಾಟೇಗಾಂವ್ ರಕ್ಷಣೆ ನೀಡಿದ್ದ. ದಿವ್ಯಾಗೆ ರಕ್ಷಣೆ ನೀಡಿದ್ದಕ್ಕೆ ಮಹಾರಾಷ್ಟ್ರದ ಅಕ್ಕಲಕೋಟೆ ನಿವಾಸಿ ಸುರೇಶ್ ಸಿಐಡಿಗೆ ಲಾಕ್ ಆಗಿದ್ದಾನೆ. ಕಳೆದ 18 ದಿನಗಳಿಂದ ಪೊಲೀಸರ ಕೈಗೆ ಸಿಗದೆ ದಿವ್ಯಾ ಹಾಗರಗಿ ಮತ್ತವರ ಟೀಂ ತಲೆಮರೆಸಿಕೊಂಡಿತ್ತು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಆಡಿಯೋ... ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.