ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮ‌ ಕೇಸ್ ನಲ್ಲಿ ಸಿಐಡಿ ಕೆಲ ಭ್ರಷ್ಟರ ಬೆನ್ನು ಬಿದ್ದಿದೆ. ಅಭ್ಯರ್ಥಿಗಳ ಸಂಪರ್ಕದಲ್ಲಿದ್ದು, ಮಧ್ಯವರ್ತಿಗಳಂತೆ  ಕಾರ್ಯ ನಿರ್ವಹಿಸುತ್ತಿದ್ದ ಕೆಲ ಪಿಎಸ್ಐಗಳ ಜಾಡು ಹಿಡಿದು ಹೊರಟಿದೆ ಸಿಐಡಿ ತಂಡ. ಪಿಎಸ್ಐ ನೇಮಕಾತಿ ಅಕ್ರಮದ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಈ ಕ್ರಮಕ್ಕೆ ಸಿಐಡಿ ಮುಂದಾಗಿದೆ.  ಈಗಾಗಲೇ  ಬಂಧನವಾಗಿರುವ 2018-2019 ರ ಬ್ಯಾಚ್ ನ ಇಬ್ಬರು ಪಿಎಸ್ಐಗಳು, ತಲೆ‌ಮರೆಸಿಕೊಂಡಿದ್ದಾರೆ. ಈ ಪಿಎಸ್ಐಗಳು ಸೇರಿ 2016ರ ಬ್ಯಾಚ್ ನಿಂದ ಬಂದ ಕೆಲವರ ಮೇಲೆ ಸಿಐಡಿಗೆ ಗುಮಾನಿ ಎದ್ದಿದೆ.  


COMMERCIAL BREAK
SCROLL TO CONTINUE READING

ಹೀಗಾಗಿ ಬಂಧಿತರ ಮೂಲಕ ಹಳೆ ಪರೀಕ್ಷೆಯ ದಾಖಲೆಗಳ ತಲಾಶ್ ನಡೆಸಿದೆ‌. ಹಿಂದೆ ನೇಮಕವಾಗಿದ್ದ ಬಂಧಿತ ಪಿಎಸ್ಐಗಳೂ ಕೂಡ ಅಕ್ರಮವಾಗಿ ನೇಮಕವಾಗಿರುವ ಅನುಮಾನ ಮೂಡಿದ್ದು, ಅಂದು ಅಕ್ರಮದ‌ ಮಾರ್ಗದಿಂದ ಇಲಾಖೆ ಸೇರಿ‌ ಈಗ ಅಭ್ಯರ್ಥಿಗಳಿಗೆ ಮಧ್ಯವರ್ತಿಗಳಂತೆ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ‌.


ಇದನ್ನೂ ಓದಿ : ‘ಕೈ’ ಪಕ್ಷವನ್ನು ಮಕಾಡೆ ಮಲಗಿಸಲಿರುವ ‘ಭಾರತ್ ಜೋಡೋ’ & ಸಿದ್ದರಾಮೋತ್ಸವ: ಬಿಜೆಪಿ


2016 ನವೆಂಬರ್ ಬ್ಯಾಚ್ - 418 ಪೋಸ್ಟ್ 
ಜೂನ್ 2017 ಬ್ಯಾಚ್ - 184  ಪೋಸ್ಟ್ 
2018- 2019  ಬ್ಯಾಚ್ -194 ಪೋಸ್ಟ್ 
2020 ಜನವರಿ - 200 ಪೋಸ್ಟ್ 
2020 ಮಾರ್ಚ್ -300 ಪೋಸ್ಟ್ 
2021 ಅಕ್ಟೋಬರ್ - 545 ಪೋಸ್ಟ್ ನ  ಮೂಲ ಕೆದಕಲು ಅಧಿಕಾರಿಗಳು ತಯಾರಿ‌ ನಡೆಸಿದ್ದಾರೆ.


ಆರೋಪಿತರ ಟ್ರ್ಯಾಕ್ ರೆಕಾರ್ಡ್, ಸಂಪರ್ಕಿತ ವ್ಯಕ್ತಿಗಳು, ಸ್ಟೇಷನ್ ಸರ್ವಿಸ್ ರೆಕಾರ್ಡ್ ಪರಿಶೀಲನೆಗೆ ಇದೀಗ ಸಿಐಡಿ  ಮುಂದಾಗಿದೆ. ಸಿಐಡಿ ಯ ಈ ನಡೆ ಕೆಲ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದೆ ಎಂದೇ ಹೇಳಲಾಗುತ್ತಿದೆ. 


ಇದನ್ನೂ ಓದಿ :  ರಾಜ್ಯದಲ್ಲಿ ಭಾರೀ ಮಳೆಯಿಂದ ಅನಾಹುತ: ಜಿಲ್ಲಾಧಿಕಾರಿಗಳ ಸಭೆ ಕರೆದ ಸಿಎಂ ಬೊಮ್ಮಾಯಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.