ಬೆಂಗಳೂರು :  ದ್ವಿತೀಯ ಪಿ.ಯು ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ (PUC Final exam time table). ಏಪ್ರಿಲ್  22 ರಿಂದ ಮೇ 18 ರವರೆಗೆ ಪಿಯು ದ್ವಿತೀಯ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಮುಂದಾಗಿದೆ.   ದ್ವಿತೀಯ ಪಿ.ಯುಸಿ  ಪರೀಕ್ಷೆಯ ಅಂತಿಮ ಮತ್ತು ಪರಿಷ್ಕೃತ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಕಟಿಸಿದೆ. 


COMMERCIAL BREAK
SCROLL TO CONTINUE READING

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾ ಪಟ್ಟಿ ಪ್ರಕಟವಾಗಿದೆ (PUC Final exam time table). ಏಪ್ರಿಲ್  22 ರಿಂದ ಪರೀಕ್ಷೆ ಆರಂಭವಾಗಲಿದೆ. ಮೇ ೧೮ರವರೆಗೆ ಪರೀಕ್ಷೆ ನಡೆಯಲಿದೆ. ಇದೀಗ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇನ್ನು ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು, ಪದವಿ ಪೂರ್ವ ಶಿಕ್ಷಣ ಮಂಡಳಿ  ಸ್ಪಷ್ಟಪಡಿಸಿದೆ (PUC exam date). 


ಇದನ್ನೂ ಓದಿ : International Women's Day: ಆಟೋ ಚಾಲನೆ ಮಾಡಿ ಸಂಸಾರದ ಬಂಡಿ ಸಾಗಿಸುತ್ತಿರುವ ಸಾಧಕಿ ನಂದಿನಿ


ಪರೀಕ್ಷೆಯ ಸಂಪೂರ್ಣ ವೇಳಾ ಪಟ್ಟಿ ಇಂತಿದೆ :


[[{"fid":"231861","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


 


[[{"fid":"231862","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"3":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"3"}}]]


ದ್ವಿತೀಯ ಪಿ.ಯು ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಈ ಮೊದಲು ಪ್ರಕಟಿಸಲಾಗಿದ್ದು, ಅದರಲ್ಲಿ ಏಪ್ರಿಲ್ ೨೨ರಿಂದ ಮೇ ೧೧ರವರೆಗೆ ಪರೀಕ್ಷೆ ನಡೆಸುವುದಾಗಿ ಹೇಳಲಾಗಿತ್ತು. ಅಲ್ಲದೆ, ಆಕ್ಷೇಪಣೆಗಳನ್ನು ಸಲ್ಲಿಸಲು ಮಾರ್ಚ್  ೫ರ ಸಂಜೆ 5 ಗಂಟೆವರೆಗೆ ಸಮಯ ನೀಡಲಾಗಿತ್ತು. ಆದರೆ ಈ ಸಮಯದಲ್ಲಿ common law admission test, AIMA UGATExam ಮತ್ತು Navodaya Vidyalaya Exam ನಿಗದಿಯಾಗಿದ್ದರಿಂದ ವಿದ್ಯಾರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಈ ಅಕ್ಷೆಪನೆಗಳನ್ನು ಪರಿಗಣಿಸಿ, ಏಪ್ರಿಲ್  22 ರಿಂದ ಮೇ 18 ರವರೆಗೆಪರೀಕ್ಷೆಯನ್ನು ನಿಗದಿ ಮಾಡಲಾಗಿದೆ. ಅಲ್ಲದೆ ಇದು ಅಂತಿಮ ವೇಳಾಪಟ್ಟಿಯಾಗಿದ್ದು, ಇನ್ನು ಬದಲಾವಣೆಗೆ  ಅವಕಾಶ ಇಲ್ಲ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 


ಇದನ್ನೂ ಓದಿ : ಪಕ್ಷದ ಆಂತರಿಕ ವಿಚಾರದ ಪ್ರಶ್ನೆ ಬಂದಾಗ ಸಿದ್ದರಾಮಯ್ಯ ಮೌನಕ್ಕೆ ಶರಣಾಗುವುದೇಕೆ?: ಬಿಜೆಪಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.