ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ 884 ಹೊಸ ಬಸ್ ಖರೀದಿ- ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು ಹೊರತು ಪಡಿಸಿದರೆ ಹುಬ್ಬಳ್ಳಿಯ ಬಸ್ ನಿಲ್ದಾಣವು ದೊಡ್ಡದಾಗಿದೆ. ಈ ಜಾಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಶಕ್ತಿ ಯೋಜನೆ ಆರಂಭಗೊಂಡಾಗ 84 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಈಗ 1ಕೋಟಿ ಅಧಿಕ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆದಿರುತ್ತಾರೆ. ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ. ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ 884 ಹೊಸ ಬಸ್ ಖರೀದಿಸಲಾಗುವುದು. ಈಗಾಗಲೇ 375 ಬಸ್ ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು.
ಹುಬ್ಬಳ್ಳಿ: ಬೆಂಗಳೂರು ಹೊರತು ಪಡಿಸಿದರೆ ಹುಬ್ಬಳ್ಳಿಯ ಬಸ್ ನಿಲ್ದಾಣವು ದೊಡ್ಡದಾಗಿದೆ. ಈ ಜಾಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಶಕ್ತಿ ಯೋಜನೆ ಆರಂಭಗೊಂಡಾಗ 84 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಈಗ 1ಕೋಟಿ ಅಧಿಕ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆದಿರುತ್ತಾರೆ. ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ. ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ 884 ಹೊಸ ಬಸ್ ಖರೀದಿಸಲಾಗುವುದು. ಈಗಾಗಲೇ 375 ಬಸ್ ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು.
ಇಂದು ಗೋಕುಲ್ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ, ಶಂಕು ಸ್ಥಾಪನೆ, ಹುಬ್ಬಳ್ಳಿ ಗೋಕುಲ್ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪಲ್ಲಕ್ಕಿ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ಸಾರಿಗೆ ನಿಗಮಗಳಲ್ಲಿ ನೀಡಲಾಗುವ ಅಪಘಾತ ಪರಿಹಾರ ವಿಮೆಯಂತೆ ಈ ಸಂಸ್ಥೆಯಲ್ಲಿಯೂ ಸಹ ರೂ.1 ಕೋಟಿ ಅಪಘಾತ ಪರಿಹಾರ ವಿಮೆಯನ್ನು ಹೆಚ್ಚಿಸಬೇಕಾಗಿದೆ. 9 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. 3800 ಬಸ್ ಗಳು ಕೋವಿಡ್ ಸಮಯದಲ್ಲಿ ಬಂದ್ ಆಗಿದ್ದವು. ಈಗ ಪುನಃ ಆರಂಭಗೊಂಡಿವೆ. ಇದರಿಂಸ ಶಕ್ತಿ ಯೋಜನೆಗೆ ಬಸ್ ಗಳ ಕೊರತೆ ನೀಗಿದಂತಾಗಿದೆ. ಈ ಭಾಗದ ಜನರಿಗೆ ಹಳೆ ಬಸ್ ಗಳನ್ನು ಕೊಡದೇ ಬ್ರ್ಯಾಂಡ್ ಹೊಸ ಬಸ್ ಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ- ರೈತರಿಗೆ ವರವಾಗದೆ ಶಾಪವಾದ ಉಗಾರ ಶುಗರ್ ಪ್ಯಾಕ್ಟರಿ
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಮಾತನಾಡಿ, ರೂ.13 ಕೋಟಿ ವೆಚ್ಚದಲ್ಲಿ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ.
ರೂ. 23 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣವನ್ನು ನವೀಕರಣಗೊಳಿಸಿ ಮೇಲ್ದರ್ಜೆಗೇರಿಸಲಾಗುವುದು. 884 ಹೊಸ ಬಸ್ ಗಳು ಉತ್ತರ ಕರ್ನಾಟಕ ಭಾಗದ ಜನರಿಗೆ ದೊರೆಯಲಿವೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಫೆಬ್ರವರಿ ತಿಂಗಳ ನಂತರ ಹೊಸ ಬಸ್ ಗಳು ಈ ಭಾಗದ ಜನರಿಗೆ ಸಿಗಲಿವೆ. ಅಲ್ಲದೇ 5 ಸಾವಿರ ಹೊಸ ಬಸ್ ಗಳನ್ನು ಖರೀದಿಸುವ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಆಗಲಿದೆ ಎಂದು ಹೇಳಿದರು.
ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರಿಗೆ ನಿಗಮಗಳು ಸರಿಯಾಗಿ ನಡೆಯಲು ಸಿಬ್ಬಂದಿಗಳು ಕಾರ್ಯ ಪ್ರಮುಖವಾಗಿದೆ. ಅಪಘಾತವಾಗದಂತೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಪ್ರಯಾಣಿಸುವಂತೆ ಮಾಡುವಲ್ಲಿ ತಲ್ಲೀನರಾಗಿದ್ದಾರೆ. ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ದ್ವಿಗುಣವಾಗಿದೆ. ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿದರೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅನುಕೂಲವಾಗಿದೆ. ಈ ಸಂಸ್ಥೆಗೆ ವಿಶೇಷ ಅನುದಾನ ನೀಡಬೇಕಾಗಿದೆ. ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ನೀಡಲು ಸಂಸ್ಥೆ ಮುಂದಾಗಬೇಕಿದೆ ಎಂದು ತಿಳಿಸಿದರು.
ಶಾಸಕರಾದ ಎನ್.ಎಚ್.ಕೋನರಡ್ಡಿ ಮಾತನಾಡಿ, ಈ ಸಂಸ್ಥೆಯ ವ್ಯಾಪ್ತಿಯು 6 ಜಿಲ್ಲೆಗಳಿಗೆ ವ್ಯಾಪಿಸಿದೆ. ಶಕ್ತಿ ಯೋಜನೆಯಿಂದ ಜನರಿಗೆ ಬಹಳ ಅನುಕೂಲವಾಗಿದೆ. ಶಕ್ತಿ ಯೋಜನೆ ಜಾರಿಗೆ ಬಂದಾಗ ಬಸ್ ಗಳ ಕೊರತೆ ಉಂಟಾಯಿತು. ನಂತರ ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್ ಗಳನ್ನು ಕಲ್ಪಿಸಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.
800ಕ್ಕೂ ಅಧಿಕ ಬಸ್ ಗಳನ್ನು ಖರೀದಿಸಲಾಗುತ್ತಿದೆ. ಸಂಸ್ಥೆಯ ಸಿಬ್ಬಂದಿಗಳ ಅತ್ಯುತ್ತಮ ಸೇವೆಯಿಂದ ಸಂಸ್ಥೆ ಬೆಳೆಯುತ್ತಿದೆ. ಪ್ರಯಾಣಿಕರನ್ನು ಕುಟುಂಬದವರಂತೆ ಕಾಣುವ ಮೂಲಕ ಉತ್ತಮ ಸೇವೆ ಒದಗಿಸುತ್ತಿದ್ದಾರೆ. ಸಂಸ್ಥೆಗೆ ಯಾವುದೇ ರೀತಿಯ ತಾರತಮ್ಯ ಆಗಬಾರದು ಎಂದು ನುಡಿದರು.
ಇದನ್ನೂ ಓದಿ- "ಕಾಂಗ್ರೆಸ್ ಗ್ಯಾರಂಟಿಯಿಂದ ಆರ್ಥಿಕ ಬಲ; ಅಂಕಿ-ಅಂಶ ಬೇಕಿದ್ದರೆ ಕೇಳಿ ಪಡೆಯಿರಿ"
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭರತ್.ಎಸ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಹುಬ್ಬಳ್ಳಿ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಸಂಸ್ಥೆಯಲ್ಲಿ 21 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಾರಿಗೆ ಸ್ಪಂದನ ತಂತ್ರಾಂಶ ಮೂಲಕ ನೌಕರರು ತಮ್ಮ ಕುಂದುಕೊರತೆಗಳನ್ನು ದಾಖಲಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಐ.ಜಿ. ಸನದಿ, ಪಾಲಿಕೆಯ ಮಹಾಪೌರರಾದ ವೀಣಾ ಭರದ್ವಾಡ, ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.
ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
ಧಾರವಾಡದಲ್ಲಿ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣದ ಶಂಕುಸ್ಥಾಪನೆ
ಬಸ್ ನಿಲ್ದಾಣದ ನಿವೇಶನದ ವಿಸ್ತೀರ್ಣ 26 ಗುಂಟೆ, 44 ಆಣೆ ಇದೆ. ಕಟ್ಟಡದ ವಿಸ್ತೀರ್ಣ ನೆಲಮಹಡಿ 1935.57 ಚ.ಮೀ., ಮೆಜನೈನ್ ಮಹಡಿ 607 ಚ.ಮೀ., ಮೊದಲನೇ ಮಹಡಿ 1949 ಚ.ಮೀ., ಮೇಲ್ಮಹಡಿ 153.40 ಚ.ಮೀ. ಸೇರಿದಂತೆ ಒಟ್ಟು 4037.97 ಚ.ಮೀ. ಹೊಂದಿದೆ. ಯೋಜನೆಯ ಮೊತ್ತ ರೂ.13.11 ಕೋಟಿ ಆಗಿದೆ. ಮಳೆಗಾಲ ಹೊರತುಪಡಿಸಿ 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬಸ್ ನಿಲ್ದಾಣದ ಮುಖ್ಯ ಕಟ್ಟಡ ಪ್ರಯಾಣಿಕರಿಗೆ ಕುಳಿತುಕೊಳ್ಳುವ ಆಸನದ ವ್ಯವಸ್ಥೆ, ಮಹಿಳೆಯರ ವಿಶ್ರಾಂತಿ ಗೃಹ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳು, ಆವರಣದ ಕಾಂಕ್ರೀಟ್ ಮಾಡುವುದು, 4 ಬಸ್ ಗಳ ನಿಲುಗಡೆ ಅಂಕಣಗಳು, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್, ಉಪಹಾರ ಗೃಹ ಮತ್ತು ವಾಣಿಜ್ಯ ಮಳಿಗೆಗಳು, ಸಿಬ್ಬಂದಿಗಳ ವಿಶ್ರಾಂತಿ ಕೊಠಡಿ ಹಾಗೂ ಸಂಚಾರ ನಿಯಂತ್ರಣ ಕೊಠಡಿ ಸೌಲಭ್ಯಗಳನ್ನು ಬಸ್ ನಿಲ್ದಾಣದಲ್ಲಿ ಕಲ್ಪಿಸಲಾಗುತ್ತದೆ.
ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣವನ್ನು ಮೇಲ್ದರ್ಜೇಗೇರಿಸುವ ಕಾಮಗಾರಿ
ಬಸ್ ನಿಲ್ದಾಣದ ನಿವೇಶನದ ವಿಸ್ತೀರ್ಣ 13 ಎಕರೆ ಹೊಂದಿದೆ. ಕಾಮಗಾರಿಯ ಅಂದಾಜು ಮೊತ್ತ ರೂ. 23.48 ಕೋಟಿಗಳಾಗಿವೆ. ಬಸ್ ನಿಲ್ದಾಣದಲ್ಲಿ ಕಲ್ಪಿಸಲಾಗುವ ಸೌಲಭ್ಯಗಳೆಂದರೆ ಬಸ್ ನಿಲ್ದಾಣದಲ್ಲಿ ಬಾಕಿ ಉಳಿದಿರುವ ಆವರಣದ ಕಾಂಕ್ರೀಟಿಕರಣ, ಆರ್.ಸಿ.ಸಿ ತೆರೆದ ಚರಂಡಿ, ಮುಚ್ಚಳ ಹೊದಿಕೆ ನವೀಕರಣ, ಅವರಣಕ್ಕೆ ಪೇವರ್ ಅಳವಡಿಸುವುದು, ಬಸ್ ನಿಲ್ದಾಣದ ಒಳ ಮತ್ತು ಹೊರದ್ವಾರಗಳಿಗೆ ಡೆಕ್ ಸ್ಲಾಬ್, ಹೊಸ ಶೌಚಾಲಯ ನಿರ್ಮಿಸುವುದು, ಈಗ ಇರುವ ಶೌಚಾಲಯಗಳ ನವೀಕರಣ, ಬಸ್ ಗಳ ನಿಲುಗಡೆ ಅಂಕಣ, ಮುಚ್ಚಳ ಹೊದಿಕೆ ನವೀಕರಣ, ಕ್ಯಾಟ್ ಬಾಕ್ಸ್ ನಿರ್ಮಾಣ, ಬಸ್ ನಿಲ್ದಾಣದ ನೆಲಹಾಸು ನವೀಕರಣ, ಬಸ್ ನಿಲ್ದಾಣದ ಮುಂಭಾಗ ಮತ್ತು ಉದ್ಯಾನವನವನ್ನು ಸುಂದರಗೊಳಿಸುವುದು, ಮಳೆ ನೀರು ಕೋಯ್ಲು, ವಿದ್ಯುತ ಸೌಲಭ್ಯ, ದ್ವಿಚಕ್ರ ವಾಹನ ಮತ್ತು ಕಾರ್ ಪಾರ್ಕಿಂಗ್ ವ್ಯವಸ್ಥೆ ಹಾಗೂ ಆಟೋ ನಿಲ್ದಾಣ ವ್ಯವಸ್ಥೆ ಕಲ್ಪಿಸಲಾಗುವುದು.
ಪಲ್ಲಕ್ಕಿ ಬಸ್‌ಗಳ ಲೋಕಾರ್ಪಣೆ
ಐಷಾರಾಮಿ ವ್ಯವಸ್ಥೆ ಇರುವ ಬಿಎಸ್-6 ನಾನ್ ಎಸಿ-ಸ್ಲೀಪರ್ 4 ಪಲ್ಲಕ್ಕಿ ವಾಹನಗಳನ್ನು ಈ ದಿನ ಲೋಕಾರ್ಪಣೆ ಮಾಡಲಾಯಿತು. ಈ ಬಸ್ಸುಗಳು 30 ಬರ್ಥ್ ಹೊಂದಿರುತ್ತದೆ. ಪ್ರತಿ ವಾಹನದ ಬೆಲೆ 45 ಲಕ್ಷ ರೂಪಾಯಿಗಳಾಗಿದ್ದು, ಇನ್ನೂ 6 ವಾಹನಗಳು ಈ ತಿಂಗಳ ಅಂತ್ಯದ ಒಳಗೆ ಬರಲಿವೆ ಹಾಗೂ ಇನ್ನೂ 10 ವಾಹನಗಳ ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ.
ಸಾರಿಗೆ ಸ್ಪಂದನ ತಂತ್ರಾಂಶಕ್ಕೆ ಚಾಲನೆ
ss.itnwkrtc.in ಮೂಲಕ ಆನ್‌ಲೈನ್ ನಲ್ಲಿ ಸಂಸ್ಥೆಯ ನೌಕರರು ಮತ್ತು ಸಾರ್ವಜನಿಕರು ಗಣಕಯಂತ್ರ ಅಥವಾ ಮೊಬೈಲ್ ಮೂಲಕ ಸಲಹೆ, ದೂರು, ಕುಂದುಕೊರತೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಸದರಿ ದೂರುಗಳ ನಿರ್ವಹಣೆ ಮತ್ತು ವಿಲೇವಾರಿಯನ್ನು ಸಹ ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತದೆ.
ಅನುಕಂಪದ ಆಧಾರದ ನೇಮಕಾತಿ ಆದೇಶ ವಿತರಣೆ
ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಪೂರೈಸಿದ ನಂತರ ಐ.ಟಿ.ಐ ನಲ್ಲಿ ಉತ್ತೀರ್ಣರಾಗಿ ನಿಯಮಾನುಸಾರ ದೈಹಿಕ ಅರ್ಹತೆಯನ್ನು ಹೊಂದಿರುವ 23 ಅಭ್ಯರ್ಥಿಗಳಿಗೆ ಅನುಕಂಪದ ಆಧಾರದ ಮೇಲೆ ತಾಂತ್ರಿಕ ಸಹಾಯಕ ಹುದ್ದೆಗೆ ಮತ್ತು 07 ನೇ ತರಗತಿ ಹಾಗೂ ಕೆಳಗಿನ ವಿದ್ಯಾರ್ಹತೆಯನ್ನು ಪಡೆದಿರುವ 13 ಅಭ್ಯರ್ಥಿಗಳಿಗೆ ಕಛೇರಿ ಸಹಾಯಕ (ಸ್ವಚ್ಛತೆ) ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷದಲ್ಲಿ ಇದುವರೆಗೆ, ತಾಂತ್ರಿಕ ಸಿಬ್ಬಂದಿಗಳು, ಚಾಲಕರು, ನಿರ್ವಾಹಕ, ಕರಾಸಾ ಪೇದೆ ಹಾಗೂ ಮತ್ತಿತರ ಹುದ್ದೆಗಳು ಸೇರಿದಂತೆ ಒಟ್ಟು 145 ಜನರಿಗೆ ಅನುಕಂಪದ ನೇಮಕಾತಿ ಮಾಡಿಕೊಳ್ಳಲಾಗಿರುತ್ತದೆ.
6 ವೈಯಕ್ತಿಕ ಅಪಘಾತ ವಿಮಾ ಪರಿಹಾರ ವಿತರಣೆ (SBI Corporate salary package)
ಸಂಸ್ಥೆಯ ನೌಕರರು ಸೇವೆಯಲ್ಲಿದ್ದಾಗ ದುರಾದೃಷ್ಟವಶಾತ್ ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತದಿಂದ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಮತ್ತು ಅಂಗ ನ್ಯೂನ್ಯತೆಗಳಿಗೆ ಒಳಗಾದಲ್ಲಿ ನೌಕರರಿಗೆ ಗರಿಷ್ಟ ಮೊತ್ತದ ಆರ್ಥಿಕ ಸೌಲಭ್ಯ ಸಿಗುವ ಉದ್ದೇಶದಿಂದ ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ಎಸ್.ಬಿ.ಐ ಬ್ಯಾಂಕ್ ನಲ್ಲಿ ವೇತನ ಖಾತೆಯನ್ನು ಹೊಂದಿರುವ ನೌಕರರಿಗೆ ಕಾರ್ಪೋರೇಟ್ ಸ್ಯಾಲರಿ ಪ್ಯಾಕೆಜ್ (Corporate salary package) ಯೋಜನೆಯಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರವರ ಜೊತೆಗೆ ಒಡಂಬಡಿಕೆ ಮಾಡಿಕೊಂಡು ರೂ. 50 ಲಕ್ಷ ಮೊತ್ತದ ಅಪಘಾತ ವಿಮಾ ಪರಿಹಾರ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದುವರೆಗೆ ಒಟ್ಟು 3 ಜನ ನೌಕರರು ವೈಯಕ್ತಿಕ ಅಪಘಾತಗಳಲ್ಲಿ ನಿಧನರಾಗಿದ್ದು, ಅವರ ಪೈಕಿ ಒಬ್ಬರು ನೌಕರರ ಅವಲಂಬಿತರಿಗೆ ರೂ.50 ಲಕ್ಷ ವಿಮಾ ಪರಿಹಾರ ಪಾವತಿಸಲಾಗಿದ್ದು, ಈ ದಿನ ದಿವಂಗತ ಸುರೇಶ ಯಲ್ಲಪ್ಪ ಮಾಂಗ ಪತ್ನಿಯಾದ ಶ್ರೀಮತಿ ಸುರೇಖಾ ಸುರೇಶ ಮಾಂಗರವರಿಗೆ ರೂ.50 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು. ಮತ್ತೊಂದು ಪ್ರಕರಣದಲ್ಲಿ ವಿಮಾ ಪರಿಹಾರ ಪಾವತಿಸುವ ಕ್ರಮ ಪ್ರಗತಿಯಲ್ಲಿರುತ್ತದೆ.
ಅಪಘಾತರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ವಿತರಣೆ
ಸಂಸ್ಥೆಯಲ್ಲಿ 15 ವರ್ಷಗಳ ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆಗಾಗಿ ಅರ್ಹ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ವಿತರಿಸಲಾಯಿತು. ಚಿನ್ನದ ಪದಕವು 40ಗ್ರಾಂ ಘನ ಅಪ್ಪಟ ಬೆಳ್ಳಿ ಮತ್ತು 8 ಗ್ರಾಂ ಚಿನ್ನದ ಗಂಡಭೇರುಂಡದಿಂದ ಕೂಡಿದೆ. ಚಿನ್ನದ ಪದಕ ವಿಜೇತರಿಗೆ ಪ್ರಶಂಸನಾ ಪತ್ರ ಮತ್ತು ರೂ 5 ಸಾವಿರ ನಗದು ಪುರಸ್ಕಾರ ನೀಡಲಾಯಿತು. ಪದಕ ವಿಜೇತರಿಗೆ ರೂ 1 ಸಾವಿರ ಮಾಸಿಕ ಪ್ರೋತ್ಸಾಹ ಭತ್ಯೆ ನೀಡಲಾಗುತ್ತದೆ. ಈ ದಿನ ವಿವಿಧ ವಿಭಾಗಗಳ 36 ಅರ್ಹ ಚಾಲಕರಿಗೆ ಚಿನ್ನದ ಪದಕಗಳನ್ನು ವಿತರಣೆ ಮಾಡಲಾಯಿತು.
ಅತ್ಯುತ್ತವಾಗಿ ತರಬೇತಿ ನಿರತ ಕೆ.ಎಸ್.ಟಿ ಪೇದ ರವರಿಗೆ ಪ್ರಶಸ್ತಿ ವಿತರಣೆ
ಡಿಸೆಂಬರ್-2023 ರಲ್ಲಿ 36 ಪುರುಷ ಹಾಗೂ 12 ಮಹಿಳೆಯರು ಸೇರಿದಂತೆ ಒಟ್ಟು 48 ಅಭ್ಯರ್ಥಿಗಳನ್ನು ಕರಾಸಾ ಪೇದೆ ಹುದ್ದೆಗೆ ಅನುಕಂಪದ ನೇಮಕ ಮಾಡಿಕೊಂಡಿದ್ದು, ಅವರ ಪೈಕಿ ತರಬೇತಿಯ ಅವಧಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಹಾವೇರಿ ವಿಭಾಗದ ಕನಿಜ ಫಾತಿಮಾ ಎ. ಮುಲ್ಲಾರವರಿಗೆ ಸಾರಿಗೆ ಮಂತ್ರಿಗಳ ಉತ್ತಮ ಕರಾಸಾ ಪೇದೆ (ತರಬೇತಿ) ಪ್ರಶಸ್ತಿ ಹಾಗೂ ನಗದು ಪುರಸ್ಕಾರಕ್ಕೆ ಭಾಜನರಾದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.