ಬೆಳಗಾವಿ ಹೊರವಲಯದಲ್ಲಿರುವ ಸುವರ್ಣ ವಿಧಾನಸೌಧ ಮೆಟ್ಟಿಲುಗಳ ಮೇಲೆ ಕಾರ್ಮಿಕ ಮಹಿಳೆಯೊಬ್ಬರು ಶ್ಯಾವಿಗೆ ಒಣ ಹಾಕಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರನಿಗೆ ನೋಟೀಸ್‌ ಜಾರಿಗೊಳಿಸಿದೆ.


COMMERCIAL BREAK
SCROLL TO CONTINUE READING

ಸುವರ್ಣ ಸೌಧದ ಬಳಿ ಕಾರ್ಮಿಕ ಮಹಿಳೆಯೊಬ್ಬರು ಶ್ಯಾವಿಗೆಯನ್ನು ಒಣಹಾಕಿದ್ದರು. ಈ ಘಟನೆ ಕಳೆದ ದಿನ ಮಧ್ಯಾಹ್ನ ನಡೆದಿದ್ದು, ಇದರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 


ಇದನ್ನು ಓದಿ: ಸಮೀರ್ ವಾಂಖೆಡೆ ಸ್ಥಾನಕ್ಕೆ ಬೆಂಗಳೂರು ಎನ್‌ಸಿಬಿ ಚೀಫ್ ನೇಮಕ!


ಇನ್ನು ಗುತ್ತಿಗೆದಾರನಿಗೆ ನೋಟೀಸ್‌ ಜಾರಿಗೊಳಿಸುತ್ತಿದ್ದಂತೆ, ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಷ್ಟೇ ಅಲ್ಲದೆ, ಇಂತಹ ತಪ್ಪು ಮರುಕಳಿಸದಂತೆ ಎಲ್ಲಾ ಗುತ್ತಿಗರದಾರರಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. 


ಸಾಂಬ್ರಾ ಮೂಲದ ಕಾರ್ಮಿಕ ಮಹಿಳೆಯೊಬ್ಬರು ಸುವರ್ಣ ವಿಧಾನಸೌಧದಲ್ಲಿ ದಿನಗೂಲಿ ಆಧಾರದ ಮೇಲೆ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಮಹಿಳೆಗೆ ಶ್ಯಾವಿಗೆ ತಂದುಕೊಟ್ಟಿದ್ದಾರೆ. ಶ್ಯಾವಿಗೆಯು ಹಸಿಯಾಗಿತ್ತು ಎಂದು ಅದನ್ನು ಸೀರೆ ಹಾಯಿಸಿ ಸುವರ್ಣ ವಿಧಾನಸೌಧ ಮೆಟ್ಟಿಲುಗಳ ಮೇಲೆ ಒಣಹಾಕಿದ್ದಾರೆ. 


ಮಧ್ಯಾಹ್ನದ ವೇಳೆ ಪ್ಯಾಟ್ರೋಲಿಂಗ್‌ಗೆ ಆಗಮಿಸಿದ ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಅವರು ಒಣ ಹಾಕಿರುವ ಶ್ಯಾವಿಗೆಯನ್ನು  ತೆರವುಗೊಳಿಸಿದ್ದಾರೆ. ಬಳಿಕ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ಘಟನೆಯ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿದೆ.  


ಇದನ್ನು ಓದಿ: ಭಾರತ-ಸಿಂಗಾಪುರ ಮಧ್ಯೆ ಏರ್‌ಲೈನ್ಸ್‌ ಸಂಖ್ಯೆ ಹೆಚ್ಚಳಕ್ಕೆ ತೀರ್ಮಾನ


ಕರ್ನಾಟಕದ ಎರಡನೇ ಶಕ್ತಿ ಕೇಂದ್ರ ಎಂದು ಖ್ಯಾತಿ ಗಳಿಸಿರುವ 450 ಕೋಟಿ ರೂ. ಮೊತ್ತದ ಸುವರ್ಣ ಸೌಧದ ಮುಂದೆ ಮಹಿಳೆ ಶ್ಯಾವಿಗೆಯನ್ನು ಒಣ ಹಾಕಿರುವುದು ಉತ್ತರ ಕರ್ನಾಟಕ ಜನರ ಆಕ್ರೋಶಕ್ಕೆ ಕಾರಣವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.