ಧ್ರುವ ನಾರಾಯಣ್ ನಿಧನದ ಬೆನ್ನಲ್ಲೇ ಅಗಲಿದ ಪತ್ನಿ: ಶನಿವಾರ ಅಂತ್ಯಕ್ರಿಯೆ
ವೀಣಾ (50) ಅವರು ಧ್ರುವ ಅವರಿಗೆ ಅಕ್ಕನ ಮಗಳಾಗಿದ್ದರು. ಬಿಎಸ್.ಸಿ ವ್ಯಾಸಂಗ ಮಾಡಿದ್ದ ವೀಣಾ ಕಳೆದ 16 ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು. ರಾಜಕೀಯ ಮತ್ತು ಪತ್ನಿ ಕಡೆ ಗಮನ ಎರಡನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದ ಧ್ರುವನಾರಾಯಣ ಅವರಿಗೂ ಪತ್ನಿ ನೈತಿಕ ಸ್ಥೈರ್ಯ ತುಂಬಿದ್ದರು.
ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ ನಿಧನರಾದ ಬೆನ್ನಲ್ಲೇ ಅವರ ಪತ್ನಿ ವೀಣಾ ಧ್ರುವನಾರಾಯಣ ಕೂಡ ಇಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವೀಣಾ (50) ಅವರು ಧ್ರುವ ಅವರಿಗೆ ಅಕ್ಕನ ಮಗಳಾಗಿದ್ದರು. ಬಿಎಸ್.ಸಿ ವ್ಯಾಸಂಗ ಮಾಡಿದ್ದ ವೀಣಾ ಕಳೆದ 16 ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು. ರಾಜಕೀಯ ಮತ್ತು ಪತ್ನಿ ಕಡೆ ಗಮನ ಎರಡನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದ ಧ್ರುವನಾರಾಯಣ ಅವರಿಗೂ ಪತ್ನಿ ನೈತಿಕ ಸ್ಥೈರ್ಯ ತುಂಬಿದ್ದರು. ಆದರೆ, ಧ್ರುವ ನಾರಾಯಣ್ ಅಗಲಿದ ಬೆನ್ನಲ್ಲೇ ಅವರ ಪತ್ನಿ ವೀಣಾ ಅವರ ಆರೋಗ್ಯ ಬಿಗಡಾಯಿಸಿತು.
ಇದನ್ನೂ ಓದಿ- ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಮಹಾ ನಾಯಕ ʼಧ್ರುವ ನಾರಾಯಣʼ
ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ನಿರಂತರ ಚಿಕಿತ್ಸೆ ಕೊಟ್ಟರೂ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ- Dhruvanarayan : ದೇವರು ಬಲು ಕ್ರೂರಿ.. ಧ್ರುವನಾರಾಯಣ್ ನಿಧನಕ್ಕೆ ಡಿ.ಕೆ. ಶಿವಕುಮಾರ್ ಕಂಬನಿ
ದೆಹಲಿಯಿಂದ ಕೈ ನಾಯಕರು ಬರುವ ಹಿನ್ನೆಲೆಯಲ್ಲಿ ಮೈಸೂರಿನ ನಿವಾಸದಲ್ಲೇ ಸಂಜೆವರೆಗೂ ಅಂತಿಮ ದರ್ಶನ ಇರಲಿದ್ದು ಅದಾದ ಬಳಿಕ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮಕ್ಕೆ ಪಾರ್ಥೀವ ಶರೀರ ತರಲಾಗುತ್ತದೆ. ಶನಿವಾರ 11 ರ ಸುಮಾರಿಗೆ ಹೆಗ್ಗವಾಡಿಯಲ್ಲಿ ಪತಿ ಸಮಾಧಿ ಬಳಿಯೇ ವೀಣಾ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.