ಚಾಮರಾಜನಗರ: ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಸರ್ಕಾರದ ಪಾತ್ರವಿದೆ. ಸರ್ಕಾರ ಇದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ.  ಅಕ್ರಮದಲ್ಲಿ ಮಂತ್ರಿಗಳು ಹಾಗೂ  ದೊಡ್ಡ ದೊಡ್ಡ ಅಧಿಕಾರಿಗಳ ಕೈವಾಡವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ʼನರೇಂದ್ರ ಮೋದಿ ನಿಲಯʼ: ಮಗಳಿಗಾಗಿ ನಿರ್ಮಿಸಿದ ಮನೆಗೆ ಪ್ರಧಾನಿ ಹೆಸರಿಟ್ಟ ಅಭಿಮಾನಿ


ಕನಕಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಸುವಾಗ ಪಕ್ಷ ಭೇದ ಬೇಡ. ಯಾರೇ ತಪ್ಪಿತಸ್ಥರಿದ್ದರೂ ಸೂಕ್ತ ತನಿಖೆ ಕೈಗೊಂಡು ಶಿಕ್ಷೆ ನೀಡಬೇಕು. ಮರು ಪರೀಕ್ಷೆಯಿಂದ ಯಾವುದೇ ಪ್ರಯೋಜನವಿಲ್ಲ. ನೊಂದ ಅಭ್ಯರ್ಥಿಗಳಿಗೆ ನ್ಯಾಯ ದೊರೆಯುವುದಿಲ್ಲ. ಸಿಡಿಐ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. 


ಬಿ.ಎಲ್. ಸಂತೋಷ್  ಹೇಳಿಕೆಗೆ ತೀರುಗೇಟು: 
"ಬಿ.ಎಲ್.ಸಂತೋಷ್ ಹೇಳಿಕೆ ನೀಡಬೇಕಾದರೆ ಯೋಚನೆ ಮಾಡಬೇಕು. ವಂಶ ರಾಜಕಾರಣದ ಬಗ್ಗೆ, ಬೇರೊಂದು ಪಕ್ಷದ ಬಗ್ಗೆ ಮಾತನಾಡಿದ್ದಾರೆ. ಅದು ಎಷ್ಟು ‌ಸರಿ. ಅವರ ಪಕ್ಷದಲ್ಲೇ ಯಡಿಯೂರಪ್ಪ ಕುಟುಂಬ ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ ಕುಟುಂಬ ಇಲ್ಲವೇ? ಬಿ.ಎಲ್.ಸಂತೋಷ್‌ಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. 


ಇದನ್ನು ಓದಿ: ಪಿಎಸ್ಐ ನೇಮಕಾತಿ ಹಗರಣ: ಕಿಂಗ್‌ಪಿನ್‌ ಮಂಜುನಾಥ್‌ ಶರಣು


ಸದ್ಯ  ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದ ಕಿಂಗ್‌ಪಿನ್‌ ಮಂಜುನಾಥ್ ಮೇಳಕುಂದಿ ಇಂದು ಸಿಐಡಿ ಗೆ ಶರಣಾಗಿದ್ದಾರೆ. ಕಳೆದ 20 ದಿನಗಳಿಂದ ತಲೆಮರೆಸಿಕೊಂಡಿದ್ದ ಮಂಜುನಾಥ್‌ ಹುಡುಕಾಟಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಇದೀಗ ಅವರೇ ಬಂದು ಶರಣಾಗಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.