ರಫೇಲ್ ಹಣದ ಮೂಲಕ ಬಿಜೆಪಿ ಆಪರೇಶನ್ ಕಮಲಕ್ಕೆ ಮುಂದಾಗಿದೆ.- ಪಿ.ವಿ.ಮೋಹನ್
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಪಿ. ವಿ. ಮೋಹನ್ ಅವರು ಬಿಜೆಪಿ ವಿರುದ್ದ ಕಿಡಿ ಕಾರುತ್ತಾ` ರಫೆಲ್ ವ್ಯವಹಾರದಲ್ಲಿ ಮಾಡಿದ ಹಣವನ್ನು ಕಾಂಗ್ರೆಸ್ ಶಾಸಕರನ್ನು ಕರ್ನಾಟಕದಲ್ಲಿ `ಆಪರೇಷನ್ ಕಮಲದ` ಮೂಲಕ ಸೆಳೆಯಲು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಪಿ. ವಿ. ಮೋಹನ್ ಅವರು ಬಿಜೆಪಿ ವಿರುದ್ದ ಕಿಡಿ ಕಾರುತ್ತಾ" ಬಿಜೆಪಿ ರಫೆಲ್ ವ್ಯವಹಾರದಲ್ಲಿನ ಹಣವನ್ನು ಕರ್ನಾಟಕದಲ್ಲಿ 'ಆಪರೇಷನ್ ಕಮಲದ' ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಆದ್ದರಿಂದ ಸಮ್ಮಿಶ್ರ ಸರ್ಕಾರ ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಇದನ್ನು ತನಿಖೆ ಒಳಪಡಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.ಬೆಳಗಾವಿಯಲ್ಲಿ ಶುಕ್ರವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಫೇಲ್ ಒಪ್ಪಂದದ ಮೂಲಕ ಭಾರಿ ದುರುಪಯೋಗ ನಡೆದಿದೆ ಎಂದು ತಿಳಿಸಿದರು.
ರಫೇಲ್ ಒಪ್ಪಂದದಲ್ಲಿ ಸರ್ಕಾರಕ್ಕೆ ಸೇರಿದ "ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಬದಲಾಗಿ ಅನಿಲ್ ಅಂಬಾನಿಗೆ ಸೇರಿದ ಕಂಪೆನಿಗೆ ಈ ಒಪ್ಪಂದವನ್ನು ವಹಿಸಲಾಗಿದೆ. ಆ ಮೂಲಕ ಇದರಿಂದ ಸಂಗ್ರಹಿಸಿದ ಹಣದಲ್ಲಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಆಪರೇಷನ್ ಕಮಲದ ಕಾರ್ಯಾಚರಣೆ ಬಳಸಲಾಗುತ್ತಿದೆ ಎಂದು ಮೋಹನ್ ಅವರು ಆರೋಪಿಸಿದ್ದಾರೆ.