ಮೈಸೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜಕೀಯ ಅನುಭವ ಇಲ್ಲ, ಅವರೊಬ್ಬ 'ಪಾಪ ಪಾಂಡು' ಇದ್ದಂಗೆ ಎಂದು ಮಾಜಿ ಸಂಸದ ಮತ್ತು ಜೆಡಿಎಸ್ ಮುಖಂಡ ಹೆಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಹುಲ್‌ ಗಾಂಧಿಗೆ ಕರ್ನಾಟಕ ರಾಜ್ಯದ ಸಂಸ್ಕೃತಿ ಗೊತ್ತಿಲ್ಲ, ರಾಜ್ಯದ ರಾಜಕಾರಣ ತಿಳಿದಿಲ್ಲ, ಯಾರೋ ಬರೆದುಕೊಟ್ಟಿದ್ದನ್ನು ಓದುತ್ತಾರೆ, ಸಂಸತ್ತಿನಲ್ಲಿ ಮೊಬೈಲ್'ನಲ್ಲಿ ಗೇಮ್ ಆಡುತ್ತಾರೆ, ಇವರು ಹೋದ ಕಡೆಯಲ್ಲೆಲ್ಲಾ ಸೋತಿದ್ದಾರೆ. ಇವರು ರಾಜ್ಯಕ್ಕೆ ಎಷ್ಟು ಸಾರಿ ಬಂದರೂ ಗೆಲ್ಲಲು ಸಾಧ್ಯವಿಲ್ಲ. ಇತರರು ಬರೆದುಕೊಟ್ಟದ್ದನ್ನು ಭಾಷಣದಲ್ಲಿ ಓದುತ್ತಾರೆ. ಹಾಗಾಗಿ ರಾಹುಲ್ ಒಂದು ರೀತಿಯಲ್ಲಿ 'ಪಾಪಾ ಪಾಂಡು' ಇದ್ದ ಹಾಗೆ" ಎಂದು ವಿಶ್ವನಾಥ್ ವ್ಯಂಗ್ಯ ಮಾಡಿದರು. 


ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರನ್ನು ಸಂಭಾವ್ಯ ಪ್ರಧಾನಿ ಎಂದು ಹೇಳುತ್ತಾರೆ. ಆದರೆ ರಾಹುಲ್ ಗೆ 130 ಕೋಟಿ ಜನರನ್ನು ಆಳುವ ಅರ್ಹತೆ ಇಲ್ಲ. ಎನ್ಸಿಸಿ, ಎನ್ಎಸ್ಎಸ್ ಏನು ಎಂಬ ಸಾಮಾನ್ಯ ಜ್ಞಾನವೂ ರಾಹುಲ್ ಗೆ ಇಲ್ಲ. ಇಂಥವರನ್ನು ರಾಷ್ಟ್ರನಾಯಕ ಎಂದು ಒಪ್ಪುವುದು ಹೇಗೆ? ಎಂದು ಪ್ರಶ್ನಿಸಿದರು.


ಇನ್ನು, ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸೇರಿದ್ದನ್ನು ಖಂಡಿಸಿದ ಅವರು, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಎಲ್ಲಾ 7 ಶಾಸಕರೂ ಮ್ಯಾಚ್ ಫಿಕ್ಸಿಂಗ್ ಗಿರಾಕಿಗಳು ಎಂದು ಆರೋಪಿಸಿದರು.