ರಾಯಚೂರು : ಜನಾಶೀರ್ವಾದ ಯಾತ್ರೆಯ 3 ನೇ ದಿನದ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಲ್ಲಿನ ಕಲ್ಮಲಾದ ಪುಟ್ಟ ಹೋಟೆಲ್ ಗೆ ಭೇಟಿ ನೀಡಿ ಮೆಣಸಿನಕಾಯಿ ಬಜ್ಜಿ ಮತ್ತು ಚಹಾ ಸೇವಿಸಿದರು.  


COMMERCIAL BREAK
SCROLL TO CONTINUE READING

ದರ್ಗಾ ಭೇಟಿ ನಂತರ ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದಲ್ಲಿ ರಸ್ತೆ ಪಕ್ಕದಲ್ಲಿನ ಮೌಲಾ ಸಾಬ್ ಎಂಬುವವರ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ ಮಂಡಕ್ಕಿ ವಗ್ಗರಣೆ, ಮಿರ್ಚಿ ಬಜ್ಜಿಯ ರುಚಿ ಸವಿದರು. ಅಲ್ಲದೆ ತಮ್ಮೊಂದಿಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಸೇರಿದಂತೆ ಜೊತೆಯಲ್ಲಿದ್ದ ಎಲ್ಲಾ ಸಚಿವರು, ಶಾಸಕರಿಗೂ ಮೆಣಸಿನಕಾಯಿ ಬಜ್ಜಿ ಹಂಚಿದರು. 


ನಂತರ ಅಲ್ಲಿದ್ದ ಹೋಟೆಲ್‌ ಮಾಲಿಕ ಹಾಗೂ ಮಹಿಳಾ ವ್ಯಾಪಾರಿಗಳ ಜೊತೆ ರಾಹುಲ್‌ ಗಾಂಧಿ ಚರ್ಚೆ ನಡೆಸಿದರು.