ವಿಜಯನಗರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಓರ್ವ ಅಯೋಗ್ಯ, ನಕಲಿ ಬ್ರಾಹ್ಮಣ, ಪ್ರಧಾನಿ ಆಗಲು ಯೋಗ್ಯವಾದ ಅಭ್ಯರ್ಥಿ ಅಲ್ಲ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ವಿಧಾನ ಪರಿಷತ್​ ಉಪ ಚುನಾವಣಾ ಪ್ರಚಾರಕ್ಕಾಗಿ ಸಿಂದಗಿಯಲ್ಲಿ ಮಾತನಾಡಿದ ಅವರು, ರಾಹುಲ್​ ಗಾಂಧಿಗೆ ಚೀನಾ ಮತ್ತು ಪಾಕಿಸ್ತಾನದಲ್ಲಿ ಏಜೆಂಟ್​​ಗಳಿದ್ದಾರೆ. ಹಾಗಾಗಿ ಅವರು ಕರೆಯದೆ ಇದ್ದರೂ ರಾಹುಲ್​ ಗಾಂಧಿ ವಿದೇಶಕ್ಕೆ ಹೋಗುತ್ತಾರೆ ಎಂದು ಆರೋಪಿಸಿದರಲ್ಲದೆ, ಇಂತಹ ಅಯೋಗ್ಯ ಈ ದೇಶದ ಪ್ರಧಾನಿಯಾದರೆ ಅದೊಂದು ದುರಂತ ಎಂದು ಯತ್ನಾಳ್ ಅಭಿಪ್ರಾಯಪಟ್ಟರು.


ಮುಂದುವರೆದು ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೇ ರಾಹುಲ್ ಗಾಂಧಿ ಅವರಿಗೆ ದೇವರ ನೆನಪಾಗುತ್ತದೆ. ಇದೇ ಕಾರಣಕ್ಕೆ ತಾವೊಬ್ಬ ಜನಿವಾರ ಹಾಕಿಕೊಂಡಿರುವ ಬ್ರಾಹ್ಮಣ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಾರೆ. ಅವರೊಬ್ಬ ನಕಲಿ ಬ್ರಾಹ್ಮಣ ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ಸಾಕಷ್ಟು ಚರ್ಚೆಗೆ ಗ್ರಾಸಯಾಗಿದೆ.