ಯಾದಗಿರಿ : ರಾಹುಲ್ ಗಾಂಧಿ ಒಬ್ಬ ದೇಶದ್ರೋಹಿ, ಅವರಿಗೆ ದೇಶದ ಬಗ್ಗೆ ನಿಯತ್ತು ಇಲ್ಲಾ. ಇಲ್ಲದಿದ್ದರೆ ವಿದೇಶದಲ್ಲಿ ಭಾರತವನ್ನ ಟೀಕೆ ಮಾಡ್ತಿರಲಿಲ್ಲ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ‌ ನಡೆಸಿದರು.


COMMERCIAL BREAK
SCROLL TO CONTINUE READING

ಯಾದಗಿರಿಯ ಶಹಪುರದಲ್ಲಿ ಮಾತನಾಡಿದ ಸಿಟಿ ರವಿ, ಕಾಂಗ್ರೆಸ್‌ನವ್ರಿಗೆ ನೀತಿ ನಿಯತ್ತು ಇಲ್ಲ. ಯಾರು ನಮ್ಮ ದೇಶವನ್ನ ಇನ್ನೂರು ವರ್ಷಗಳ ಕಾಲ ಕೊಳ್ಳೆ ಹೊಡೆದ್ರೂ ಅವರ ಬಳಿ ಸಹಾಯ ಕೇಳ್ತಾರೆ. ವಿದೇಶಿಗರಿಂದ ಸಹಾಯ ಕೇಳು ಸ್ಥಿತಿಗೆ ಇನ್ನು ನಮ್ಮ ದೇಶ ಬಂದಿಲ್ಲ. ವಿದೇಶಿಗರ ಸಹಾಯ ಕೇಳೋದು ದೇಶ ದ್ರೋಹ. ಅವ್ರು ದೇಶದ ಜನರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವ್ರಿಗೆ ದೇಶಕ್ಕೆ ಬರೋ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: ಗಡಿ ಜಿಲ್ಲೆಯಲ್ಲಿ ಹಾರಿ ಬಂತೊಂದು ವಿಚಿತ್ರ ಎಲೆಕ್ಟ್ರಿಕಲ್ ಬಲೂನು


ಪಾರ್ಲಿಮೆಂಟ್‌ನಲ್ಲಿ ಗಂಟೆಗಟ್ಟಲೇ ಅಂಬಾನಿ, ಅದಾನಿ ಹಾಗೂ ಪ್ರಧಾನಿ ಬಗ್ಗೆ ಮಾತಾಡ್ತಾರೆ. ಆದ್ರೆ ಭಾರತದಲ್ಲಿ ಮುಕ್ತ ಚರ್ಚೆಗೆ ಅವಕಾಶ ಇಲ್ಲ ಅಂತಾರೆ. ಮುಕ್ತ ಚರ್ಚೆಗೆ ಅವಕಾಶ ಇಲ್ಲ ಅಂದಿದ್ರೆ ದೇಶದ ಪ್ರಧಾನಿ ಬಗ್ಗೆ ಮಾತಾಡೋಕೆ ಅವಕಾಶ ಇರ್ತಿರಲಿಲ್ಲ. ಅಫ್ಘಾನಿಸ್ತಾನದಲ್ಲಿ‌ ಈ ರೀತಿ ಪ್ರಧಾನಿ ಬಗ್ಗೆ ಮಾತಾಡಿದ್ರೆ ಏನ್ ಮಾಡಬಹುದು ಅಂತ ನೀವು ನೋಡಬಹುದು?. ರಾಹುಲ್ ಗಾಂಧಿಗೆ ದೇಶದ ಬಗ್ಗೆ ನಿಯತ್ತು ಇಲ್ಲ. ಅವರ ಕೈಯಲ್ಲಿ, ಕುಟುಂಬದ ಕೈಯಲ್ಲಿ ಅಧಿಕಾರ ಇದ್ರೆ ಮಾತ್ರ ಇವರ ಪ್ರಕಾರ ಪ್ರಜಾಪ್ರಭುತ್ವ ಎಂದು ವ್ಯಂಗ್ಯವಾಡಿದರು.


ಇದನ್ನೂ ಓದಿ: Karnataka 2nd PUC Exam: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ


ಕಾಂಗ್ರೆಸ್ ನಲ್ಲಿ ಖರ್ಗೆ ಅವ್ರು ನಾಮಕಾವಸ್ತೆ ಅದ್ಯಕ್ಷ : ಸದ್ಯ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ನಾಮಕಾವಸ್ತೆ ಅದ್ಯಕ್ಷರಾಗಿದ್ದಾರೆ. ವಯಸ್ಸಿನಲ್ಲಿ, ಅನುಭವದಲ್ಲಿ ಮಾತ್ರ ಖರ್ಗೆ ಅವ್ರು ಹಿರಿಯರು. ಆದ್ರೆ ಬರೀ ಕೊಡೆ ಹಿಡಿತಾರೆ ಅಂತಾ ಪ್ರಧಾನಿ ಮೋದಿ ಅವ್ರು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪವರ್ ಲೆಸ್ ಅದ್ಯಕ್ಷ. ನೀತಿ, ನೇತೃತ್ವ, ನಿಯತ್ತು ಇಲ್ಲದ ಕಾಂಗ್ರೆಸ್. ನೀತಿ, ನಿಯತ್ತು, ನೇತೃತ್ವ ಇರುವ ಪಕ್ಷ ಬಿಜೆಪಿ. ಇದೇ ವಿಚಾರ ಇಟ್ಕೊಂಡು ಜನರ ಬಳಿ ಹೋಗ್ತೇವೆ ಎಂದು ಸಿಟಿ ರವಿ ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.