ಬೆಂಗಳೂರು: ತನ್ನ ಸ್ವಾರ್ಥ ರಾಜಕಾರಣಕ್ಕಾಗಿ, ವಿದೇಶಗಳಿಗೆ ತೆರಳಿ ಭಾರತದ ಅಸ್ಮಿತೆಯನ್ನು ಕೆಣಕುವ ಹಾಗೂ ಭಾರತದ ಸಾರ್ವಭೌಮತ್ವವನ್ನು ವ್ಯಂಗ್ಯ ಮಾಡುವ ರಾಹುಲ್‌ರನ್ನು ಗಡಿಪಾರು ಮಾಡಿ ಎಂದು ಆಗ್ರಹಿಸಬೇಕಿತ್ತು ಎಂದು ಬಿಜೆಪಿ ಕಿಡಿಕಾರಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಅನರ್ಹ ಸಂಸದ ರಾಹುಲ್ ಗಾಂಧಿಯ ಪರ #ATMSarkara ದವರು ಮೌನ ಪ್ರತಿಭಟನೆ ನಡೆಸಿದ್ದು ಒಂದು ಹಾಸ್ಯಾಸ್ಪದ ಸಂಗತಿ. ಜಾತಿನಿಂದನೆ ಅಪರಾಧವೇ, ಅದರಲ್ಲಿಯೂ ರಾಜಕೀಯ ದ್ವೇಷದಿಂದ ಭಾರತದ ಪ್ರಧಾನಿಯವರ ಜಾತಿಯನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿದ್ದು ವಿದೇಶಿ ಕೈಗೊಂಬೆ ರಾಹುಲ್ ಗಾಂಧಿಯ ಅಪ್ರಬುದ್ಧತೆಗೆ ಮತ್ತು ಸಂವಿಧಾನ ವಿರೋಧಿ ಮಾನಸಿಕತೆಗೆ ಸಾಕ್ಷಿಯಾಗಿದೆ’ ಎಂದು ಟೀಕಿಸಿದೆ.


ಚಂದ್ರನ ಅನ್ವೇಷಣೆಯಲ್ಲಿ ಇಸ್ರೋ ಮತ್ತೊಂದು ಮೈಲುಗಲ್ಲು: ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು


‘ಇಂತಹ ಹೀನ ಮನಸ್ಥಿತಿಯುಳ್ಳ ರಾಹುಲ್ ಪರ ಪ್ರತಿಭಟನೆ ನಡೆಸಿದ್ದು ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಹಿಂದುಳಿದ ವರ್ಗಗಳನ್ನು ಹೀಯಾಳಿಸಿದ್ದಾರೆಂಬ ಕಾರಣಕ್ಕೆ ಘನ ನ್ಯಾಯಾಲಯವು ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದ್ದು, ಕಾನೂನಿನ ಪ್ರಕಾರ ಸಹಜವಾಗಿಯೇ ಅನರ್ಹಗೊಂಡಿದ್ದಾರೆ. ಆದರೇ, ನ್ಯಾಯಾಲಯದ ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿರುವ "ಕೈ" ಪಕ್ಷದವರು, ನ್ಯಾಯಾಂಗ ವ್ಯವಸ್ಥೆಯ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.


ಅಪಘಾತ ವಿಮೆ ತಿರಸ್ಕರಿಸಿದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ 15.60 ಲಕ್ಷ ರೂ  ದಂಡ 


‘ಭಾರತದ ಅಸ್ಮಿತೆಯ ಪರಮವೈರಿ ಜಾರ್ಜ್ ಸೋರಸ್ ಸಂಗಡಿಗರ ಜೊತೆ ಜೊತೆಗೆ ಅಮೇರಿಕಾದಲ್ಲಿ ರಾಹುಲ್ ಭಾರತವನ್ನು ಅವಮಾನಿಸುತ್ತಾರೆ. ಅದೇ ರಾಹುಲ್ ಭಾರತದ ಪರಮವೈರಿ ಚೀನಾಕ್ಕೆ ಕದ್ದು ಮುಚ್ಚಿ ಭೇಟಿ ಮಾಡುತ್ತಾರೆ. ಇದೇ ರಾಹುಲ್ ಇಂಗ್ಲೆಂಡ್‍ಗೆ ಭೇಟಿ ನೀಡಿ, ಅಲ್ಲಿನ ಪ್ರಜೆಗಳನ್ನು, ಭಾರತದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸಿ ಎಂದು ಕರೆ ಕೊಡುತ್ತಾರೆ. ಕಾಂಗ್ರೆಸ್ ಇದರ ವಿರುದ್ಧ ಪ್ರತಿಭಟಿಸಲು ನಿಮಗೆ ಧೈರ್ಯವಿದೆಯೇ..?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.