ತುಮಕೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚಿಗೆ ತುಮಕೂರಿನಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ರೋಡ್ ಶೋ ವೇಳೆ ಅಭಿಮಾನಿಯೊಬ್ಬ ಎಸೆದ ಹಾರ ರಾಹುಲ್ ಕೊರಳಿಗೆ ಕರೆಕ್ಟಾಗಿ ಬಿದ್ದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ತುಮಕೂರಿನಲ್ಲಿ ರಾಹುಲ್ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ, ಭದ್ರತಾ ದೃಷ್ಟಿಯಿಂದ ಸಮೀಪಕ್ಕೆ ಹೋಗಿ ಹಾರಹಾಕಲಾಗದ ಪರಿಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಅಭಿಮಾನಿ ಓರ್ವ ರಾಹುಲ್ ವಾಹನ ಸಮೀಪಿಸುತ್ತಿದ್ದಂತೆ ಹೂವಿನ ಹಾರವನ್ನು ರಾಹುಲ್ ಕಡೆಗೆ ಎಸೆದಿದ್ದಾರೆ. ಆ ಹಾರ ನೇರವಾಗಿ ರಾಹುಲ್ ಕೊರಳಿಗೆ ಬಿದ್ದಿದೆ. ಈ ದೃಶ್ಯದ ವೀಡಿಯೊ ಈಗ ವೈರಲ್ ಆಗಿದ್ದು, ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಕರ್ನಾಟಕದ ಪ್ರತಿಭೆ(Karnataka’s got talent!) ಎಂಬ ಶೀರ್ಷಿಕೆಯಡಿ ಈ ದೃಶ್ಯವಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.