Karnataka Rain Alert 28-05-2023: ಬೆಂಗಳೂರು: ಮುಂದಿನ ಮೂರ್ನಾಲ್ಕು ದಿನಗಳಲ್ಲಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

IMD (India Meteorological Department) ಪ್ರಕಾರ, ಮೇ 30 ಮತ್ತು 31 ರಂದು ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ, ಆದರೆ ಉತ್ತರದ ಒಳನಾಡು ಪ್ರದೇಶಗಳಲ್ಲಿ ಮೇ 31 ರಿಂದ ಹೆಚ್ಚಿನ ಮಳೆ ಪ್ರಾರಂಭವಾಗಲಿದೆ.


ಇದನ್ನೂ ಓದಿ: ಇಂದು ನೂತನ ಸಂಸತ್ ಭವನ ಉದ್ಘಾಟನೆ: ಹಳೆ ಪಾರ್ಲಿಮೆಂಟ್’ಗಿಂತ ಇದು ಹೇಗೆ ಭಿನ್ನ ಗೊತ್ತಾ?


ರಾಜ್ಯ ರಾಜಧಾನಿ ಬೆಂಗಳೂರಿನ ವಿಷಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ನಿರೀಕ್ಷೆ ಇದೆ. ಮೇ 28 ಮತ್ತು 29 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಿತಿಯ ವಿವಿಧ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ರಾತ್ರಿಯಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.


ಇನ್ನು ಕಳೆದ 15 ದಿನಗಳಲ್ಲಿ, ಉತ್ತರ ಭಾರತದ ಹವಾಮಾನದಲ್ಲಿ ಭಾರಿ ಏರುಪೇರು ಉಂಟಾಗಿದೆ. ಕೆಲವೊಮ್ಮೆ ಗಾಢ ಬಿಸಿಲು ಮತ್ತು ಕೆಲವೊಮ್ಮೆ ಬಲವಾದ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಒಟ್ಟಾರೆಯಾಗಿ, ಹವಾಮಾನ ಇಲಾಖೆ (ಐಎಂಡಿ) ತನ್ನ ಇತ್ತೀಚಿನ ಬುಲೆಟಿನ್‌ ಬಿಡುಗಡೆ ಮಾಡಿದ್ದು ಅದರಲ್ಲಿ, ಭಾನುವಾರದಿಂದ ಕೆಲವು ದಿನಗಳವರೆಗೆ ಸ್ವಲ್ಪ ಸಮಾಧಾನಕರ ಹವಾಮಾನ ಎದುರಾಗಲಿದೆ ಎಂದು ಮುನ್ಸೂಚನೆ ನೀಡಿದೆ.


ದೆಹಲಿ, ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಶನಿವಾರ ಬೆಳಗ್ಗೆ ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಹಲವು ವಿಮಾನಗಳ ಮಾರ್ಗ ಬದಲಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.


72 ಗಂಟೆಗಳ ಕಾಲ ಈ ರಾಜ್ಯಗಳಲ್ಲಿ ಎಚ್ಚರಿಕೆ!


IMD ಪ್ರಕಾರ, ಭಾರೀ ಮಳೆ ಮತ್ತು ಗುಡುಗುಗಳಿಂದ ಶೀಘ್ರದಲ್ಲಿ ಮುಕ್ತಿ ಸಿಗುವುದಿಲ್ಲ. ಅರಬ್ಬಿ ಸಮುದ್ರದಿಂದ ತೇವಾಂಶ ಬರುತ್ತಿರುವುದರಿಂದ ವಾಯವ್ಯ ಭಾರತದಲ್ಲಿ ಭಾನುವಾರವೂ ಇದೇ ರೀತಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಯುವ್ಯ ಭಾರತದಲ್ಲಿ 4 ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಈಶಾನ್ಯ ಉತ್ತರ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಇತರ ಪ್ರದೇಶಗಳಲ್ಲಿ ಭಾನುವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.


ಮೇ 28-30ರ ನಡುವೆ ಭಾರೀ ಮಳೆಯಿಂದ ವಾಯುವ್ಯ ಭಾರತದ ಜನ ನಲುಗಿ ಹೋಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಮೇ 31ರ ನಂತರವೇ ಪೂರ್ವ ಮುಂಗಾರು ಮಳೆಯೊಂದಿಗೆ ಭಾರೀ ಮಳೆಯ ಈ ಅವಧಿಗೆ ಸ್ವಲ್ಪ ವಿರಾಮ ಸಿಗಲಿದೆ.


ಇದನ್ನೂ ಓದಿ: IPL Final 2023: ಇಂದು ಐಪಿಎಲ್ 2023ಕ್ಕೆ ತೆರೆ: ಪಿಚ್ ಕುರಿತು ಕೋಚ್ ಶಾಕಿಂಗ್ ಹೇಳಿಕೆ!


ದಕ್ಷಿಣ ಭಾರತದ ಸ್ಥಿತಿ ಹೀಗಿರಲಿದೆ:


ದಕ್ಷಿಣ ಭಾರತದ ಬಗ್ಗೆ ಮಾತನಾಡುವುದಾದರೆ, ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಮುಂದಿನ ಐದು ದಿನಗಳವರೆಗೆ ಹಗುರದಿಂದ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಮೇ 27 ರಂದು ತಮಿಳುನಾಡು, ಮೇ 27-29 ರಂದು ಕೇರಳ, ಮೇ 29 ರಂದು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ