ಚಾಮರಾಜನಗರ: ಭಾನುವಾರ ಸಂಜೆಯಿಂದ ರಾತ್ರಿವರೆಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಅವಾಂತರವನ್ನೇ ಸೃಷ್ಟಿಸಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. 


COMMERCIAL BREAK
SCROLL TO CONTINUE READING

ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರು ಭಾಗದಲ್ಲಿ 2 ತಾಸಿಗೂ ಅಧಿಕ ಮಳೆಯಾಗಿದ್ದು  ಹಲವೆಡೆ ರಸ್ತೆಗಳಿಗೆ ಮರಗಳು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. 


ಇದನ್ನೂ ಓದಿ- ಇನ್ಮುಂದೆ ಹಾರ ತುರಾಯಿ ಬೇಡ, ಬದಲಾಗಿ ಪುಸ್ತಕ ನೀಡಿ ಎಂದ ಸಿಎಂ ಸಿದ್ದರಾಮಯ್ಯ


ಹನೂರು ಪಟ್ಟಣದ ಬಾಲು ಎಂಬುವವರ ಮನೆ ಮೇಲೆ ಇರುವ ನೀರಿನ ಟ್ಯಾಂಕ್‌ಗೆ ಮರವೊಂದು ಮುರಿದು ಮೇಲೆ ಬಿದ್ದು ಟ್ಯಾಂಕ್ ಹೊಡೆದು ಹೋಗಿದೆ. ಜೊತೆಗೆ ಮನೆಯ ಮೇಲೆ ಮರಬಿದ್ದಿರುವುದರಿಂದ  ಗೋಡೆಗೂ ಹಾನಿಯಾಗಿದೆ. ಅಲ್ಲದೇ ಕೆ.ಇ.ಬಿ ಮುಂಭಾಗ ಇರುವ ಬಡಾವಣೆಯೊಂದರ ಕೃಷ್ಣ ನಾಯ್ಡು ಎಂಬುವವರ ಮನೆಯ ಛಾವಣಿ ಗಾಳಿಗೆ ಹಾರಿ ಹೋಗಿದ್ದು ದಿನಬಳಕೆಯ ವಸ್ತುಗಳು ಮಳೆ ನೀರಿನಿಂದ ನಾಶವಾಗಿದೆ.


ಹನೂರು ತಾಲೂಕಿನ ಹಲವೆಡೆ ಬೆಳೆದಿದ್ದ ಜೋಳ ಗಾಳಿ-ಮಳೆಗೆ  ನೆಲಕಚ್ಚಿದೆ. ಗುಂಡ್ಲುಪೇಟೆಯಲ್ಲೂ ಭರ್ಜರಿ ಮಳೆಯಾಗಿದ್ದು ಕೆಬ್ಬೇಪುರ ಗ್ರಾಮದಲ್ಲಿ ಪ್ರಕಾಶ್ ಎಂಬವರು ಬೆಳೆದಿದ್ದ ಬೀನ್ಸ್ ನಾಶವಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ‌. ಚಾಮರಾಜನಗರ ತಾಲೂಕಿನ ಹಲವೆಡೆ ಬಾಳೆಯು ನೆಲಕ್ಕುರುಳಿದ್ದು ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. 


ಇದನ್ನೂ ಓದಿ- Siddaramaiah Zero Traffic: ಬೆಂಗಳೂರಿನಲ್ಲಿ ಜೀರೋ ಟ್ರಾಫಿಕ್ ಬೇಡವೆಂದ ಸಿದ್ದರಾಮಯ್ಯ


ಚಾಮರಾಜನಗರದಲ್ಲಿ ಒಂದು ದಿನ ಸುರಿದ ಮಳೆಗೆ ಮಹಾ ಅವಾಂತರವೇ ಸೃಷ್ಟಿಯಾಗಿದ್ದು ಮುಂಗಾರು ಆರಂಭವಾದ ಬಳಿಕ ಇನ್ನೇನು ಕಥೆ ಎಂಬ ಆತಂಕ ಜನರಲ್ಲಿ ಎದುರಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ