ಹುಬ್ಬಳ್ಳಿ: ಬಡವರ ಸಂಜೀವಿನಿ ಎಂದು ಹೆಸರಾದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಸ್ಥಿತಿಯನ್ನು ನಿನ್ನೆ (23 ಮೇ, ಮಂಗಳವಾರ) ಸುರಿದ ಮಳೆಯಿಂದ ಬಯಲಾಗಿದೆ. ಮಂಗಳವಾರ ಸಂಜೆ ನಗರದಲ್ಲಿ ಸುರಿದ ಬಾರಿ ಮಳೆಗೆ ಕಿಮ್ಸ್ ಆಸ್ಪತ್ರೆಯ ಒಳಗಡೆಯೇ ನೀರು ಬಂದು ರೋಗಿಗಳು, ರೋಗಿಗಳ ಸಂಬಂಧಿಕರು, ಕಿಮ್ಸ್ ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಪರದಾಡಿದ ದ್ರಶ್ಯಗಳು ಕಿಮ್ಸ್ ಆಸ್ಪತ್ರೆಯ ಐ‌ಸಿ‌ಯು ಮುಂಭಾಗದಲ್ಲಿ ಕಂಡು ಬಂದಿದೆ. 


COMMERCIAL BREAK
SCROLL TO CONTINUE READING

ಇನ್ನು ಕಿಮ್ಸ್ ಆಸ್ಪತ್ರೆಯ ನಿರ್ವಹಣೆಗಾಗಿ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಅನುದಾನ ಹರಿದು ಬಂದರು ಕೂಡಾ ಆ ಅನುದಾನ ಹರಿದು ಎಲ್ಲೋ ಸೇರುವುದರಿಂದ, ಮಳೆಯ ನೀರು ಮಾತ್ರ ಕಿಮ್ಸ್ ಆಸ್ಪತ್ರೆಯ ಒಳಗಡೆ ಸೇರುತ್ತಿದ್ದು ಕಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಇಲ್ಲಿನ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.


ಇದನ್ನೂ ಓದಿ- ರಾಜಧಾನಿಯಲ್ಲಿ ನಾಳೆ ಪವರ್ ಕಟ್: ನಿಮ್ಮ ಏರಿಯಾ ಬಗ್ಗೆ ಈಗಲೇ ಚೆಕ್ ಮಾಡಿ!


ಹುಬ್ಬಳ್ಳಿ ಸೇರಿದಂತೆ ನವಲಗುಂದ, ಕುಂದಗೋಳ ಪಟ್ಟಣದಲ್ಲಿಯೂ ಮಳೆರಾಯಣ ಆರ್ಭಟ ಜೋರಾಗಿದ್ದು ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಕೊಂಚ ನೆಮ್ಮದಿಯನ್ನು ತಂದಿದೆ. 


ಇದನ್ನೂ ಓದಿ- 2 ವರ್ಷಗಳ ಬಳಿಕ ಡಿ.ಕೆ.ಶಿವಕುಮಾರ್ 8 ವರ್ಷ ಸಿಎಂ ಆಗ್ತಾರೆ: ಹೀಗೆ ಹೇಳಿದ್ಯಾರು ಗೊತ್ತಾ?


ಮಳೆರಾಯ ತಂಪೆರದಿದ್ದರಿಂದಾಗಿ ನಗರದ ಜನತೆ ಸೇರಿದಂತೆ ರೈತರ ಮೊಗದಲ್ಲಿ ಮಳೆಯ ಆಗಮನವು ಮಂದಹಾಸ ಮೂಡಿಸಿದೆ.‌  ಜಿಲ್ಲೆಯ ಸೇರಿದಂತೆ ನಗರದ ಬಹುತೇಕ ಕಡೆ ಮಳೆಯಾಗಿದ್ದು, ಯಾವುದೇ ಅಹಿತಕರ ಘಟನೆಗಳ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ