ರಾಜ್ಯಾದ್ಯಂತ ಮಳೆ... ಮಳೆ... ಮಳೆ...! `ದ್ವೀಪ`ದಂತಾದ ಬಳ್ಳಾರಿಯ ಜಾಲಿಹಾಳ್ ಗ್ರಾಮ
ಬಹಳ ವರ್ಷಗಳಿಂದ ಮಳೆ ಇಲ್ಲದೆ ಬೇಸರಗೊಂಡಿದ್ದ ರಾಜ್ಯದ ಜನತೆಗೆ ಈ ಬಾರಿಯ ವರ್ಷದಾರೆ ಹರ್ಷ ತಂದಿದೆ. ಆದರೆ, ಕೆಲವೆಡೆ ಎಡಬಿಡದೆ ಸುರಿಯುತ್ತಿರುವ ಬಾರಿ ಮಳೆಗೆ ಜನರು ತತ್ತರಿಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಬಳ್ಳಾರಿ ಜಿಲ್ಲೆಯ ಜಾಲಿಹಾಳ್ ಗ್ರಾಮವಂತೂ ಅಕ್ಷರ ಸಹ 'ದ್ವೀಪದಂತಾಗಿದೆ'.
ಹೌದು, ಬಹಳ ವರ್ಷಗಳಿಂದ ಮಳೆ ಇಲ್ಲದೆ ಬೇಸರಗೊಂಡಿದ್ದ ರಾಜ್ಯದ ಜನತೆಗೆ ಈ ಬಾರಿಯ ವರ್ಷದಾರೆ ಹರ್ಷ ತಂದಿದೆ. ಆದರೆ, ಕೆಲವೆಡೆ ಎಡಬಿಡದೆ ಸುರಿಯುತ್ತಿರುವ ಬಾರಿ ಮಳೆಗೆ ಜನರು ತತ್ತರಿಸಿದ್ದಾರೆ.
ಬೆಂಗಳೂರು, ಕೋಲಾರ, ತುಮಕೂರು, ಹಾಸನ, ಬಳ್ಳಾರಿ, ಕೊಳ್ಳೇಗಾಲ, ಚಾಮರಾಜ ನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ರಸ್ತೆಗಳೆಲ್ಲಾ ಕೆರೆಗಳಂತೆ ನಿರ್ಮಾಣವಾಗಿವೆ.
ಬಳ್ಳಾರಿ ಜಿಲ್ಲೆಯಲ್ಲಿ ವರುಣನ ಅವಾಂತರ - ದ್ವೀಪದಂತಾದ ಬಳ್ಳಾರಿ ತಾಲೂಕಿನ ಜಾಲಿಹಾಳ್ ಗ್ರಾಮ:
ಬಳ್ಳಾರಿ ಜಿಲ್ಲೆಯ ಜಾಲಿಹಾಳ್ ಗ್ರಾಮದ ಎಲ್ಲಾ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕೈಮುರುಕನಹಲ್ಲ, ಕತ್ರಲ್ಲ, ಗಂಗಮ್ಮನಹಳ್ಳ, ಈರಳ ಹಳ್ಳ ಈ ನಾಲ್ಕು ಹಳ್ಳಗಳಿಂದ ತುಂಬಿ ಹರಿಯುತ್ತಿರುವ ಮಳೆ ನೀರಿನಿಂದಾಗಿ ಜಾಲಿಹಾಳ್ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಜಾಲೀಹಾಲ್ ಮೋಕಾ ಬಳ್ಳಾರಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಮೋಕಾ ಪೋಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಗ್ರಾಮದ ಸುತ್ತಮುತ್ತಲ ಮಳೆನೀರಿನಿಂದ ತುಂಬಿ ಹರಿಯುತ್ತಿದೆ. ಆದರೆ ಗ್ರಾಮದೊಳಗೆ ಹಳ್ಳದ ನೀರು ನುಗ್ಗಿಲ್ಲ.
200 ಎಕರೆ ಭತ್ತ ಹಾಗೂ ಮಲೆಯಾಶ್ರಿತ ಬೆಳೆಗಳು ಮಳೆ ನೀರಿನಿಂದ ಹಳ್ಳದ ಪಾಲಾಗಿದೆ. ಎಂ ಗೋನಾಳ ವ್ಯಾಪ್ತಿಯ ಜಾಲಿಹಾಳ್, ಗೋನಾಳ್, ಚಿಹ್ನ್ತಕುಂತ, ಯರ್ರಗುಡಿ, ಸಿಂಧವಾಳ ಗ್ರಾಮದ ರೈತರ ಹೊಲಗಳಿಗೆ ನೀರು ನುಗ್ಗಿರುವ ಪರಿಣಾಮವಾಗಿ - ಭತ್ತ, ಮೆಣಸಿನಕಾಯಿ, ಜೋಳ ಬೆಳೆಗಳು ಹಾನಿಯಾಗಿವೆ.