Raitha Sena: `ಮಹದಾಯಿ ಹಾಗೂ ಕಳಸಾ-ಬಂಡೂರಿ ಕುರಿತು ಕಾಂಗ್ರೆಸ್ ಯಾಕೆ ಮೌನವಾಗಿದೆ`
Raitha Sena - ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನದ ಬಹುದಿನಗಳ ಬೇಡಿಕೆಯ ಬಗ್ಗೆ ಕಾಂಗ್ರೆಸ್ ಏಕೆ ಮೌನವಾಗಿದೆ ಎಂದು ಉತ್ತರ ಕರ್ನಾಟಕದ ರೈತ ಮುಖಂಡರು ಪ್ರಶ್ನಿಸಿದ್ದಾರೆ.
Raitha Sena - ಮಹದಾಯಿ (Mahadayi Project) ಮತ್ತು ಕಳಸಾ-ಬಂಡೂರಿ ಯೋಜನೆ (Kalasa-Banduri Project) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಹುಕಾಲದ ಬೇಡಿಕೆಯ ಬಗ್ಗೆ ಕಾಂಗ್ರೆಸ್ (Congres) ಮೌನವಾಗಿರುವುದೇಕೆ? ಅದರ ನಾಯಕರು ಮೇಕೆದಾಟು ಯೋಜನೆಗೆ (Mekedatu Project) ತೋರುತ್ತಿರುವ ಆಸಕ್ತಿಯನ್ನು ಮಹದಾಯಿ ಮತ್ತು ಕಳಸಾ-ಬಂಡೂರಿ ಅನುಷ್ಠಾನಕ್ಕೆ ಏಕೆ ತೋರುತ್ತಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನು ಉತ್ತರ ಕರ್ನಾಟಕದ ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಕೊವಿಡ್ ಆತಂಕ ಮತ್ತು ವಾರಾಂತ್ಯ ಕರ್ಫ್ಯೂ ನಡುವೆಯೇ ಕಾಂಗ್ರೆಸ್ ಮುಖಂಡರು ಇಂದು ಮೇಕೆದಾಟುವಿನಿಂದ ಬೆಂಗಳೂರಿಗೆ ತಮ್ಮ ಪಾದಯಾತ್ರೆಯನ್ನು ಆರಂಭಿಸಿದ್ದು, ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಆದರೆ, ಇದೇ ಕಾಂಗ್ರೆಸ್ ಮುಖಂಡರು ಮಹದಾಯಿ ಸೇರಿದಂತೆ ಇತರ ಯಾವುದೇ ಉತ್ತರ ಕರ್ನಾಟಕದ ನಿರಾವರಿ ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಆಸಕ್ತಿ ತೋರುತ್ತಿಲ್ಲ. ಇದರಿಂದ ಮಹದಾಯಿ ಯೋಜನೆ ಜಾರಿಯಾಗಬೇಕೆಂಬ ಕಳೆದ ನಾಲ್ಕು ದಶಕಗಳ ಬೇಡಿಕೆ ಕನಸಾಗಿಯೇ ಉಳಿದಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಕಳೆದ 2,365 ದಿನಗಳಿಂದ ಗದಗ ಜಿಲ್ಲೆಯ ನರಗುಂದದಲ್ಲಿ ರೈತ ಸೇನೆಯ (Raitha Sena) ವತಿಯಿಂದ ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ರೈತರು ಧರಣಿ ನಡೆಸುತ್ತಿದ್ದಾರೆ. ರೈತ ಸೇನೆಯ ಬ್ಯಾನರ್ ಅಡಿಯಲ್ಲಿ ರೈತರು ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸುತ್ತಿದ್ದಾರೆ. ರೈತ ಸೇನೆಯ ಬ್ಯಾನರ್ ಅಡಿಯಲ್ಲಿ ರೈತರು ಜುಲೈ 16, 2015 ರಂದು ನರಗುಂದದಲ್ಲಿ ಮಹದಾಯಿ ಆಂದೋಲನವನ್ನು ಆರಂಭಿಸಿದ್ದಾರೆ - ಹೋರಾಟದ ಕೇಂದ್ರಬಿಂದು, ಮತ್ತು 2,365 ದಿನಗಳ ನಿರಂತರ ಧರಣಿ ನಂತರವೂ ಕೂಡ ರಾಜಕೀಯ ನಿರಾಸಕ್ತಿಯಿಂದಾಗಿ ಇದುವರೆಗೆ ಏನೂ ಬದಲಾಗಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ N.H. ಕೋನರೆಡ್ಡಿ, 'ಮೇಕೆದಾಟು ಪ್ರತಿಭಟನೆಯ ಬಳಿಕ ನಾವು ಮಹದಾಯಿ ಯೋಜನೆಯನ್ನು ಕೂಡ ಕೈಗೆತ್ತಿಕೊಳ್ಳಲಿದ್ದೇವೆ. ಈ ಯೋಜನೆಗಳತ್ತ ಕೂಡ ನಾವು ರಾಜ್ಯ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇವೆ' ಎಂದು ಹೇಳಿದ್ದಾರೆ. ಮಹದಾಯಿ ಯೋಜನೆ ಜಾರಿಯಿಂದ ಬರ ಪೀಡಿತ ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳ 11 ತಾಲೂಕುಗಳ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Basavaraj Bommai : 'ಜನರ ಮರಳು ಮಾಡಲು ಪಾದಯಾತ್ರೆ ಮಾಡ್ತಿದ್ದಾರೆ, ಜನರು ಮರಳಾಗಲ್ಲ'
ಈ ಕುರಿತು ಮಾಧ್ಯಮ ಪ್ರತಿನಿಧಿಯೋಬ್ಬರ ಜೊತೆಗೆ ಮಾತನಾಡಿರುವ ರೈತ ಸೇನೆಯ ರಾಜ್ಯಾಧ್ಯಕ್ಷ ವೀರೇಶ್ ಸೋಬರದಮಠ್, ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. "ಆಡಳಿತಾರೂಢ ಪಕ್ಷಗಳು ಈ ಸಮಸ್ಯೆಯಿಂದ ರಾಜಕೀಯ ಮೈಲೇಜ್ ಪಡೆಯಲು ಮುಂದಿನ ವಿಧಾನಸಭಾ ಚುನಾವಣೆಗಾಗಿ ಕಾಯುತ್ತಿರುವಂತೆ ತೋರುತ್ತಿದೆ" ಎಂದು ಅವರು ಆರೋಪಿಸಿದ್ದಾರೆ. 'ಪ್ರಸ್ತುತ ಸಮಸ್ಯೆಯ ತಾರ್ಕಿಕ ಇತ್ಯರ್ಥಕ್ಕೆ ನಾವು ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ ಮತ್ತು ಸಮಸ್ಯೆ ಬಗೆಹರಿಯುವವರೆಗೂ ನಮ್ಮ ಹೋರಾಟ ಮುಂದುವರಿಸುತ್ತೇವೆ' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ : 'ಹೌದು ಹುಲಿಯಾ' ಎಂದು ಸಿದ್ದರಾಮಯ್ಯಗೆ ಅಭಿಮಾನಿಗಳ ಸ್ವಾಗತ
'ಉತ್ತರ ಕರ್ನಾಟಕದಲ್ಲಿ ಜಾತಿ ರಾಜಕಾರಣ ಆಳವಾಗಿ ಬೇರೂರಿರುವುದು ದುರದೃಷ್ಟಕರ. ಇದು ಅಭಿವೃದ್ಧಿಗೆ ಅಡ್ಡಿಯಾಗಿ ಪರಿಣಮಿಸಿದೆ. ಕೇವಲ ಮಹದಾಯಿ ಸಮಸ್ಯೆ ಮಾತ್ರವಲ್ಲ, ಈ ಭಾಗದ ಹಲವು ಅಭಿವೃದ್ಧಿ ಸಮಸ್ಯೆಗಳು ಗಮನ ಸೆಳೆಯಲು ಪರದಾಡುತ್ತಿವೆ' ಎಂದು ಸೋಬರದಮಠ್ ಹೇಳಿದ್ದಾರೆ.
ಇದನ್ನೂ ಓದಿ-ಕಾಂಗ್ರೆಸ್ ಪಾದಯಾತ್ರೆ: ಮೊದಲ ದಿನವೇ ಸುಸ್ತಾಗಿ ಕಾರು ಹತ್ತಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.