ಬೆಂಗಳೂರು : ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ನಲ್ಲಿ ಬಣ ಬಡಿದಾಟ ದಿನೇ ದಿನೇ ಹೆಚ್ಚುತ್ತಿರುವುದು, ಹೈ ಕಮಾಂಡ್‌ಗೆ ರಾಜಸ್ಥಾನ ಕಾಂಗ್ರೆಸ್‌ ನಲ್ಲಿ ನಡೆದ ಪವರ್ ಪಾಲಿಟಿಕ್ಸ್ ನ ಕೆಟ್ಟ ಅದ್ಯಾಯ ರಾಜ್ಯದಲ್ಲೂ ಮಾರುಕಲಿಸತ್ತಾ ಎಂಬ ಆತಂಕ ಎದುರಾಗಿದೆ. ಹಾಗಾದರೆ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಆಗಿದ್ದು ಏನು? ರಾಜಸ್ಥಾನ ಬಣ ಬಣ ಬಡಿದಾಟ ಹಾಗೂ ಕರ್ನಾಟಕ ಬಣಗಳ ನಡುವೆ ಇರುವ ವೈಮನಸ್ಸು ಇರುವ ಸಾಮ್ಯತೆ ಏನು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್... 


COMMERCIAL BREAK
SCROLL TO CONTINUE READING

ರಾಜಸ್ಥಾನ ಕಾಂಗ್ರೆಸ್ ನಾಯಕರಾದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಉಂಟಾದ ರಾಜಕೀಯ ಉದ್ವಿಗ್ನತೆ ಪಕ್ಷದೊಳಗಿನ ಅಧಿಕಾರ ಸಂಘರ್ಷದಲ್ಲಿ ಬೆಳೆದಿದ್ದು, ಇದು ಹಲವು ಹಂತಗಳಲ್ಲಿ ಬೆಳೆಯಿತು. ಈ ಕಾರಣದಿಂದ ಕಾಂಗ್ರೆಸ್ ಚುನಾವಣೆಯಲ್ಲಿ ಎಡವಿತು. 


ಹಿನ್ನೆಲೆ


1. ಅಶೋಕ್ ಗೆಹ್ಲೋಟ್: ರಾಜಸ್ಥಾನದ ಅನುಭವಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ, ಹಲವು ಬಾರಿ ಮುಖ್ಯಮಂತ್ರಿ ಆಗಿರುವವರು. ರಾಜಕೀಯ ಚಾಣಾಕ್ಷತೆಯಿಂದ ಹೆಸರುವಾಸಿ.
2. ಸಚಿನ್ ಪೈಲಟ್: ಯುವ ನಾಯಕ, ರಾಜಸ್ಥಾನದಲ್ಲಿ ಕಾಂಗ್ರೆಸ್ ಪುನಃ ಬಲಿಷ್ಠವಾಗಲು ಪ್ರಮುಖ ಪಾತ್ರ ವಹಿಸಿರುವವರು. ಯುವಜನರ ಮೆಚ್ಚುಗೆ ಪಡೆದಿರುವ ಅವರು ಕಾಂಗ್ರೆಸ್‌ನ ಭವಿಷ್ಯದ ಮುಖವೆಂದು ಪರಿಗಣಿಸಲ್ಪಟ್ಟವರು.


ಸಾಮ್ಯತೆ 


1. ಸಿದ್ದರಾಮಯ್ಯ : ಹಿರಿಯ ರಾಜಕಾರಿಣಿ, ತಡವಾಗಿ ಕಾಂಗ್ರೆಸ್ ಗೆ ಬಂದರೂ ಎರಡು ಬಾರಿ ಸಿಎಂ ಆಗಿರುವ ನಾಯಕ. ಅಹಿಂದ ಸಮುದಾಯದ ಬ್ರಾಂಡ್ ಲೀಡರ್.
2. ಡಿಕೆ ಶಿವಕುಮಾರ್ : ಕರ್ನಾಟಕ ಕಾಂಗ್ರೆಸ್ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅತ್ಯಂತ ಕಡಿಮೆ ವಯಸ್ಸಿನ ನಾಯಕ. ಹಳೆ ಮೈಸೂರು ಬಾಗದಲ್ಲಿ ಕಾಂಗ್ರೆಸ್ ಬರಲು ಪ್ರಮುಖ ಪತ್ರ ವಹಿಸಿದ್ದರು. ಯುವ ನಾಯಕರ ತಂಡ ಪೋಶಿಸುತ್ತಿರುವವರು.


2018ರ ರಾಜಸ್ಥಾನ ವಿಧಾನಸಭಾ ಚುನಾವಣೆ:


ಅಶೋಕ್ ಗೆಲ್ಹೋಟ್ : 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿತು.ಗೆಹ್ಲೋಟ್ ಮತ್ತು ಪೈಲಟ್ ಇಬ್ಬರೂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಪ್ರಮುಖ ಅಭ್ಯರ್ಥಿಗಳಾಗಿದ್ದರು.ಅಶೋಕ್ ಗೆಹ್ಲೋಟ್ ಅವರನ್ನು ಅವರ ಹಿರಿಯತೆ ಮತ್ತು ಅನುಭವದ ಆಧಾರದ ಮೇಲೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.


ಸಚಿನ್ ಪೈಲಟ್:2013ರ ಚುನಾವಣಾ ಸೋಲಿನ ನಂತರ ಕಾಂಗ್ರೆಸ್ ಪುನರ್‌ಬಲಗೊಳಿಸಿದ್ದಕ್ಕಾಗಿ, ಉಪಮುಖ್ಯಮಂತ್ರಿ ಮತ್ತು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ (RPCC) ಅಧ್ಯಕ್ಷರನ್ನಾಗಿ ನೇಮಕಗೊಂಡರು.


ಸಾಮ್ಯತೆ 


2023 ಕರ್ನಾಟಕ ವಿಧಾನಸಭಾ ಚುನಾವಣೆ: 


ಸಿದ್ದರಾಮಯ್ಯ :2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಪಡೆದು ಅಧಿಕಾರ ಹಿಡಿದಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ನಾಯಕರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದರು. ಆದರೆ ಹೈ ಕಮಾಂಡ್ ಮದ್ಯ ಪ್ರವೇಶಿಸಿ ಕೆಲವರು ಹೇಳುವವರ ಪ್ರಕಾರ ಕಾಂಗ್ರೆಸ್ ಶಾಸಕಾಂಗ ಆಂತರಿಕ ಮತ ಚಲಾವನೆ ಆಗಿದ್ದ ಹಿನ್ನಲೆ ಸಿದ್ದರಾಮಯ್ಯ ಅವರನ್ನ ಸಿಎಂ ಎಂದು ಘೋಷಣೆ ಮಾಡಲಾಯಿತು. ಮತ್ತಷ್ಟು ಕಾಂಗ್ರೆಸ್ ನವರು ಹೇಳುವ ಪ್ರಕಾರ ಸಿದ್ದರಾಮಯ್ಯ ಅವರನ್ನು ಜಾತಿ, ಹಿರಿತನ ಹಾಗೂ ಮಾಸ್ ಲೀಡರ್ ಎಂಬ ಕಾರಣಕ್ಕೆ ಸಿಎಂ ಮಾಡಲಾಯಿತು.


ಡಿಕೆ ಶಿವಕುಮಾರ್ : 2018 ರ ಕಾಂಗ್ರೆಸ್ ಸೋಲಿನ ಬಳಿಕ 2020 ರಲ್ಲಿ ಡಿಕೆ ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಡಿಕೆ ಪಕ್ಷ ಸಂಘಟನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ಉಪಮುಖ್ಯಮಂತ್ರಿ ಮಾಡುವುದಕ್ಕೆ ಹೈ ಕಮಾಂಡ್ ಒಪ್ಪಿಗೆ ನೀಡಿತು.


ಸಂಘರ್ಷ


1. ಅಧಿಕಾರ ಸಂಘರ್ಷ : ಪೈಲಟ್ ತಮ್ಮನ್ನು ಸರಕಾರದಲ್ಲಿ ಕಡೆಗಣಿಸಲಾಗಿದೆ ಎಂದು ದೂರಿಸಿದರು. ಗೆಹ್ಲೋಟ್ ಎಲ್ಲಾ ನಿರ್ಣಯಗಳನ್ನು ತಮ್ಮ ಕೈಯಲ್ಲಿ ಕೇಂದ್ರೀಕರಿಸುತ್ತಿದ್ದಾರೆ ಎಂದು ಪೈಲಟ್ ಆರೋಪಿಸಿದರು. ಅಂದಿನ ಸಿಎಂ ಆಗಿದ್ದ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಅವರನ್ನು ಅತ್ಯಧಿಕ ಮಹತ್ವಾಕಾಂಕ್ಷಿಯಾಗಿದ್ದಾರೆ ಮತ್ತು ತಾಳ್ಮೆಯಿಲ್ಲದವರು ಎಂದು ಟೀಕಿಸಿದರು.


2. ಪೈಲಟ್ ವಿರುದ್ಧದ ಆರೋಪಗಳು : 2020ರಲ್ಲಿ, ಪೈಲಟ್ ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ಸರಕಾರವನ್ನು ಪತನಗೊಳಿಸಲು ಯತ್ನ ಮಾಡಿದ್ದರು ಎಂದು ಗೆಹ್ಲೋಟ್ ಆರೋಪಿಸಿದರು.ಪೈಲಟ್ ಈ ಆರೋಪಗಳನ್ನು ತಳ್ಳಿ ಹಾಕಿ, ತಮ್ಮ ಬೇಡಿಕೆಗಳಿಗೆ ಉತ್ತರ ಬೇಕು ಎಂದು ಅಗ್ರಹ ಪಡಿಸಿದರು.


2020ರ ರಾಜಕೀಯ ತೊಡಕು : ಜುಲೈ 2020, ಪೈಲಟ್ 18 ಶಾಸಕರೊಂದಿಗೆ ಹರಿಯಾಣದಲ್ಲಿ ರೆಸಾರ್ಟ್ ಪೊಲಿಟಿಕ್ಸ್ ನಡೆಸಿದರು, ಇದರಿಂದ ಸರಕಾರ ಪತನಗೊಳ್ಳುವ ಭೀತಿ ಎದುರಾಯಿತು. ಕಾಂಗ್ರೆಸ್ ಉನ್ನತ ನಾಯಕತ್ವ (ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ) ಮಧ್ಯಪ್ರವೇಶಿಸಿದ ನಂತರ ತಾತ್ಕಾಲಿಕ ಬ್ರೇಕ್ ಹಾಕಿದರು.ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಮತ್ತು RPCC ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಯಿತು. ಆದರೆ ಅವರು ಕಾಂಗ್ರೆಸ್ ತೊರೆಯಲಿಲ್ಲ.


2020 ನಂತರದ ಬೆಳವಣಿಗೆಗಳು


1. ಗೆಹ್ಲೋಟ್ ಅವರ ಟೀಕೆ


ಗೆಹ್ಲೋಟ್, ಪೈಲಟ್ ಅವರನ್ನು ಸಾರ್ವಜನಿಕವಾಗಿ "ದ್ರೋಹಿ" ಎಂದು ಕರೆದರು.


2. 2023ರಲ್ಲಿ ಪೈಲಟ್ ಅವರ ಪ್ರತಿಭಟನೆ


ಮೇ 2023ರಲ್ಲಿ, ಪೈಲಟ್, ಮಾಜಿ ಬಿಜೆಪಿ ಸರ್ಕಾರದ ಅವ್ಯವಹಾರಗಳ ವಿರುದ್ಧ ಹೋರಾಟ ಆರಂಭಿಸಿದರು.ಆಡಳಿತ ಸುಧಾರಣೆ ಮತ್ತು ರಾಜಸ್ಥಾನ ರಾಜಕಾರಣದಲ್ಲಿ ತಮ್ಮ ಪಾತ್ರವನ್ನು ಸ್ಪಷ್ಟಗೊಳಿಸುವಂತೆ ಬೇಡಿಕೆ ಇಟ್ಟರು.


3. ಹೈ ಕಮಾಂಡ್ ಮಧ್ಯಸ್ಥಿಕೆ:


2023ರ ವಿಧಾನಸಭಾ ಚುನಾವಣೆಗೆ ಮುನ್ನ, ಕಾಂಗ್ರೆಸ್ ನಾಯಕತ್ವ, ಉಭಯ ನಾಯಕರ ನಡುವೆ ಸಮರವನ್ನು ತಣಿಸಲು ಕ್ರಮ ಕೈಗೊಂಡಿತು.ಗೆಹ್ಲೋಟ್ ಮತ್ತು ಪೈಲಟ್, ತಾತ್ಕಾಲಿಕ ಶಾಂತಿ ತೋರಿಸಲು ಒಂದೇ ವೇದಿಕೆಯಲ್ಲಿ ಹಾಜರಾದರು.


ಕೈ ಹಿಡಿಯಲಿಲ್ಲ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ : ತಳಮಟ್ಟದ ಯುವ ಕಾರ್ಯಕರ್ತರ ಆತ್ಮೀಯರಾಗಿದ್ದ ಸಚಿನ್ ಪೈಲಟ್ ಅವರನ್ನ ಸಿಎಂ ಪದವಿ ನೀಡದೆ ಇರುವ ಕಾರಣ ಸಂಘಟನೆ ಕುಂಟಿತವಾಯಿತು. ಹಾಗೂ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿ ಆಯ್ತು. 


ಕರ್ನಾಟಕದಲ್ಲಿ ಇನ್ನು ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ, ಬಣ ರಾಜಕೀಯ ಇನ್ನು ತೀವ್ರ ಸ್ವರೂಪ ಪಡೆದಿಲ್ಲ. ಬೂದಿ ಮುಚ್ಚಿದ ಕೆಂಡದಂತೆ ಇರುವ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಡಿಕೆ ಶಿವಕುಮಾರ್ ಬಣ, ಆಂತರಿಕ ಮಟ್ಟದಲ್ಲಿ ಅಧಿಕಾರ ಉಳಿಸುಕೊಳ್ಳುವುದಕ್ಕೆ ಹಾಗೂ ಪಡೆಯುವುದಕ್ಕೆ ರಾಜಕೀಯ ಪ್ರಯತ್ನ ನಡೆಸುತ್ತಿದ್ದಾರೆ. ಅಧಿಕಾರ ಹಂಚಿಕೆಯ ಒಪ್ಪಂದ ಬಗ್ಗೆ ಹೇಳಿಕೆ ಕೊಟ್ಟು ಸುಮ್ಮನಾಗಿರುವ ಡಿಕೆ ಶಿವಕುಮಾರ್ ಡೆಲ್ಲಿ ಪ್ರವಾಸ ಹೈ ಕಮಾಂಡ್ ನಾಯಕರ ಭೇಟಿ ನಡೆಸುತ್ತಿದ್ದಾರೆ. 


ಇನ್ನು ಸಿಎಂ ಸಿದ್ದರಾಮಯ್ಯ ಬಣ ಈ ಅವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎನ್ನುತ್ತಿದ್ದಾರೆ. ಬಣ ಬಡಿದಾಟ ಅಧಿಕಾರ ಹಿಡಿಯುವ -ಉಳಿಸಿಕೊಳ್ಳುವ ಪ್ರಯತ್ನ ನಡುವೆ ಆಡಳಿತ ವ್ಯವಸ್ಥೆ ಕುಸಿಬಾರದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.