ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ  ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.


COMMERCIAL BREAK
SCROLL TO CONTINUE READING

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದ ಇಂದಿರಾ ಗಾಂಧಿ ಭವನದಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.


ಇದನ್ನೂ ಓದಿ: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎಂ.ಬಿ.ಪಾಟೀಲ್ ಹೇಳಿದ್ದೇನು?


ಸಮಾರಂಭದಲ್ಲಿ ಅಪಸ್ವರ


ಕಾರ್ಯಕ್ರಮದ ಆರಂಭದಲ್ಲಿಯೇ ಅಪಸ್ವರ ಎದ್ದು ಕಂಡಿತು. ಡಿಸಿಎಂ ಡಿಕೆಶಿಯವರು ಸಚಿವ ಎಂ.ಬಿ.ಪಾಟೀಲ್‍ಗೆ ಡೋಂಟ್ ಡಿಸ್ಟರ್ಬ್ ಎಂದು ಗದರಿಸಿದ ಸನ್ನಿವೇಶ ಕಂಡುಬಂತು. ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಜೊತೆ ಮಾತಾಡುತ್ತಿದ್ದ ಎಂ.ಬಿ.ಪಾಟೀಲ್‍ಗೆ ಡಿಕೆಶಿ ಗದರಿಸಿದರು. ಅದಕ್ಕೆ ಸಮಜಾಯಿಷಿ ನೀಡಲು ಮುಂದಾದ ಎಂಬಿಪಿ ಇಲ್ಲಿ ಕೆಲವು ಹೊಸ ವಿಚಾರ ಹೇಳುತ್ತಿದ್ದೇನೆ ಎಂದರು. ಬಳಿಕ ಡಿಕೆಶಿಯಿಂದ ಮುಜುಗರಕ್ಕೆ ಒಳಗಾಗಿ ಎಂಬಿಪಿ ಸುಮ್ಮನೆ ಕುಳಿತುಕೊಳ್ಳಬೇಕಾಯಿತು.


ಸಮಾರಂಭದಲ್ಲಿ ಮಾತನಾಡಿದ ಡಿಕೆಶಿ, ‘ನಾನು ಬಂಗಾರಪ್ಪನವರ ಶಿಷ್ಯ, ಎಸ್.ಎಂ.ಕೃಷ್ಣರ ಶಿಷ್ಯ ಅಲ್ಲಾ. ನಾನು ಬಂಗರಪ್ಪನವರ ಜೊತೆ ರಾಜಕಾರಣ ಶುರು ಮಾಡಿದವನು. ಎಲ್ಲರೂ ವೀರೇಂದ್ರ ಪಾಟೀಲ್‍ರನ್ನು ಇಳಿಸಿದರು ಹಾಗೆ ಹೀಗೆ ಅಂತಾರೆ, ಆದರೆ ಅವತ್ತು ಅವರ ಆರೋಗ್ಯ ಸ್ಥಿತಿ ಹಾಗಿತ್ತು ಆದ್ದರಿಂದ ತೀರ್ಮಾನ ಕೈಗೊಂಡರು. ಅವತ್ತು ವೀರೇಂದ್ರ ಪಾಟೀಲ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ದೆವು. ಗೆದ್ದಾಗ ಅವರೇ ಮುಖ್ಯಮಂತ್ರಿ ಆಗಿದ್ದರು ಎಂದು ವೀರೇಂದ್ರ ಪಾಟೀಲ್‌ ಅವರನ್ನು ಸಿಎಂ ಸ್ಥಾನದಿಂದ ಯಾಕೆ ಇಳಿಸಲಾಯ್ತು ಮತ್ತು ರಾಜೀವ್ ಗಾಂಧಿ ಅವರು ಯಾಕೆ ತೀರ್ಮಾನ ಕೈಗೊಂಡರು ಎಂಬ ಘಟನೆ ಬಗ್ಗೆ ವಿವರಿಸಿದರು.


ಇದನ್ನೂ ಓದಿ: ಪ್ರಮಾಣ ವಚನದ ದಿನವೇ ಪಂಚ ಗ್ಯಾರಂಟಿಗಳಿಗೆ ಸಿಎಂ ಸಿದ್ದು ನೇತೃತ್ವದ ಸಂಪುಟ ಅಸ್ತು


ಮಲ್ಲಿಕಾರ್ಜುನ್ ಖರ್ಗೆಯವರ ತ್ಯಾಗ!


ಮಲ್ಲಿಕಾರ್ಜುನ್ ಖರ್ಗೆ ಅವರ ನಾಯಕತ್ವದ ಬಗ್ಗೆ ನಾವು ಮಾತನಾಡೋಕ್ಕಾಗಲ್ಲ. ನಮ್ಮ ಇಬ್ಬರಿಗೂ ಏನು ಹೇಳಬೇಕೋ ಅದನ್ನು ಹೈಕಮಾಂಡ್ ನಾಯಕರು ಹೇಳಿದ್ದಾರೆ. ಅದಕ್ಕೆ ನಾವು ಬದ್ದರಾಗಿರುತ್ತೇವೆ. ಅಧಿಕಾರಕ್ಕಾಗಿ ಯಾರು ಯಾರನ್ನು ಭೇಟಿ ಮಾಡಿ ಲಾಬಿ ನಡೆಸಬಾರದು. ಕಾಂಗ್ರೆಸ್‌ ಕಾರ್ಯಕರ್ತರು ಲಿಡರ್‍ಶೀಪ್ ಬೇಕು. ಆ ಲಿಡರ್‍ಶೀಪ್ ಇಲ್ಲಿ ತೊರಿಸುವುದು ಅಲ್ಲಾ, ಲೋಕಲ್‍ನಲ್ಲಿ ತೋರಿಸಬೇಕು. ಸಿದ್ದರಾಮಯ್ಯರ ಭೇಟಿ ಮಾಡುವುದು ಅಲ್ಲಿಂದ ಸಿದ್ದರಾಮಯ್ಯ ಅವರು ಹಿಂಗ್ ಅಂದ್ರು… ಅಲ್ಲಿಂದ ಎಂ.ಬಿ.ಪಾಟೀಲ್ ಹಾಗೆ ಅಂದ್ರು… ನನ್ನ ಮುಂದೆ ಬಂದು ಅವರು ಈ ರೀತಿ ಹೇಳಿದ್ರು ಎಂದು ಚಾಡಿ ಹೇಳಬೇಡಿ. ನಾನು ಯಾರ್ ಮಾತು ಕೇಳುವುದಿಲ್ಲ. ನನಗೆ ಮಂತ್ರಿಯಾಗಿ 30 ವರ್ಷ ಅನುಭವ ಇದೆ. ನನ್ನ‌ದೇ ಆದ ವಿಚಾರಗಳಲ್ಲಿ ನಾನು ತೀರ್ಮಾಣ ಮಾಡುತ್ತೇನೆ. ಮೊದಲು ಬೂತ್ ಮಟ್ಟದಲ್ಲಿ ಬಲಿಷ್ಟರಾಗಬೇಕು. ಸಿದ್ದರಾಮಯ್ಯರ ಮನೆ ಮತ್ತು ನನ್ನಮನೆ ಸುತ್ತುತ್ತಾ ಇರಬೇಡಿ. ನಿಮ್ಮ ಗುರಿ ಮುಂದಿನ ಚುನಾವಣೆಗೆ ನಿಮ್ಮ‌ ಬೂತ್  ಸಿದ್ಧಪಡಿಸಿ. ಪಾರ್ಲಿಮೆಂಟ್‍ಗೂ ಅಸೆಂಬ್ಲಿಗೂ ವ್ಯತ್ಯಾಸ ಇರುತ್ತದೆ. ಚುನಾವಣೆಯಲ್ಲಿ ತಿಳಿದುಕೊಳ್ಳಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.