ಬೆಂಗಳೂರು: ದೇಶದಲ್ಲಿ ರಾಜ್ಯಸಭೆ ಚುನಾವಣಾ ಕಾವು ಹೆಚ್ಚಾಗಿದೆ. 15 ರಾಜ್ಯಗಳ ಒಟ್ಟು 57 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಈ ಪೈಕಿ 11 ರಾಜ್ಯಗಳ ಒಟ್ಟು 41 ರಾಜ್ಯಸಭೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ಇಂದು(ಜೂನ್ 10) ಚುನಾವಣೆ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಹರ್ಯಾಣದ 16 ಸದಸ್ಯರ ಆಯ್ಕೆಗೆ ಇದೀಗ ತೀವ್ರ ಪೈಪೋಟಿ ಶುರುವಾಗಿದೆ. ಈ 4 ರಾಜ್ಯಗಳಲ್ಲಿ ಯಾರಿಗೆ ಅಧಿಕಾರದ ಗದ್ದುಗೆ ಒಲಿಯಲಿದೆ? ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳು ರಣತಂತ್ರ ರೂಪಿಸಿ ಚುನಾವಣೆಯನ್ನು ಎದುರಿಸುತ್ತಿವೆ.  


ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಇದರ ಜೊತೆಗೆ ಸ್ವತಂತ್ರ್ಯ ಅಭ್ಯರ್ಥಿಗಳು ಮತ್ತು ಪ್ರಾದೇಶಿಕ ಪಕ್ಷಗಳ ಸದಸ್ಯರ ಮತಗಳು ಫಲಿತಾಂಶ ನಿರ್ಧರಿಸಲಿವೆ. ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಗಾಳ ಹಾಕಲಾಗುತ್ತಿದೆ. ಇಂದು ಸಂಜೆಯೇ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.


ಇದನ್ನೂ ಓದಿ: ಜೂನ್ 20 ಹಾಗೂ 21 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಎರಡು ದಿನಗಳ ಪ್ರವಾಸ


ಜೆಡಿಎಸ್ ಶಾಸಕರಿಂದ ಅಡ್ಡ ಮತದಾನ


ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್‍ಗೆ ಮತ ಚಲಾಯಿಸುವ ಮೂಲಕ ಅಡ್ಡ ಮತದಾನ ಮಾಡಿದ್ದಾರೆ. ಅಡ್ಡ ಮತದಾನ ಮಾಡಿದ ಶ್ರೀನಿವಾಸ್ ಗೌಡ ನೇರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಠಡಿಗೆ ಆಗಮಿಸಿದರು.


ನಾನು ಜೆಡಿಎಸ್‍ಗೆ ಮತ ಹಾಕುತ್ತೇನೆಂದ ಶಿವಲಿಂಗೇಗೌಡ


ಈಗ ನಾನು ಜೆಡಿಎಸ್‍ಗೆ ಮತ ಹಾಕುತ್ತೇನೆ, ಮುಂದಿನದನ್ನು ನಮ್ಮ ಜನರು ನಿರ್ಧರಿಸುತ್ತಾರೆಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ನನ್ನನ್ನು ಮೂರು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ, ಹೀಗಾಗಿ ನಾನು ಜೆಡಿಎಸ್‍ಗೆ ಮತ ಹಾಕ್ತೇನೆ. ಜನ ಏನು ಹೇಳಿದ್ದಾರೋ ಅದನ್ನು ಮುಂದೆ ಮಾಡ್ತೇನೆ. ಅರಸೀಕೆರೆ ಮತದಾರರು ಮುಂದಿನದನ್ನು ನಿರ್ಣಯ ಮಾಡ್ತಾರೆ. ದೊಡ್ಡವರು ಮತ್ತು ಕುಮಾರಣ್ಣ ಇಬ್ಬರೂ‌ ಮಾತನಾಡಿದ್ದಾರೆ ಅಂತಾ ಶಿವಲಿಂಗೇಗೌಡ ಹೇಳಿದ್ದಾರೆ.


2 ಮತಗಳನ್ನು ಉಳಿಸಿಕೊಂಡಿರುವ ಬಿಜೆಪಿ


ಬಿಜೆಪಿಯಿಂದ ಎರಡು ಮತಗಳನ್ನು ಉಳಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮತಗಳನ್ನು ನೋಡಿಕೊಂಡು ಮತ ಚಲಾವಣೆ ಮಾಡಲು ಬಿಜೆಪಿ ಈ 2 ಮತಗಳನ್ನು ಉಳಿಸಿಕೊಂಡಿದೆ. ಬಿಜೆಪಿಯ ಬಹುತೇಕ ಎಲ್ಲಾ ಶಾಸಕರಿಂದ ಮತ ಚಲಾವಣೆಯಾಗಿದೆ. ಸಂಜೆ 4 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಜೆಡಿಎಸ್‌ಗೆ ಕಾಂಗ್ರೆಸ್ 2ನೇ ಪ್ರಾಶಸ್ತ್ಯ ಮತ ಹಾಕ್ತಾರಾ ಅಥವಾ ಇಲ್ಲವಾ ಅನ್ನೋದನ್ನು ನೋಡಿಕೊಂಡು ಉಳಿದ ಮತ ಚಲಾವಣೆ ಮಾಡಲು ಬಿಜೆಪಿ ನಿರ್ಧರಿಸಿದೆ. ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಶಾಸಕರು 2ನೇ ಅಭ್ಯರ್ಥಿಗೆ ಮತ ಹಾಕದಿದ್ರೆ, ನಿರ್ಮಲಾ ಸೀತಾರಾಮನ್‌ಗೆ 45 ಮತ ಹಾಕಿದ್ದು, +1 = 46 ಮತಗಳು ಆಗಲಿವೆ. ಜಗ್ಗೇಶ್‌ಗೆ 44 ಮತ ಹಾಕಿದ್ದು, 2ನೇ ಹಂತದಲ್ಲಿ ಗೆಲ್ಲಲಿದ್ದಾರೆ. ಮತ್ತೊಂದು ಹೆಚ್ಚುವರಿ ಮತವನ್ನು ಲೆಹರ್ ಸಿಂಗ್‍ಗೆ ಹಾಕಲು ನಿರ್ಧರಿಸಲಾಗಿದೆ.  32+1= 33 ಮತ ಹಾಕಿ ಮೊದಲ ಪ್ರಾಶಸ್ತ್ಯ ಹೆಚ್ಚು ಮತದಾನದಡಿ ಲೆಹರ್ ಸಿಂಗ್ ಗೆಲ್ಲಿಸುವುದು ಬಿಜೆಪಿ ಪ್ಲಾನ್ ಮಾಡಿತ್ತು.


ಇದನ್ನೂ ಓದಿ: Chaddi Campaign: ಚಡ್ಡಿ ಸುಟ್ಟು ಶಾಸಕ ಪಿ.ರಾಜೀವ್ ಮನೆಮುಂದೆ ಬೂದಿ ಇಟ್ಟರು!


ಬಿಜೆಪಿಯ 3 ಅಭ್ಯರ್ಥಿಗಳ ಗೆಲುವುದು ಸ್ಪಷ್ಟ   


ಜೆಡಿಎಸ್ ಶಾಸಕರ ಅಡ್ಡ ಮತದಾನದಿಂದ ಬಿಜೆಪಿ ಅಭ್ಯರ್ಥಿ ಗೆಲುವಿಗೆ ದಾರಿ ಸುಗಮವಾಗಿದೆ. ನಿರ್ಮಲಾ ಸೀತಾರಾಮನ್‍ಗೆ 46 ಮತಗಳು, ಜಗ್ಗೇಶ್‍ಗೆ 44 ಮತಗಳು ಚಲಾವಣೆಯಾಗಿವೆ. ನಿರ್ಮಲಾ ಸೀತಾರಾಮನ್‍ಗೆ ನೀಡಿರುವ 1 ಹೆಚ್ಚುವರಿ ಮತ ಜೆಗ್ಗೇಶ್‍ಗೆ ವರ್ಗಾವಣೆ ಆಗಲಿದೆ. ಜಗ್ಗೇಶ್‍ಗೆ 44+1: 45 ಮತಗಳು ಬಂದಿವೆ. ಲೆಹರ್ ಸಿಂಗ್‍ಗೆ 33 ಮತಗಳು ಬಂದಿದ್ದು, 2ನೇ ಪ್ರಾಶಸ್ತ್ಯದ ಮತಗಳು ಚಲಾವಣೆಯಾಗಿ ಒಟ್ಟು 33.81ಮತಗಳು ಬಿದ್ದಿವೆ ಎನ್ನಲಾಗಿದೆ. ಹಿಗಾಗಿ ಬಿಜೆಪಿಯ ಮೂರು ಅಭ್ಯರ್ಥಿ ಗಳು ಗೆಲ್ಲುವುದು ಸ್ಪಷ್ಟವಾಗಿದೆ.    


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.