Jaggesh : `ಲಾಂಛನ ತಿರುಚಿದ್ದಾರೆ ಎಂಬ ಆರೋಪ : ಅಲ್ಲಿ ಘರ್ಜಿಸುತ್ತಿರುವ ಆ ಸಿಂಹವೆ ಮೋದಿ`
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ರಾಷ್ಟ್ರೀಯ ಲಾಂಛನ ತಿರುಚಿದ್ದಾರೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಗ್ಗೇಶ್
ತುಮಕೂರು : ಗುರುಪೂರ್ಣಿಮೆಯಂದು ಗುರುಗಳ ದರ್ಶನ ಪಡೆದಿದ್ದೇನೆ. ಮನಸ್ಸಿಗೆ ಖುಷಿ ಅನಿಸಿದೆ..ಶ್ರೀಗಳ ಆಶೀರ್ವಾದ ನನ್ನ ಮೇಲೆ ಸದಾ ಇದೆ ಎಂದು ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಹೇಳಿದ್ದಾರೆ.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ರಾಷ್ಟ್ರೀಯ ಲಾಂಛನ ತಿರುಚಿದ್ದಾರೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಗ್ಗೇಶ್, ಆರೋಪಗಳು ಶಿವ, ಭ್ರಹ್ಮ ಕೃಷ್ಣನನ್ನೇ ಬಿಟ್ಟಿಲ್ಲ. ಸಮಂತಕ ಮಣಿ ವಿಚಾರದಲ್ಲಿ ಕೃಷ್ಣನನ್ನೇ ಕಳ್ಳ ಅಂದರು. ಅಂತರದಲ್ಲಿ ಮೋದಿಯನ್ನು ಬಿಡ್ತಾರಾ. ಈ ರಾಷ್ಟ್ರದ ಜನ ಎದ್ದೆಯುಬ್ಬಿಸಿ ಹೇಳಬೇಕಾದದ್ದು ಒಳ್ಳೆಯ ಧೀಮಂತ ನಾಯಕ ಸಿಕ್ಕಿದ್ದಾನೆ. ಅಲ್ಲಿ ಘರ್ಜಿಸುತ್ತಿರುವ ಆ ಸಿಂಹವೆ ಮೋದಿ.
ಇದನ್ನೂ ಓದಿ : Karnataka Heavy Rain : ಜುಲೈ 17 ರವರೆಗೂ ರಾಜ್ಯಾದ್ಯಂತ ಭಾರಿ ಮಳೆ : ಹವಾಮಾನ ಇಲಾಖೆ
ಅಶೋಕ ಲಾಂಛನದ ಮೂಲ ಇವರುಗಳು ಮ್ಯೂಸಿಯಂನಲ್ಲಿ ನೋಡಲಿ. ಮ್ಯೂಸಿಯಂನಲ್ಲಿ ಇರುವ ಹಾಗೆ ಯಥಾವತ್ ಸಿಂಹ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ. ಇಷ್ಟು ವರ್ಷ ಲಾಂಛನದ ಬಾಯಿ ಮುಚ್ಚಿತ್ತು.. ಈಗ ಬಹಳ ಸ್ವಾಭಿಮಾನದಿಂದ ಬಾಯಿ ತೆರೆದಿದೆ. ಮತ್ತೆ ಘರ್ಜನೆ ಮಾಡುತ್ತಿದೆ. ಸುಖಾಸುಮ್ಮನೆ ಮೋದಿ ವಿರುದ್ದ ಮಾತಾಡುತ್ತಾರೆ. ಆರಾಧಿಸುವವರ ಸಂಖ್ಯೆ ಶೇ.98 ರಷ್ಟಿದೆ. ವಿರೋಧಿಸುವವರ ಸಂಖ್ಯೆ ಶೇ.2 ರಷ್ಟಿದೆ. ಅದಕ್ಕೆ ಏನೂ ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ