Ramalinga Reddy: ಮಳೆ ಬಂದರೆ ಸಾಕು ಸಿಲಿಕಾನ್‌ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜಲಪ್ರವಾಹ ಉಂಟಾಗುತ್ತದೆ. ಭಾರೀ ಮಳೆಯಿಂದ ಕೆಲವು ಪ್ರದೇಶಗಳು ಕೆರೆಯಂತಾಗುತ್ತವೆ. ಇದರಿಂದ ಆ ಪ್ರದೇಶದ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಬೆಂಗಳೂರಿನ ಹಲವೆಡೆ ಮಳೆ ಬಂದಾಗ ಆಗುತ್ತಿದ್ದ ಆನಾಹುತಗಳನ್ನು ಕಂಡ ಒಬ್ಬ ಸೋಷಿಯಲ್‌ ಮೀಡಿಯಾ ಮಾಡಿರುವ ಟ್ಟೀಟ್ ಈಗ ಎಲ್ಲರ ಗಮನ ಸೆಳೆದಿದೆ. ಕೋರಮಂಗಲದಲ್ಲಿ ಮಳೆಯಿಂದ ಹೇಗೆ ಅನಾಹುತವಾಗುತ್ತದೆ ಮತ್ತು ಇದಕ್ಕೆ ಪರಿಹಾರ ಕ್ರಮಗಳೇನು ಅನ್ನೋದರ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಕೋರಮಂಗಲ, ST BED, ಈಜಿಪುರ, ರಾಜೇಂದ್ರ ನಗರ, National Games Village ಮತ್ತು ವೆಂಕಟೇಶ್ವರ ಬಡಾವಣೆ ಮಡಿವಾಳ ಪ್ರದೇಶಗಳಲ್ಲಿ ಮಳೆ ಬಂತೆಂದರೆ ಅಕ್ಷರಶಃ ನರಕಸದೃಶ ದೃಶ್ಯ ಕಾಣಸಿಗುತ್ತಿತ್ತು. ಆದರೆ ಕಳೆದ 20 ವರ್ಷಗಳ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ರೀತಿ ಇತರರಿಗೆ ಮಾದರಿಯಾಗಿದೆ. ಒಬ್ಬ ಜನಪ್ರತಿನಿಧಿ ಯಾವ ರೀತಿ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಜಲ್ವಂತ ಉದಾಹರಣೆ ಸಚಿವ ಡಾ. ರಾಮಲಿಂಗಾ ರೆಡ್ಡಿ ಅವರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಟಿಎಂ ವಿಧಾನಸಭಾ ಕ್ಷೇತ್ರ. ಜನರಿಗೆ ಬಹುಮುಖ್ಯವಾಗಿ ಬೇಕಾಗಿರುವುದು ವಸತಿ ಸೌಲಭ್ಯ, ಸುಸಜ್ಜಿತ ರಸ್ತೆ, ಗುಣಮಟ್ಟದ ಶಿಕ್ಷಣ ಇವೆಲ್ಲವುಗಳು ಒಂದೇ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಜನರಿಗೆ ಸಿಗುವಂತೆ ಮಾಡಿರುವ ಹೆಗ್ಗಳಿಕೆ ರಾಮಲಿಂಗಾರೆಡ್ಡಿ ಅವರದ್ದು. ಇಂದಿನ ಜನ ಯಾರೋಬ್ಬರನ್ನು ಸತತವಾಗಿ 8 ಬಾರಿ ಆಯ್ಕೆ ಮಾಡುವುದು ಕಷ್ಟ, ಆಯ್ಕೆ ಮಾಡಿದ್ದಾರೆ ಅಂದರೆ ಅದಕ್ಕೆ ಉತ್ತರ ಒಂದೇ ಕ್ಷೇತ್ರದ ಅಭಿವೃದ್ಧಿ.


ಮರಕುಂಬಿ ದಲಿತ ದೌರ್ಜನ್ಯ ಪ್ರಕರಣದಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆ! ದಶಕಗಳ ಹಿಂದೆ ನಡೆದ ಆ ಕರಾಳ ಘಟನೆಯ ವಿವರ ಇಲ್ಲಿದೆ


2015ರ ಕೋರಮಂಗಲದ ಚಿತ್ರಣ ಎಲ್ಲರ ಕಣ್ಣಮುಂದೆ ಬಂದು ನಿಲ್ಲುತ್ತದೆ. ಮಳೆಯಿಂದ ಸಂಪೂರ್ಣ ಜಲಾವೃತಗೊಂಡ ಲೇಔಟ್‌ಗಳು, ನೀರು ತುಂಬಿದ ರಸ್ತೆಗಳು, ಮನೆಗಳು, ಜನರು ಮನೆಯಿಂದ ಹೊರಗೆ ಬರಲಾಗದೆ, ನೀರು-ಊಟಕ್ಕೆ ಪರದಾಡುವ ಪರಿಸ್ಥಿತಿ... ಯಾರೊಬ್ಬರೂ ಇದನ್ನು ಮರೆತಿರಲಾರರು.ಇಂತಹ ಅವಸ್ಥೆಗಳಿಗೆಲ್ಲಾ ಕಾರಣ ಕೆಟ್ಟ ಅವೈಜ್ಞಾನಿಕ ನಗರ ಯೋಜನೆ (Town Planning), ಕೆರೆಗಳ ಆಕ್ರಮಣ, ಎಲ್ಲೆಂದರಲ್ಲಿ ಮನೆ‌ ನಿರ್ಮಾಣ, ವ್ಯವಸ್ಥಿತವಲ್ಲದ ಚರಂಡಿ ಯೋಜನೆಗಳು. ಇವೆಲ್ಲವುಗಳ ಹೊರತಾಗಿಯೂ ಹೇಗೆ ಇಂತಹ ಪರಿಸ್ಥಿತಿಗೆ ಪರಿಹಾರ ಹುಡುಕಬಹುದು ಎಂಬುದು ಕೋರಮಂಗಲದ ಇವತ್ತಿನ ಚಿತ್ರಣ ನೋಡಿದರೆ‌ ತಿಳಿಯುತ್ತದೆ.


ಹಿಂದೆದೂ ಕಂಡರಿಯದ ಮಹಾಮಳೆ 2024ರಲ್ಲಿ ಬೆಂಗಳೂರಿನಲ್ಲಿ ದಾಖಲಾಗಿದೆ. ಹಲವಾರು ಲೇಔಟ್‌ಗಳು ಭಾರೀ ಮಳೆಯಿಂದ ಮುಳುಗಿವೆ. ಈ ಪ್ರದೇಶದಲ್ಲಿ ಜನರು‌ ಪರದಾಡುವ ದೃಶ್ಯ ನೋಡಲಾಗುತ್ತಿಲ್ಲ. ಅದಾಗ್ಯೂ ಸಹ ಕೋರಮಂಗಲದಲ್ಲಿ ಆ ರೀತಿಯ ಯಾವುದೇ ಚಿತ್ರಣ ಕಾಣಸಿಗದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿ ಯೋಜನೆಗಳು.


ಇದನ್ನೂ ಓದಿ: ಲೋಕಾಯುಕ್ತ ಪೋಲಿಸರಿಂದ ಸಿಎಂ ಪತ್ನಿ ವಿಚಾರಣೆ


ಹೌದು, ನಿರಂತರವಾಗಿ ಸ್ಥಳೀಯ Resident Welfare Associationsಗಳ ಜೊತೆ ಸಂವಹನ, ಸಂಪರ್ಕ ಸಾಧಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ತೀವ್ರ ಗಮನಹರಿಸುವಿಕೆ. ವೈಜ್ಞಾನಿಕವಾಗಿ ಚರಂಡಿ ವ್ಯವಸ್ಥೆಗಳಿಗೆ ಕ್ರಮ, ಪ್ರತಿಯೊಂದು ವಾರ್ಡ್‌ಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ವೈಯಕ್ತಿಕ ಕಾಳಜಿ ನೀಡುವಿಕೆ ಕಾರಣವೆಂದು RWA, ವಾರ್ಡ್ ಅಧ್ಯಕ್ಷರು, ಸದಸ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಹಲವಾರು ವರುಷಗಳ ಸಮಸ್ಯೆಗೆ ಪರಿಹಾರ ನೀಡಿರುವ ಸಚಿವರಿಗೆ RWA ಧನ್ಯವಾದಗಳನ್ನು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.