ಬೆಂಗಳೂರು: ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಪರ ವಕೀಲ ಜಗದೀಶ್‌ ಕುಮಾರ್‌ ವಿರುದ್ಧ ಈ ಹಿಂದೆ 17 ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿದ್ದಲ್ಲದೆ, ಕೊಡಿಗೇಹಳ್ಳಿ ಠಾಣೆಯ ರೌಡಿ ಪಟ್ಟಿಯಲ್ಲಿ ಈ ಹಿಂದೆ ಅವರ ಹೆಸರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ವಕೀಲ ಜಗದೀಶ್‌ ಕುಮಾರ್(KN Jagadish Kumar)‌ ವಿರುದ್ಧ ಕೊಡಿಗೇಹಳ್ಳಿ ಠಾಣೆಯಲ್ಲಿ 11, ಯಲಹಂಕ, ವಿದ್ಯಾರಣ್ಯಪುರ, ಹೆಬ್ಬಾಳ, ಸಂಜಯನಗರ, ನವೀಮುಂಬೈನ ನೆರೂಲ್‌ ಠಾಣೆ ಸೇರಿದಂತೆ ಒಟ್ಟು 17 ಕೇಸ್‌ಗಳು ದಾಖಲಾಗಿದ್ದವು. 2002ರಿಂದ 2015ರ ನಡುವೆ ಈ ಕೇಸ್‌ಗಳು ದಾಖಲಾಗಿವೆ. ಕೌಟುಂಬಿಕ ದೌರ್ಜನ್ಯ, ಹಲ್ಲೆ, ಐಟಿ ಕಾಯಿದೆ, ಅಪರಾಧಕ್ಕೆ ಪ್ರಚೋದನೆ, ಬಲವಂತವಾಗಿ ಕೂಡಿಡುವುದು, ಬಲವಂತವಾಗಿ ಹಲ್ಲೆ, ವಂಚನೆ, ಕೊಲೆ ಯತ್ನ, ಶಾಂತಿ ಭಂಗಕ್ಕೆ ಯತ್ನ ಮುಂತಾದ ಕಲಂಗಳಡಿ ಕೇಸ್‌ ದಾಖಲಾಗಿದ್ದವು.


Corona Vaccination: 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ, ನಾಡಿನ ಜನತೆಗೆ ಸಿಎಂ ಮನವಿ


12 ಕೇಸ್‌ ಖುಲಾಸೆ, ಒಂದರಲ್ಲಿ ರಾಜಿ, ಮತ್ತೊಂದಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಉಳಿದ ಮೂರರಲ್ಲಿ 'ಬಿ' ರಿಪೋರ್ಟ್(B Report)‌ ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ.


'ಏಪ್ರಿಲ್ ಫೂಲ್ ಬಿಡಿ ಏಪ್ರಿಲ್ ಕೂಲ್ ಮಾಡಿ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.