Rameshwara cafeಯಲ್ಲಿ ಸ್ಪೋಟಕ್ಕೂ ಮುನ್ನ ಖತರ್ನಾಕ್ ಐಡಿಯಾ ಮಾಡಿದ್ದ ಆರೋಪಿ!ಸುಳಿವು ಸಿಗದಂತೆ ಭಾರೀ ತಯಾರಿ ನಡೆಸಿದ್ದ ಬಾಂಬರ್
Rameshwara cafe blast update : ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟಕ್ಕೂ ಮುನ್ನ ಆರೋಪಿ ಖತರ್ನಾಕ್ ಐಡಿಯಾ ಮಾಡಿದ್ದ ಎನ್ನಲಾಗಿದೆ. ತನ್ನ ಸುಳಿವು ಸಿಗದಂತೆ ಮಾಡಲು ಭಾರೀ ತಯಾರಿ ನಡೆಸಿದ್ದ ಈ ಬಾಂಬರ್.
Rameshwara cafe blast : ಬೆಂಗಳೂರು : ರಾಮೇಶ್ವರ ಕೆಫೆಯಲ್ಲಿ ಸ್ಪೋಟ ಸಂಭವಿಸಿದ ಬಳಿಕ ಆರೋಪಿಯ ಪತ್ತೆಗೆ ಪೋಲೀಸ್ ಇಲಾಖೆ ಹಗಲೂ ಇರುಳು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಎಲ್ಲಾ ಕಡೆಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದೆ. ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿಯ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಗುರುತಿಸಿದ್ದಾರೆ. ಈತನ ಪತ್ತೆಗೆ ಜಾಲವನ್ನು ಕೂಡಾ ಹೆಣೆದಿದ್ದಾರೆ.
ಆರೋಪಿಯ ಖತರ್ನಾಕ್ ಪ್ಲಾನ್ :
ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟಕ್ಕೂ ಮುನ್ನ ಆರೋಪಿ ಖತರ್ನಾಕ್ ಐಡಿಯಾ ಮಾಡಿದ್ದ ಎನ್ನಲಾಗಿದೆ. ತನ್ನ ಸುಳಿವು ಸಿಗದಂತೆ ಮಾಡಲು ಭಾರೀ ತಯಾರಿ ನಡೆಸಿದ್ದ ಈ ಬಾಂಬರ್. ಸ್ಪೋಟಕ್ಕೂ ಮುನ್ನ ರಾಮೇಶ್ವರಂ ಕೆಫೆ ರಸ್ತೆಯಲ್ಲಿಯೇ ಸಾಕಷ್ಟು ಬಾರಿ ಸಂಚರಿಸಿದ್ದ. ಕೆಫೆ ಮುಂದೆ ಇಳಿಯುವುದಕ್ಕೂ ಮುನ್ನ ಈ ಆರೋಪಿ 10 ರಿಂದ 15 ಬಾರಿ ಬಸ್ ಚೇಂಜ್ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ : BMRCL :ಹಳದಿ ಮಾರ್ಗದ ಮೊದಲ ಚಾಲಕ ರಹಿತ ರೈಲು : ಈ ಕುರಿತು ಮಾಹಿತಿ ಇಲ್ಲಿದೆ
ಪ್ರತಿ ಬಸ್ ಸ್ಟಾಪ್ ನಲ್ಲೂ ಬಸ್ ಚೇಂಜ್ :
ಸಿಸಿ ಕ್ಯಾಮರಾಗಳ ಪ್ರಕಾರ ಆರೋಪಿ ರಾಮೇಶ್ವರ ಕೆಫೆ ಹತ್ತಿರ KA-57-F-4517 ನಂಬರ್ ಬಸ್ ನಿಂದ ಇಳಿದಿದ್ದಾನೆ. ಇದು ಡಿಪೋ-25 ಕ್ಕೆ ಸೇರಿದ ಬಸ್ ಆಗಿದೆ. ಆದರೆ ಅದಕ್ಕೂ ಮುನ್ನ ಪ್ರತಿ ಬಸ್ ಸ್ಟಾಪ್ ನಲ್ಲೂ ಇಳಿದು ಬಸ್ ಚೇಂಜ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕ್ಯಾಮರಾಗಳಿಲ್ಲದ ಬಸ್ ಸ್ಟಾಪ್ ಗಳನ್ನೇ ನೋಡಿ ಇಳಿದಿದ್ದಾನೆ ಎನ್ನಲಾಗಿದೆ. ಎಲ್ಲಿ ಒಂದೇ ಬಾರಿ ಮೂರರಿಂದ ನಾಲ್ಕು ಬಸ್ ಬಂದಿದೆಯೋ ಅಲ್ಲಿ ಬಸ್ ಇಳಿದು ಬಸ್ ಚೇಂಜ್ ಮಾಡಿದ್ದಾನೆ.
ಮಾಸ್ಕ್ ಧರಿಸಿಯೇ ಸಂಚಾರ :
ತನ್ನ ಸುಳಿವು ಸಿಗುಬಾರದು ಎನ್ನುವ ಉದ್ದೇಶದಿಂದಲೇ ಸಾಕಷ್ಟು ಬಸ್ ಗಳನ್ನ ಚೇಂಜ್ ಮಾಡಿದ್ದಾನೆ ಎನ್ನಲಾಗಿದೆ. ಸಂಚಾರ ಮಾಡಿರುವ ಅಷ್ಟೂ ಜಗಾದಲ್ಲಿಯೂ ಮಾಸ್ಕ್ ಧರಿಸಿಕೊಂಡೇ ಇದ್ದ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಬಸ್ ನಲ್ಲಿ ಟಿಕೆಟ್ ತೆಗೆದುಕೊಂಡರೆ ತೊಂದರೆ ಆಗಬಹುದು ಎನ್ನುವ ಅನುಮಾನದಿಂದ ದಿನದ ಪಾಸ್ ತೆಗೆದುಕೊಂಡು ಸಂಚಾರ ಮಾಡಿದ್ದಾನೆ. ವೋಲ್ವೋ ಬಸ್ ನ ದಿನದ ಪಾಸ್ ತೆಗೆದುಕೊಂಡು ಎಲ್ಲಾ ಕಡೆ ಪಾಸ್ ತೋರಿಸಿ ಸಂಚಾರ ಮಾಡಿದ್ದಾನೆ.
ಇದನ್ನೂ ಓದಿ : ಕರ್ನಾಟಕದಲ್ಲಿ 3 ಇಎಸ್ ಐ ಆಸ್ಪತ್ರೆ ನಿರ್ಮಾಣಕ್ಕೆ ಇಎಸ್ ಐಸಿ ಅನುಮೋದನೆ
ಶರ್ಟ್ ಕೂಡಾ ಚೇಂಜ್ :
ರಮೇಶ್ವರ ಕೆಫೆ ಯಿಂದ ಕುಂದನಹಳ್ಲಿ ಕಾಲೊನಿ, ಐಟಿಪಿಯಲ್ ಮಾರ್ಗವಾಗಿ ಹಲವು ಬಸ್ ಗಳನ್ನ ಬದಲಾಯಿಸಿದ್ದಾನೆ. ಹೀಗೆ ಬಸ್ ಬದಲು ಮಾಡುತ್ತಿರುವಾಗ ಎರಡು ಕಡೆ ತನ್ನ ಶರ್ಟ್ ನ್ನು ಕೂಡಾ ಚೇಂಜ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಆರೋಪಿ ಸುಳಿವು ಸಿಗದೇ ಪೊಲೀಸ್ ಇಲಾಖೆ ತಲೆ ಕೆಡಿಸಿಕೊಳ್ಳುವಂತಾಗಿದೆ.
ಬಿಎಂಟಿಸಿ ಬಸ್ ಗಳಲ್ಲಿರುವ ಸಿಸಿ ಕ್ಯಾಮರಾಗಳನ್ನ ಒಂದಾದಾಗಿ ಪರಿಶೀಲನೆ ನಡೆಸಲಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.