ಬೆಂಗಳೂರು : ಕಲಬುರಗಿ ರಂಗಾಯಣದಿಂದ ಕಾಲೇಜು ಯುವರಂಗ ತರಬೇತಿ ಶಿಬಿರ ಹಾಗೂ ಕಾಲೇಜು ರಂಗೋತ್ಸವ ಏರ್ಪಡಿಸಲು ಅರ್ಜಿ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಯುವ ವಿದ್ಯಾರ್ಥಿಗಳಲ್ಲಿ ರಂಗಭೂಮಿ ಕುರಿತು ಆಸಕ್ತಿ ಮೂಡಿಸುವ ಉದ್ದೇಶದಿಂದ ಯುವರಂಗ ತರಬೇತಿ ಶಿಬಿರ ಹಾಗೂ ಕಾಲೇಜು ರಂಗೋತ್ಸವ ಆಯೋಜಿಸಲು ಕಲಬುರಗಿ ರಂಗಾಯಣವು ನಿರ್ಧರಿಸಿದೆ. ಈ ಯುವರಂಗ ತರಬೇತಿ ಶಿಬಿರದಲ್ಲಿ ಸಿದ್ಧವಾದ ನಾಟಕಗಳನ್ನು ಆಯಾ ಜಿಲ್ಲೆಯಲ್ಲಿ 3 ದಿನಗಳ ಕಾಲ ಕಾಲೇಜು ರಂಗೋತ್ಸವನ್ನು ಏರ್ಪಡಿಸಲಾಗುವುದು.


ಇದನ್ನೂ ಓದಿ: Budget 2022 : ಜನವರಿ 31 ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ!


ಕಾಲೇಜು ವಿದ್ಯಾರ್ಥಿಗಳಿಗೆ 20 ದಿನಗಳ ಕಾಲ ವಿಶೇಷ ನುರಿತ ರಂಗ ತಜ್ಞರಿಂದ ಯುವರಂಗ ತರಬೇತಿ ಶಿಬಿರ ವನ್ನು ಫೆಬ್ರವರಿ 09 ರಿಂದ 28 ರವರೆಗೆ ಏಪರ್ಡಿಸಲಾಗುವುದು. ತರಬೇತಿಯ ನಂತರ ಈ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನವನ್ನು ಮಾರ್ಚ್ ಮೊದಲ ವಾರದಲ್ಲಿ ಏರ್ಪಡಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳ ಮನೋವಿಕಾಸ ಹಾಗೂ ಶೈಕ್ಷಣಿಕ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಈ ರಂಗ ತರಬೇತಿ ಸಹಕಾರಿಯಾಗಲಿದ್ದು, ತಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಬಯಸುವ ಕಾಲೇಜುಗಳ ಮುಖ್ಯಸ್ಥರು ನಿಗದಿತ ಅರ್ಜಿ ನಮೂನೆಯಲ್ಲಿ ಫೆ. 05ರ ಸಾಯಂಕಾಲ 05-30 ಗಂಟೆಯೊಳಗಾಗಿ ಎಲ್ಲಾ ಅಗತ್ಯ ಮಾಹಿತಿಗಳೊಂದಿಗೆ ರಂಗಾಯಣಕ್ಕೆ ಅರ್ಜಿಸಲ್ಲಿಸಬಹುದಾಗಿದೆ. ನಿಬಂಧನೆಗಳುಳ್ಳ ಅರ್ಜಿ ನಮೂನೆಯನ್ನು ಕಲಬುರಗಿ ರಂಗಾಯಣ ಕಛೇರಿಗೆ ಖುದ್ದಾಗಿ ಅಥವಾ ವೆಬಸೈಟ್  www.rangayanakalaburagi.in ಮೂಲಕ ಪಡೆದುಕೊಳ್ಳಬಹುದಾಗಿದೆ.


ಇದನ್ನೂ ಓದಿ: ಕೊರೊನಾ ಪ್ರಕರಣಗಳ ಹೆಚ್ಚಳ, ಕೇಂದ್ರ ಸರ್ಕಾರ ಹೇಳಿದ್ದೇನು?


ಭರ್ತಿ ಮಾಡಿದ ಅರ್ಜಿಯನ್ನು ಆಡಳಿತಾಧಿಕಾರಿಗಳು, ರಂಗಾಯಣ ಕಲಬುರಗಿ, ಡಾ. ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಛಯ, ಸೇಡಂ-ಶಹಾಬಾದ ವರ್ತುಲ ರಸ್ತೆ, ಕಲಬುರಗಿ-585105, ದೂ.ಸಂ; 08472-227735, ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್  rangayanakalaburgi@gmail.com ಮುಖಾಂತರ ಸಲ್ಲಿಸಬಹುದಾಗಿದೆ. 


ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲೆಯ ಜಿಲ್ಲಾ ಸಂಚಾಲಕರಾದ ಲಕ್ಷ್ಮಣ ಪೀರ್‌ಗಾರ್ ಮೊಬೈಲ್ ಸಂಖ್ಯೆ 9663974163, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಲಬುರಗಿ ರಂಗಾಯಣ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.