ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಉಮೇಶ್ ಜಾಧವ್
![ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಉಮೇಶ್ ಜಾಧವ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಉಮೇಶ್ ಜಾಧವ್](https://kannada.cdn.zeenews.com/kannada/sites/default/files/styles/zm_500x286/public/2019/03/06/175310-umesh-jadav.png?itok=oHxLRaLV)
ಇತ್ತೀಚಿಗಷ್ಟೇ ತಮ್ಮ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ಡಾ. ಉಮೇಶ್ ಜಾಧವ್ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರವರು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿಎಸ್.ಯಡಿಯೂರಪ್ಪನವರ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಈ ವೇಳೆ ವಿಧಾನ ಸಭೆ ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಗೋವಿಂದ್ ಕಾರಜೋಳ, ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ್ ಹಾಗೂ ಹಲವು ನಾಯಕರು ಉಪಸ್ಥಿತರಿದ್ದರು.