ಕಲಬುರಗಿ: ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಮಾರ್ಗದರ್ಶನ ಹಾಗೂ ಡಾ. ದೊಡ್ಡಪ್ಪ ಅಪ್ಪಾ ಅವರ ಸಹಕಾರದೊಂದಿಗೆ ಕಲಬುರಗಿ ಶರಣನಗರದ ಶರಣಬಸವೇಶ್ವರ ಅಂತರವಾಣಿ ಸಮುದಾಯ ರೇಡಿಯೊ ಕೇಂದ್ರದ 90.8 ಎಮ್‍ಎಚ್2 ದಿಂದ ಎಸ್.ಎಸ್.ಎಲ್.ಸಿ. (SSLC) ತರಗತಿ ವಿದ್ಯಾರ್ಥಿಗಳಿಗಾಗಿ ಪುನರ್ ಮನನ ರೇಡಿಯೋ (Radio) ಪಾಠಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರು 2020ರ ಏಪ್ರಿಲ್ 20 ರಿಂದ 25 ರವರೆಗೆ ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ರೇಡಿಯೊ ಪಾಠಗಳನ್ನು ಪ್ರಸಾರ ಮಾಡಲಾಗುತ್ತದೆ. ಪ್ರತಿ ವಿಷಯಕ್ಕೆ ಇಬ್ಬರಂತೆ ಒಟ್ಟು 12 ಜನ ಸಂಪನ್ಮೂಲ ಶಿಕ್ಷಕರು ಭಾಗವಹಿಸಿ ಪಾಠ ಮಾಡಲಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ಅಥವಾ ರೇಡಿಯೋ ಬಳಸಿ ಈ ಪಾಠಗಳನ್ನು ಕೇಳಬಹುದಾಗಿದೆ. ವಿಷಯ, ದಿನಾಂಕ ಹಾಗೂ ಪಾಠ ಮಾಡುವ ಸಂಪನ್ಮೂಲ ಶಿಕ್ಷಕರ ವಿವರ ಕೆಳಕಂಡಂತೆ ಇರುತ್ತದೆ.


ದ್ವಿತೀಯ ಪಿಯುಸಿ ಪರೀಕ್ಷೆ ಕುರಿತಂತೆ ಶಿಕ್ಷಣ ಸಚಿವರು ಹೇಳಿದ್ದೇನು?


ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಏಪ್ರಿಲ್ 20ರಂದು ಆಳಂದ ತಾಲೂಕಿನ ಗೋಳಾ (ಬಿ) ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಶಿವಲಿಂಗಪ್ಪ ಕೊಡ್ಲಿ ಹಾಗೂ ಚಿಂಚೋಳಿ ತಾಲೂಕಿನ ರಟಕಲ್ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಬಂದೇನವಾಜ್ ಹಾಗೂ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಏಪ್ರಿಲ್ 21ರಂದು ಆಳಂದ ತಾಲೂಕಿನ ನೆಲ್ಲೂರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಡಿ.ಎಸ್. ಪಾಟೀಲ ಹಾಗೂ ಕಲಬುರಗಿ ದಕ್ಷಿಣ ವಲಯದ ಪ್ರೌಢಶಾಲೆಯ ಸಹಶಿಕ್ಷಕ ಜಿ.ಜಿ. ವಣಕ್ಯಾಳ ಪಾಠ ಮಾಡಲಿದ್ದಾರೆ.


ಕೊರೊನಾಗೆ ಕರ್ನಾಟಕ ತತ್ತರ: SSLC-PUC ಪರೀಕ್ಷೆ ಮುಂದೂಡಿಕೆ


ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಏಪ್ರಿಲ್ 22ರಂದು ಕಲಬುರಗಿ ದಕ್ಷಿಣ ವಲಯದ ನಂದೂರ (ಕೆ) ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಸಂತೋಷ ಕುಲಕರ್ಣಿ ಹಾಗೂ ಚಿತ್ತಾಪುರ ತಾಲೂಕಿನ ಮುಗಳನಾಗಾಂವ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಆನಂದ ಕುಲಕರ್ಣಿ ಹಾಗೂ ಇಂಗ್ಲೀಷ್ ವಿಷಯಕ್ಕೆ ಸಂಬಂಧಿಸಿದಂತೆ ಏಪ್ರಿಲ್ 23ರಂದು ಆಳಂದ ತಾಲೂಕಿನ ಸುಂಟನೂರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಮಾಳಯ್ಯ ಹಿರೇಮಠ ಹಾಗೂ ಜೇವರ್ಗಿ ತಾಲೂಕಿನ ನೆಲೋಗಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ದೇವಿಂದ್ರಪ್ಪ ಬೋಧಿಸಲಿದ್ದಾರೆ.


ಏಪ್ರಿಲ್ 22, 23ರಂದು ನಡೆಸಬೇಕಿದ್ದ CET ಪರೀಕ್ಷೆ ಮುಂದೂಡಿಕೆ


ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಏಪ್ರಿಲ್ 24ರಂದು ಆಳಂದ ತಾಲೂಕಿನ ಧಂಗಾಪುರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ರಾಮಪ್ಪ ಎನ್ ಹಾಗೂ ಜೇವರ್ಗಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿ.ಆರ್.ಸಿ. ಸಂತೋಷ ಹೂಗಾರ್ ಹಾಗೂ ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಏಪ್ರಿಲ್ 25ರಂದು ಜೇವರ್ಗಿ ತಾಲೂಕಿನ ಕೂಡಿದರ್ಗಾ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ರವಿ ಜಾಧವ ಹಾಗೂ ಚಿತ್ತಾಪುರ ತಾಲೂಕಿನ ಮಾಲಗತ್ತಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಕುಮಾರಿ ಪ್ರತಿಭಾ ಠಾಕೂರ 10ನೇ ತರಗತಿ ವಿದ್ಯಾರ್ಥಿಗಳಿಗೆ ಪುನರ್ ಮನನಕ್ಕೆ ಸಹಕರಿಸಲಿದ್ದಾರೆ.