ಬೆಂಗಳೂರು: 545 ಹುದ್ದೆಗಳ ಪಿ ಎಸ್‌ಐ ಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಸಾಬೀತಾದ ಬೆನ್ನಲ್ಲೆ 52 ಜನ ಬಂಧಿತರಲ್ಲಿ ಅವರೆಲ್ಲರನ್ನು ಸಿಐಡಿ ಶಾಶ್ವತವಾಗಿ ಡಿಬಾರ್ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Udyoga Mela: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ನಾಳೆ ಉದ್ಯೋಗ ಮೇಳ


ಈಗ ಅವರು ಪೊಲೀಸ್ ಇಲಾಖೆಯ ಯಾವುದೇ ಪರೀಕ್ಷೆಯಲ್ಲಿ ಭಾಗಿಯಾಗದಂತೆ ಆದೇಶ ಹೊರಡಿಸಿದೆ.ಜಾಗೃತ್, ಗಜೇಂದ್ರ, ಸೋಮನಾಥ್ ಮಲ್ಲಿಕಾರ್ಜುನಯ್ಯ ಹಿರೇಮಠ ರಘವೀರ್, ಚೇತನ್ ಕುಮಾರ್, ವೆಂಕಟೇಶ್ ಗೌಡ, ಮನೋಜ್ ಮನುಕುಮಾರ್, ಸಿದ್ದಲಿಂಗಪ್ಪ, ಮಮತೇಶ್ ಗೌಡ, ಯಶವಂತಗೌಡ ನಾರಾಯಣ್, ನಾಗೇಶ್ ಗೌಡ, ಮಧು ಸೇರಿದಂತೆ 52 ಜನರನ್ನು ಡಿಬಾರ್ ಮಾಡಿದೆ.


ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ


ಆರೋಪಿಗಳ ವಿರುದ್ಧ ವಿವಿಧೆಡೆ ಎಫ್ಐಆರ್ ದೂರು ದಾಖಲಾದ ಹಿನ್ನೆಲೆಯಲ್ಲಿ ಸಿಐಡಿ ತನಿಖಾ ವರದಿಯನ್ನು ಆಧರಿಸಿ ಡಿಜಿಪಿ ಕಮಲ್ ಪಂತ್ 1977ರ ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮ-20ರ ಅನ್ವಯ ಕ್ರಮ ತೆಗೆದುಕೊಂಡಿದ್ದಾರೆ.ಈಗ ಅವರು ಪೋಲಿಸ್ ಇಲಾಖೆಯ ಪೊಲೀಸ್ ಇಲಾಖೆಯ ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂದು ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.