Karnataka High Court Verdict: ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಲು ನಿರಾಕರಿಸಿದ ಪುರುಷ ಮತ್ತು ಆತನ ಪೋಷಕರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಪೀಠವು ಪರಿಗಣಿಸಿ ಪತಿ ದೈಹಿಕ ಸಂಬಂಧ ನಿರಾಕರಿಸುವುದು ಹಿಂದೂ ವಿವಾಹ ಕಾಯ್ದೆ-1955ರ ಪ್ರಕಾರ ಕ್ರೌರ್ಯವಾಗಿದೆ, ಆದರೆ ಇದು ಐಪಿಸಿ ಸೆಕ್ಷನ್ 489ಎ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಮಾಹಿತಿಯ ಪ್ರಕಾರ, ಮಹಿಳೆಯ ಪತಿ ಐಪಿಸಿಯ ಸೆಕ್ಷನ್ 498 ಎ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ತನ್ನ ಮತ್ತು ತನ್ನ ಹೆತ್ತವರ ವಿರುದ್ಧ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ಅನ್ನು ಪ್ರಶ್ನಿಸಿದ್ದರು. ಅರ್ಜಿದಾರರ ವಿರುದ್ಧದ ಏಕೈಕ ಆರೋಪವೆಂದರೆ ಪ್ರೀತಿ ಎಂದರೆ ದೈಹಿಕ ಸಂಬಂಧವನ್ನು ಹೊಂದುವುದಲ್ಲ ಮತ್ತು ಅದು ಆತ್ಮದೊಂದಿಗೆ ಆತ್ಮದ ಮಿಲನವಾಗಬೇಕು ಅಂಬುದರ ಮೇಲೆ ಅವರ ನಂಬಿಕೆ ಎಂದು ಪೀಠ ಹೇಳಿದೆ.


ಪತಿ ತನ್ನ ಪತ್ನಿಯೊಂದಿಗೆ ದೈಹಿಕ ಸಂಬಂಧ ಹೊಂದಲು ಎಂದಿಗೂ ಉದ್ದೇಶಿಸಿಲ್ಲ ಎಂದು ಪೀಠ ಹೇಳಿದೆ. ವಿವಾಹವನ್ನು ನೆರವೇರಿಸದಿರುವುದು ನಿಸ್ಸಂದೇಹವಾಗಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12(1)(ಎ) ಅಡಿಯಲ್ಲಿ ಕ್ರೌರ್ಯ ಎಂದು ಬರುತ್ತದೆ. ಆದರೆ, ಇದು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಬರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.


ಇದನ್ನೂ ಓದಿ-New RAW Chief: ಭಾರತದ ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ರವಿ ಸಿನ್ಹಾ ಯಾರು?


ಪತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದ್ದು, ಇದು ಕಾನೂನಿನ ದುರುಪಯೋಗವಾಗುತ್ತದೆ. ಮಾಹಿತಿಯ ಪ್ರಕಾರ, ಇಬ್ಬರೂ ಡಿಸೆಂಬರ್ 18, 2019 ರಂದು ಮದುವೆಯಾಗಿದ್ದರು ಮತ್ತು ದೂರುದಾರರ ಪತ್ನಿ ಕೇವಲ 28 ದಿನಗಳ ಕಾಲ ಗಂಡನ ಮನೆಯಲ್ಲಿದ್ದರು.


ಇದನ್ನೂ ಓದಿ-Geeta Press ಗೆ ಗಾಂಧಿ ಸಮ್ಮಾನ ಪುರಸ್ಕಾರ, ನಿರ್ಣಯ ಸಾವರ್ಕರ್-ಗೋಡ್ಸೆಗೆ ಪ್ರಶಸ್ತಿ ನೀಡಿದಂತೆ ಎಂದ ಕಾಂಗ್ರೆಸ್


ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಐಪಿಸಿಯ ಸೆಕ್ಷನ್ 498 ಎ ಅಡಿಯಲ್ಲಿ ಫೆಬ್ರವರಿ 5, 2020 ರಂದು ಪತ್ನಿ ಪೊಲೀಸ್ ದೂರು ದಾಖಲಿಸಿದ್ದರು. ಮದುವೆಯ ನಂತರ ಯಾವುದೇ ಲೈಂಗಿಕ ಸಂಬಂಧವಿಲ್ಲ ಎಂದು ಆರೋಪಿಸಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12(1)(ಎ) ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪತ್ನಿ ತನ್ನ ಪತಿ ಮತ್ತು ಆತನ ಪೋಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ