ಬೆಂಗಳೂರು : ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದೆ (SSLC Exam). ರಾಜ್ಯಾದ್ಯಂತ  ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.  ಈ ಮಧ್ಯೆ, ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿ ಎಂದು ಉಡುಪಿಯ ಧಾರ್ಮಿಕ ಮುಖಂಡ ರೆಹಮಾನ್ ರಜ್ವೀ ಕರೆ ನೀಡಿದ್ದಾರೆ. ಉಲಾಮಾಗಳು ಖಾಜಿಗಳು ಹೇಳಿದಂತೆ ಶೈಕ್ಷಣಿಕ್ಕೂ ಜೀವನಕ್ಕೂ ಮಹತ್ವ ಕೊಡಬೇಕು ಎಂದು ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ವರ್ಷ ಶೈಕ್ಷಣಿಕ ವರ್ಷ ಮುಗಿದಿದ್ದು, ಪರೀಕ್ಷೆಗಳು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಹೆತ್ತವರು ಮಕ್ಕಳ ಭವಿಷ್ಯದ ಬಗ್ಗೆ ಗಮನ ಹರಿಸಬೇಕು ಎಂದು ಉಡುಪಿಯ ಧಾರ್ಮಿಕ ಮುಖಂಡ ರೆಹಮಾನ್ ರಜ್ವೀ ಕರೆ ನೀಡಿದ್ದಾರೆ (SSLC Exam).  ದೂರದೃಷ್ಟಿಯನ್ನು ಇಟ್ಟುಕೊಂಡು  ನಿರ್ಧಾರ ಮಾಡಬೇಕು ಎಂದವರು ಹೇಳಿದ್ದಾರೆ. ಹಿಜಬ್ (Hijab)ವಿಚಾರ ಸುಪ್ರೀಂ ಕೋರ್ಟ್ (ಮೆಟ್ಟಿಲೇರಿದ್ದು, ಎಲ್ಲವೂ ಪೂರಕವಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ : "ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು"


ಇನ್ನು S.S.L.C ಪರೀಕ್ಷೆ ಹಿನ್ನೆಲೆಯಲ್ಲಿ ಬುರ್ಖಾ ,ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ಪರೀಕ್ಷೆಗೆ   ತೆರಳುತ್ತಿರುವುದು ಕೂಡಾ ಕೆಲವೆಡೆ ಕಂಡು ಬಂದಿದೆ (Hijab row). ಚಿಕ್ಕಮಗಳೂರಿನ  MES ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರದ‌ ಗೇಟ್ ಬಳಿ ಬುರ್ಖಾ ,ಹಿಜಾಬ್ ತೆಗೆಡು ವಿದ್ಯಾರ್ಥಿನಿಯರು ಪರೀಕ್ಷೆಗೆ ತೆರಳಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯರಿಗೆ ಶಾಲಾ ಶಿಕ್ಷಣಕರು ಮಾಹಿತಿ ನೀಡುತ್ತಿರುವುದು ಕೂಡಾ ಗಮನಕ್ಕೆ ಬಂದಿದೆ. ಪರೀಕ್ಷಾ ಕೇಂದ್ರದ‌ ಬಳಿ ಪೊಲೀಸ್ ಬದೋಬಸ್ತ್ ಕೈಗೊಳ್ಳಲಾಗಿದೆ . 


ಇದನ್ನೂ ಓದಿ : 10ನೇ ತರಗತಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ : ಬಿ.ಸಿ. ನಾಗೇಶ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.