ಧಾರವಾಡ:  ಹುಬ್ಬಳ್ಳಿಯ ಗೋಕುಲ ರಸ್ತೆಯ ಮಂಜುನಾಥ ನಗರದ ನಿವಾಸಿ ಶಾರದಾ ಕೈರವಾಡಗಿರವರು ಹುಬ್ಬಳ್ಳಿಯ ರೇಣುಕಾ ಲಕ್ಷ್ಮೀ ಅಸೋಸಿಯೇಟ್ಸ್ ರವರು ನಾಗಶೆಟ್ಟಿಕೊಪ್ಪದಲ್ಲಿ ನಿರ್ಮಿಸುತ್ತಿದ್ದ ಗಣೇಶ ಟೌನ್‍ಶಿಪ್‍ನಲ್ಲಿ ರೂ.14,40,000/-ಗೆ 2400/- ಚ.ಅ.ಯ ಪ್ಲಾಟನ್ನು ಖರೀದಿಸಿದ್ದರು. ಈ ಬಗ್ಗೆ ದೂರುದಾರಳು ರೂ. 5,00,000/- ಅಡವಾನ್ಸ್ ಕೊಟ್ಟಿದ್ದರು.


COMMERCIAL BREAK
SCROLL TO CONTINUE READING

ಆ ಹಣ ಪಡೆದು ಎದುರುದಾರ ರೇಣುಕಾ ಲಕ್ಷ್ಮೀ ಅಸೋಸಿಯೇಟ್ಸ್‍ನ ಮಾಲೀಕ ಆನಂದ ಹಬೀಬ ದೂರುದಾರಳಿಗೆ ದಿ:22/01/2018 ರಂದುಖರೀದಿ ಕರಾರು ಪತ್ರ ಬರೆದುಕೊಟ್ಟಿದ್ದರು. ಹಲವಾರು ವರ್ಷಗಳು ಕಳೆದರೂ ಎದುರುದಾರರು ಸೈಟ್‍ಖರೀದಿ ಹಾಕಿಕೊಟ್ಟಿಲ್ಲ ಅಥವಾ ತನಗೆ ಹಣ ವಾಪಸ್ಸುಕೊಟ್ಟಿಲ್ಲ ಅಂತಾ ಹೇಳಿ ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:29/09/2023 ರಂದು ಈ ದೂರನ್ನು ಸಲ್ಲಿಸಿದ್ದರು.


ಇದನ್ನೂ ಓದಿ: ಕಡೆಗಣಿಸು, ನಿರ್ಲಕ್ಷಿಸು, ನಿದ್ರಿಸು, ಮತ್ತದನ್ನೇ ಪುನರಾವರ್ತಿಸು; ಇದುವೇ ಪ್ರಧಾನಿ ಮೋದಿ ಮಂತ್ರ!


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಕ.ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ನಿಗದಿತಅವದಿಯಲ್ಲಿ ಶ್ರೀ. ಗಣೇಶ ಲೇಔಟ್ ನಿರ್ಮಿಸಿ ಅದರಲ್ಲಿದೂರುದಾರರಿಗೆ ಮಾರಾಟ ಮಾಡಿದ ಪ್ಲಾಟ ನಂ.8ರ ಖರೀದಿ ಪತ್ರ ನೋಂದಾಯಿಸಿಕೊಡುವುದು ಎದುರುದಾರರೇಣುಕಾ ಲಕ್ಷ್ಮೀ ಅಸೋಸಿಯೇಟ್ಸ್‍ರವರ ಕರ್ತವ್ಯವಾಗಿದೆ. ಆದರೆ 6-7 ವರ್ಷ ಕಳೆದರೂ ಎದುರುದಾರ ಆನಂದ ಹಬೀಬ ರವರುಲೇಔಟ ನಿರ್ಮಾಣ ಮಾಡಿಲ್ಲ. ದೂರುದಾರರಿಗೆ ಪ್ಲಾಟನ್ನು ಖರೀದಿ ಮಾಡಿಕೊಟ್ಟಿಲ್ಲ. ಅಂತಹ ಅವರ ನಡಾವಳಿಕೆ ಅನುಚಿತ ವ್ಯಾಪಾರದ ಪದ್ಧತಿ ಹಾಗೂ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.


ಇದನ್ನೂ ಓದಿ: ರವಿ ಬಸ್ರೂರು ನಿರ್ದೇಶನದ ಕಡಲ್ ಸಿನಿಮಾ ಜ.೧೯ಕ್ಕೆ ಬಿಡುಗಡೆ


ದೂರುದಾರ ರಿಂದ ಮುಂಗಡವಾಗಿ ಪಡೆದರೂ. 5 ಲಕ್ಷದಲ್ಲಿ ರೂ.1 ಲಕ್ಷಎದುರುದಾರ ಹಿಂದಿರುಗಿಸಿದ್ದು ಉಳಿದ ರೂ. 4 ಲಕ್ಷಗಳ ಮೇಲೆ ದಿ:22/01/2018 ರಿಂದ ಪೂರ್ತಿ ಹಣ ಸಂದಾಯ ವಾಗುವವರೆಗೆ ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ಹಿಂದಿರುಗಿಸುವಂತೆ ಆಯೋಗ ಎದುರುದಾರ ಆನಂದ ಹಬೀಬರವರಿಗೆ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಮತ್ತು ಪ್ರಕರಣದಖರ್ಚು ವೆಚ್ಚ ಅಂತಾ ರೂ.10,000/- ಎದುರುದಾರರಿಗೆ ಕೊಡಲು ಆದೇಶಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.